Categories: ಮಂಗಳೂರು

ಮಂಗಳೂರು: 1.15 ಕೋಟಿ ರೂ. ವಂಚನೆ ಪ್ರಕರಣ, ಹಣ ಹಿಂದಿರುಗಿಸಿದ ಆರೋಪಿ ಗಣೇಶ್ ಕದಂ

ಮಂಗಳೂರು: ಮಂಗಳೂರಿನ ಇಬ್ಬರು ಉದ್ಯಮಿಗಳಿಗೆ 1.15 ಕೋಟಿ ರೂ. ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಮುಂಬೈನ ಗಣೇಶ್ ಕದಂ ಎಂಬಾತ 50 ಲಕ್ಷ ರೂ.ಗಳನ್ನು ಹಿಂದಿರುಗಿಸಿದ್ದು ಬಾಕಿ ಉಳಿದ 65 ಲಕ್ಷ ರೂ.ಗಳ ಮೊತ್ತಕ್ಕೆ ಚೆಕ್ ನೀಡಿದ್ದಾನೆ.

ಆರೋಪಿ ಕದಂನನ್ನು ಮುಂಬೈನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡು ಮಂಗಳೂರಿಗೆ ಕರೆತಂದಿದ್ದರು. ಈ ವೇಳೆ ಆತ ಹಣ ನೀಡಲು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಐದು ದಿನಗಳ ಹಿಂದೆ ಮುಂಬೈನಲ್ಲಿ ಮಂಗಳೂರು ಪೊಲೀಸರು ಕದಂನನ್ನು ವಶಕ್ಕೆ ಪಡೆದಿದ್ದರು. ನಂತರ ಆತನನ್ನು ಮಂಗಳೂರಿಗೆ ಕರೆತರಲಾಗಿತ್ತು . ಹಣ ಹಿಂದಿರುಗಿಸಲು ಆರೋಪಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಆತನನ್ನು ಮುಂಬೈಗೆ ಕರೆದೊಯ್ಯಲಾಗಿದೆ. ವಂಚಿಸಿದ ಹಣದ ಪೈಕಿ 50 ಲಕ್ಷ ರೂ.ಗಳನ್ನು ಕದಂ ಹಿಂದಿರುಗಿಸಿದ್ದು 65 ಲಕ್ಷ ರೂ.ಗಳ ಚೆಕ್ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ ಇದು ವಂಚನೆ ಪ್ರಕರಣವಲ್ಲ. ವಿದೇಶಿ ಬ್ಯಾಂಕಿನಿಂದ ದೂರುದಾರರಿಗೆ 300 ಕೋಟಿ ರೂ.ಗಳ ನಾಲಕ್ಕಾಗಿ ಎಲ್ಲ ಸಿದ್ದತೆಗಳನ್ನು ನಡೆಸಲಾಗಿತ್ತು. ಆದರೆ ದೂರುದಾರರು ಮೂಲ ದಾಖಲೆಗಳನ್ನು ನೀಡದ ಕಾರಣ ಲೋನ್ ಸ್ಥಗಿತಗೊಂಡಿತ್ತು ‘ ಎಂದು ಆರೋಪಿ ಕದಂ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ.

‘ಈ ಪ್ರಕರಣದಲ್ಲಿ ಕಳತ್ತೂರು ವಿಶ್ವನಾಥ ಶೆಟ್ಟಿ ಪಾತ್ರವಿಲ್ಲ. ತನ್ನನ್ನು ದೂರುದಾರರಿಗೆ ವಿಶ್ವನಾಥ್ ಶೆಟ್ಟಿ ಪರಿಚಯಿಸಿದ್ದರು ಅಷ್ಟೇ ‘ ಎಂದು ಪೊಲೀಸ್ ವಿಚಾರಣೆ ವೇಳೆ ಕದಂ ಸ್ಪಷ್ಟ ಪಡಿಸಿದ್ದಾನೆ .

ಮತ್ತೋರ್ವ ಬಿಲ್ಡರ್ ಗೂ ವಂಚನೆ? ಆರೋಪಿ ಗಣೇಶ ಕದಂ ಮಂಗಳೂರಿನ ಮತ್ತೊಬ್ಬ ಹೆಸರಾಂತ ಬಿಲ್ಡರಿಗೆ ಲೋನ್ ತೆಗೆಸಿ ಕೊಡುವ ನೆಪದಲ್ಲಿ 10 ಲಕ್ಷ ರೂ.ಗಳನ್ನು ವಂಚಿಸಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಈ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿಲ್ಲ. ಈ ಹಿಂದೆ ಕಾಂಗ್ರೆಸ್ ನಲ್ಲಿದ್ದು ಇದೀಗ ಬಿಜೆಪಿ ಸೇರಿರುವ ಮೂಡಬಿದ್ರೆ ರಾಜಕಾರಣಿಯೊಬ್ಬರು ಪ್ರಕರಣವನ್ನು ರಾಜಿ ಮಾತುಕತೆ ಮೂಲಕ ಮುಗಿಸಲು ಸಿದ್ಧತೆ ನಡೆಸಿದ್ದಾರೆ.

ವಂಚನೆ ಪ್ರಕರಣದಲ್ಲಿ ಮಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಪಡೆದಿದ್ದ ಮುಂಬೈ ಉದ್ಯಮಿ ಕಳತ್ತೂರು ವಿಶ್ವನಾಥ್ ಶೆಟ್ಟಿ ಇದೀಗ ಅನಾರೋಗ್ಯ ಕಾರಾಣಗಳಿಗಾಗಿ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರು ಬಿಟ್ಟು ಹೊರತೆರಳದಂತೆ ನ್ಯಾಯಾಲಯ ಶರತ್ತು ತೀರಿಸಿದೆ. ಆರೋಪಿ ವಿಶ್ವನಾಥ್ ಶೆಟ್ಟಿ ಪರವಾಗಿ ಮಂಗಳೂರಿನ ಯುವ ನ್ಯಾಯವಾದಿ ಎಲಿಜಬೆತ್ ನೀಲಿಯಾರ ವಾದಿಸಿದ್ದರು.

ಹೆಸರಾಂತ ಕಟ್ಟಡ ನಿರ್ಮಾಣ ಸಂಸ್ಥೆ ‘ರೋಹನ್ ಕಾರ್ಪೊರೇಷನ್’ ಮುಖ್ಯಸ್ಥರಾದ ರೋಹನ್ ಮುಂತೇರೋ ಮತ್ತು ತೊಕ್ಕೊಟ್ಟುವಿನ ‘ಹರ್ಷ ಫೈನಾನ್ಸ್‌’ನ ಮಾಲಕ ಹರೀಶ್ ರವರಿಗೆ ಕಳತ್ತೂರು ವಿಶ್ವನಾಥ್ ಶೆಟ್ಟಿ ಮತ್ತು ಮುಂಬೈನ ಕದಂ ಎಂಬವರು 300 ಕೋಟಿ ರೂ. ಸಾಲ ತೆಗೆಸಿ ಕೊಡುವ ಆಮಿಷ ಒಡ್ಡಿ 1.15 ಕೋಟಿ ರೂ. ಹಣವನ್ನು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ವಿರುದ್ಧ ದೂರು ದಾಖಲಾಗಿತ್ತು.

Ashika S

Recent Posts

ಸಮಂತಾ ನಗ್ನ ಫೋಟೋ ವೈರಲ್; ಸ್ವತಃ ಶೇರ್ ಮಾಡಿ ಡಿಲೀಟ್ ಮಾಡಿದ್ರಾ‌

ನಟಿ ಸಮಂತಾ ಬಾತ್‌ಟಬ್‌ನಲ್ಲಿ ಕುಳಿತಿರುವ ನಗ್ನ ಫೋಟೋವೊಂದು ವೈರಲ್ ಆಗಿದ್ದು, ಚಿತ್ರ ಶೇರ್ ಆದ ಕೊಂಚ ಹೊತ್ತಲ್ಲೇ ಡಿಲೀಟ್ ಆಗಿದೆ.…

19 mins ago

ವಿಶ್ವಕಪ್‌ ಗೆದ್ದರೆ, ತಂಡದ ಪ್ರತಿ ಆಟಗಾರನಿಗೆ 1 ಲಕ್ಷ US ಡಾಲರ್‌ ಘೋಷಣೆ ಮಾಡಿದ ಪಾಕ್‌

ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನ ದಯನೀಯ ಸ್ಥಿತಿ ತಲುಪಿದ್ದರು, ಕ್ರಿಕೆಟ್‌ ಆಟಗಾರರಿಗೆ ಬಂಪರ್‌ ಬಹುಮಾನ ಘೋಷಣೆ ಮಾಡಿದೆ. 

20 mins ago

ಸ್ಟೇರಿಂಗ್‌ ಕಟ್ ಆಗಿ ಗದ್ದೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್‌ : 30 ಪ್ರಯಾಣಿಕರಿಗೆ ಗಾಯ

ಕೆಎಸ್‌ಆರ್‌ಟಿಸಿ ಬಸ್‌ವೊಂದರ ಸ್ಟೇರಿಂಗ್‌ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ…

44 mins ago

ಬೆಂಗಳೂರು ಮೆಟ್ರೋದಲ್ಲಿ ರೋಮ್ಯಾನ್ಸ್; ವಿಡಿಯೋ ವೈರಲ್

ದೆಹಲಿಯ ಮೆಟ್ರೋ ದಲ್ಲಿ ರೊಮ್ಯಾನ್ಸ್ ನಡೆಸುವ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿದ್ದವು. ಆದರೆ ಇದೀಗ ಬೆಂಗಳೂರಿನಲ್ಲೂ ಇದೇ ಚಾಳಿ ಪ್ರಾರಂಭವಾಗಿದ್ದು,…

50 mins ago

ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನ ಎನ್‌ಆರ್ ಪುರ ತಾಲೂಕಿನ ಕರಗುಂದ ಗ್ರಾಮದ ಬಳಿ…

56 mins ago

ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 4.40 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ

ಅಕ್ರಮವಾಗಿ ಸಾರಾಯಿ ಸಾಗಿಸುತ್ತಿದ್ದ ವೇಳೆ ಅಬಕಾರಿ ಇಲಾಖೆಯಿಂದ ಭರ್ಜರಿ ಕಾರ್ಯಚರಣೆ ನಡೆಸಿದ್ದು, ಮತದಾರರಿಗೆ ಹಂಚಲು ತಂದಿದ್ದ 4.40 ಲಕ್ಷ ರೂಪಾಯಿ…

1 hour ago