ಮಂಗಳೂರು

ಮಂಗಳೂರು: ಗೋವಿಂದದಾಸ ಕಾಲೇಜು ಸುರತ್ಕಲ್‌ನಲ್ಲಿ “ಸಿರಿಚಾವಡಿ ಪುರಸ್ಕಾರ” ಕಾರ್ಯಕ್ರಮ

ಮಂಗಳೂರು: ಅಕಾಡೆಮಿವತಿಯಿಂದ ಅಕ್ಟೋಬರ್ ೧೩ ರಂದು ಗೋವಿಂದದಾಸ ಕಾಲೇಜು ಸುರತ್ಕಲ್‌ನಲ್ಲಿ “ಸಿರಿಚಾವಡಿ ಪುರಸ್ಕಾರ” ಕಾರ್ಯಕ್ರಮ ನಡೆಯಲಿದೆ.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಅಕಾಡೆಮಿವತಿಯಿಂದ ಗೌರವಿಸಲಾಗುವುದು. ಕಾರ್ಯಕ್ರಮವನ್ನು ಶ್ರೀ ಶ್ರೀರಂಗ ಹೊಸಬೆಟ್ಟು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್‌ಸಾರ್ ವಹಿಸಿಕೊಳ್ಳಲಿದ್ದಾರೆ.

ಸನ್ಮಾನ್ಯ ಶಾಸಕರಾದ ಡಾ| ವೈ. ಭರತ್ ಶೆಟ್ಟಿ ವಿವಿಧ ಕ್ಷೇತ್ರದ ಸಾಧಕರನ್ನು ಪುರಸ್ಕರಿಸಲಿದ್ದಾರೆ. ಹಾಗೂ ಅಕಾಡೆಮಿ ವತಿಯಿಂದ ಕೊಡಲ್ಪಡುವ ಅಕಾಡೆಮಿ ಪ್ರಕಟಿತ ಪುಸ್ತಕಗಳ ತುಳು ಪುಸ್ತಕ ಭಂಡಾರವನ್ನು ರೊ. ಅಶೋಕ್ ಎನ್ ಸುರತ್ಕಲ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಾರ್ಪೋರೇಟರ್, ವರುಣ್ ಚೌಟ, ಯಕ್ಷಗಾನ ಅಕಾಡೆಮಿ ಸದಸ್ಯ ಶ್ರೀ ಮಾಧವ ಭಂಡಾರಿ, ಕುಳಾಯಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಶ್ರೀ ಸುಧಾಕರ ಪೂಂಜ, ಸುರತ್ಕಲ್ ಕುಲಾಲ ಸಂಘದ ಅಧ್ಯಕ್ಷ ಮೋಹನ್ ಐ ಮೂಲ್ಯ, ಕುಳಾಯಿ, ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷ ಶ್ರೀ ಗೋಪಾಲ ಬಂಗೇರ ಕೆ. ಅಗರಿ ಎಂಟರ್ಪ್ರೈಸಸ್ ನ ಮಾಲಕರಾದ ಅಗರಿ ಶ್ರೀ ರಾಘವೇಂದ್ರ ರಾವ್, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೃಷ್ಣಮೂರ್ತಿ ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕ ಅಕಾಡೆಮಿ ಸದಸ್ಯರಾದ ನಾಗೇಶ್ ಕುಲಾಲ್ ಭಾಗವಹಿಸಲಿದ್ದಾರೆ.

ಸಿರಿಚಾವಡಿ ಪುರಸ್ಕಾರ

ಸಿರಿಚಾವಡಿ ತಮ್ಮನ ಪುರಸ್ಕಾರ- ಶ್ರೀ ಉಮೇಶ್ ಎಂ ಕುಲಾಲ್, ಸಿರಿಚಾವಡಿ ಬಾಲಪುರಸ್ಕಾರ- ಬೇಬಿ ಮಂಜೂಷಾ, ಸಿರಿಚಾವಡಿ ಯುವ ಸಾಧಕ ಪುರಸ್ಕಾರ- ಶ್ರೀ ವಿನೋದ್ ಶೆಟ್ಟಿ, ಸಿರಿಚಾವಡಿ ಮಾಧ್ಯಮ ಪುರಸ್ಕಾರ- ಶ್ರೀ ಪರಮಾನಂದ ಸಾಲ್ಯಾನ್ ಸಸಿಹಿತ್ಲು, ಸಿರಿಚಾವಡಿ ಸಂಘಟನಾ ಪುರಸ್ಕಾರ – ರೋಟರಿ ಕ್ಲಬ್ ಬೈಕಂಪಾಡಿ.

Sneha Gowda

Recent Posts

ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ಗೆ ಎನ್‌ ಶಶಿಕುಮಾ‌ರ್ ನೇಮಕ ಸಾಧ್ಯತೆ

ಅವಳಿ ನಗರದಲ್ಲಿ ಹೆಚ್ಚುತ್ತಿರುವ ಕ್ರೈಂ ರೇಟ್ ಕಡಿವಾಣ ಹಾಕುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನ‌ರ್ ರೇಣುಕಾಸುಕುಮಾರ ಅವರನ್ನು ಬದಲಾವಣೆ ಮಾಡಬೇಕು ಅಂತ…

12 seconds ago

ಜರ್ಮಿನಿಯಿಂದ ಲಂಡನ್‌ಗೆ ಹಾರಿದ ಪ್ರಜ್ವಲ್​ ರೇವಣ್ಣ

ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ಹೋಗಿದ್ದು, ಇಲ್ಲಿಯವರೆಗು ಜರ್ಮನಿಯಲ್ಲಿದ್ದಾರೆ ಎಂದು…

21 mins ago

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ

ಮುಂಬಯಿಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

44 mins ago

ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: 10 ಮಂದಿ ಸಜೀವ ದಹನ

ಬಸ್‌ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ  ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ…

60 mins ago

11 ತಿಂಗಳಿನಲ್ಲಿ ಬರೋಬ್ಬರಿ 5.38 ಕೋಟಿ ದಂಡ ವಸೂಲಿ ಮಾಡಿದ ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್‌ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…

1 hour ago

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

2 hours ago