Categories: ಮಂಗಳೂರು

ಮಂಗಳೂರಿಗೆ ಇನ್ನು 50 ದಿನಕ್ಕಷ್ಟೇ ನೀರು, ಡ್ಯಾಂ ನಲ್ಲಿ ಇಳಿಕೆಯಾದ ನೀರಿನ ಮಟ್ಟ

ಮಂಗಳೂರು: ನಗರಕ್ಕೆ ನೀರು ಪೂರೈಕೆ ಮಾಡುವ ವೆಂಟೆಡ್ ಡ್ಯಾಂ ನಲ್ಲಿ ನೀರು ಸತತ ಇಳಿಕೆಯಾಗಿದ್ದು, ಶುಕ್ರವಾರದಂದು ನೀರಿನ ಮಟ್ಟ 5.85 ಮೀಟರ್ ನಷ್ಟಿತ್ತು. ಇದು ಕಳೆದ ನಾಲ್ಕು ವರ್ಷದಲ್ಲೇ ಅತ್ಯಂತ ಕಡಿಮೆ ನೀರಿನ ಪ್ರಮಾಣ ಎಂದು ಹೇಳಲಾಗಿದೆ. ಇದು ಮುಂದೆ 50ರಿಂದ 55 ದಿನಗಳವರೆಗಷ್ಟೇ ನೀರು ಪೂರೈಸುವಷ್ಟಿದೆ. ಹಾಗೊಂದು ವೇಳೆ, ಬೇಸಗೆಯಲ್ಲಿ ಮಳೆ ಬಾರದಿದ್ದರೆ ಮಂಗಳೂರಿಗೆ ನೀರಿನ ಬರ ಕಾಡಲಿದೆ. ಈ ಸಮಸ್ಯೆಯನ್ನು ಸೂಕ್ತವಾಗಿ ನಿರ್ವಹಿಸುವ ಬಗ್ಗೆ ಮಹಾನಗರ ಪಾಲಿಕೆ ಯೋಜಿಸಬೇಕಿದೆ.

ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಒಳಹರಿವು ಒಂದೇ ಸವನೆ ಕಡಿಮೆಯಾಗಿದ್ದು, ಏಪ್ರಿಲ್ ತಿಂಗಳಾಂತ್ಯದೊಳಗೆ ಬೇಸಿಗೆ ಮಳೆ ಬಾರದಿದ್ದರೆ ನಗರದಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ. ಪ್ರಸ್ತುತ ಡ್ಯಾಂನಲ್ಲಿ ಶೇಖರಣೆಯಾಗಿರುವ ನೀರು 50ರಿಂದ 55 ದಿನಕ್ಕಷ್ಟೇ ಪೂರೈಕೆಯಾಗಬಹುದಾಗಿದೆ.

ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಶುಕ್ರವಾರ ಸಂಜೆಯ ವೇಳೆಗೆ ನೀರಿನ ಮಟ್ಟ 5.85 ಮೀಟರ್ ಗೆ ಇಳಿಕೆಯಾಗಿದೆ. ಮಹಾನಗರಪಾಲಿಕೆ ಆಡಳಿತ ಮತ್ತು ನಗರದ ಜನತೆ ಈಗಲೇ ಮುಂದಾಲೋಚನೆ ಮಾಡದಿದ್ದರೆ 2019ರಲ್ಲಿ ಆದ ನೀರಿನ ಸಮಸ್ಯೆ ಈ ಬಾರಿಯೂ ನಗರವನ್ನು ಬಿಗಡಾಯಿಸಲಿದೆ.

ತುಂಬೆ ವೆಂಟೆಡ್ ಡ್ಯಾಂನಲ್ಲಿ ಶೇಖರಣೆಯಾಗುತ್ತಿರುವ ನೀರಿನ ಪ್ರಮಾಣ ಹೋಲಿಕೆ ಮಾಡಿದರೆ 4 ವರ್ಷದಲ್ಲೇ ಅತ್ಯಧಿಕ ಇಳಿಕೆಯಾಗಿದೆ. 2020ರ ಮಾ.3ರಂದು 6 ಮೀಟರ್ ನೀರಿದ್ದರೆ, ಆ ಬಳಿಕ ಪ್ರತಿವರ್ಷ ಈ ದಿನಕ್ಕೆ 6 ಮೀಟರ್ ನೀರಿತ್ತು. ಈ ಬಾರಿ ಮಾ.3ಕ್ಕೆ 5.85 ಮೀಟರ್‌ಗೆ ಇಳಿಕೆಯಾಗಿದ್ದು ಇದು 4 ವರ್ಷದಲ್ಲೇ ಅತೀ ಕಡಿಮೆಯಾಗಿದೆ. 2019ರ ನೀರಿನ ಬಳಕೆಯನ್ನು ಹೋಲಿಸಿದರೆ ಈ ವರ್ಷಕ್ಕೆ ಶೇ.12ರಷ್ಟು ನೀರಿನ ಬೇಡಿಕೆ ಹೆಚ್ಚಳವಾಗಿದೆ. ಇದರಿಂದ ಈ ಬಾರಿ ಮತ್ತಷ್ಟು ಬೇಗ ನೀರಿನ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಅಧಿಕಾರಿಗಳು.

ತುಂಬೆ ವೆಂಟೆಡ್ ಡ್ಯಾಂಗೆ ಒಳಹರಿವು ಕಡಿಮೆಯಾದ ಕಾರಣ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಹೊಸ ಕೈಗಾರಿಕೆ, ಕಟ್ಟಡ ಕಾಮಗಾರಿಗಳಿಗೆ ಹೊಸ ನೀರಿನ ಸಂಪರ್ಕ ನಿಲ್ಲಿಸಲಾಗಿದೆ. ಈಗ ಇರುವ ಕೈಗಾರಿಕೆಗಳಿಗೆ ರೇಷನಿಂಗ್ ಮಾಡಲು ಸೂಚನೆ ನೀಡಲಾಗಿದೆ.

ಎಂಆರ್‌ನಲ್ಲಿ ಪ್ರಸ್ತುತ 18.9(ಸಮುದ್ರ ಮಟ್ಟಕ್ಕಿಂತ ಮೇಲೆ) ಮೀ. ನೀರು ಇದ್ದು, ಇದರಲ್ಲಿ 14.5 ಮೀ. ಮಂಗಳೂರು ನಗರಕ್ಕೆ ಬಳಸಬಹುದು. ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿ, ಅನಿವಾರ್ಯವಾದರೆ ಮಾತ್ರ ಎಎಂಆರ್ ಡ್ಯಾಂನ ನೀರು ಬಳಕೆ ಮಾಡಲು ನಿರ್ಧರಿಸಲಾಗಿದೆ.

ಪ್ರಸ್ತುತ ಒಟ್ಟು 18 ಎಂಜಿಡಿ ನೀರು ಕೈಗಾರಿಕೆಗಳಿಗೆ ರವಾನೆಯಾಗುತ್ತಿದೆ. ತುಂಬೆ ಡ್ಯಾಂನಿಂದ ಎಂಸಿಎಫ್‌ಗೆ 2 ಎಂಜಿಡಿ, ಎನ್‌ಎಂಪಿಟಿಎ 0.5 ಎಜಿಡಿ, ಇತರ ಕೈಗಾರಿಕೆಗಳಿಗೆ 1 ಎಂಜಿಡಿ ನೀರು ಪೂರೈಕೆಯಾಗುತ್ತಿದೆ. ಎಎಂಆರ್‌ನಿಂದ ಎಂಆರ್‌ಪಿಎಲ್‌ಗೆ 6 ಎಂಜಿಡಿ ಹಾಗೂ ಎಸ್‌ಇಝೆಡ್‌ಗೆ 8 ಎಂಜಿಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದೆ ಅನಿವಾರ್ಯವಾದರೆ ಕೈಗಾರಿಕೆಗಳು, ಕಾಮಗಾರಿಗಳಿಗೆ ನೀರು ಸ್ಥಗಿತ ಮಾಡುವ ಚಿಂತನೆ ನಡೆಸಲಾಗುತ್ತಿದೆ

Ashika S

Recent Posts

ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ

ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ  ಗ್ಯಾಂಗ್  ಏಕಾಏಕಿ ದಾಳಿ ಮಾಡಿದ ಘಟನೆ ಪಟ್ಟಣದ…

10 mins ago

ಜಿಲ್ಲಾಡಳಿತ ಬೀದರ್ ವತಿಯಿಂದ ಬಸವಣ್ಣ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಬಸವಣ್ಣನವರ ವಿಚಾರಗಳು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಅವು ಇಡೀ ನಮ್ಮ ರಾಷ್ಟ್ರದಾದ್ಯಂತ ಇಂದು ಪ್ರಸ್ತುತ ಇವೆ ಎಂದು ಜಿಲ್ಲಾ…

29 mins ago

ನಟಿ ರೂಪಾ ಅಯ್ಯರ್‌ ಗೆ ಆನ್ ಲೈನ್ ನಲ್ಲಿ ವಂಚನೆ: ಹಣ ದೋಚೋಕೆ ಟ್ರೈ ಮಾಡಿದ ಕಳ್ಳರು

ಸ್ಯಾಂಡಲ್‌ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಅವರಿಗೆ ಆನ್ ಲೈನ್ ಕಳ್ಳರು ಕಾಟ ಕೊಟ್ಟಿದ್ದಾರೆ. ಸಿಸಿಬಿ ಸಿಸಿಬಿ ಅಧಿಕಾರಿಗಳೆಂದು ಕಾಲ್…

49 mins ago

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು: ಪ್ರಹ್ಲಾದ್ ಜೋಶಿ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ವಿಚಾರ, ಸಂಪೂರ್ಣ ಈ ಕೇಸ್ ನಲ್ಲಿ ಅತ್ಯಂತ ಗೊಂದಲವಿದೆ. ನಮ್ಮ ಪಾರ್ಟಿ ಹಾಗೂ…

1 hour ago

ಬಿರುಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್ ಅರಳಿ ಮರ: ನಾಲ್ಕು ಮನೆಗಳು ಜಖಂ

ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಅರಳಿ ಮರವೊಂದು ಬೇರು ಸಮೇತ ನಾಲ್ಕು ಮನೆಗಳ ಮೇಲೆ ಉರುಳಿ ಬಿದ್ದು ಮನೆಗಳು…

1 hour ago

ಕೇಜ್ರಿವಾಲ್‌ಗೆ ಷರತ್ತು ವಿಧಿಸಿ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಮಧ್ಯಂತ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಸಹ…

2 hours ago