News Karnataka Kannada
Friday, April 19 2024
Cricket
ಮಂಗಳೂರು

ಮಂಗಳೂರು: ಅಂಗನವಾಡಿಗೆ ಕೊಳೆತು ನಾರುವ ಮೊಟ್ಟೆ ಪೂರೈಕೆ

Mangaluru: Rotten eggs to be supplied to anganwadi
Photo Credit : News Kannada

ಮಂಗಳೂರು: ಮಂಗಳೂರಿನ ಹಲವಡೆ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬಿಜಾಪುರ ಮೂಲದ ಬಸವೇಶ್ವರ ಹೆಸರಿನ ಕೋಳಿ ಮೊಟ್ಟೆ ಪೂರೈಸುವ ಕಂಪನಿಗೆ ಗುತ್ತಿಗೆ ನೀಡಿದ್ದು, ಇವರು ಪೂರೈಕೆ ಮಾಡಿರುವ ಮೊಟ್ಟೆ ಬೇಯಿಸಿದಾಗ ಹುಳ, ಕಪ್ಪಗಾಗಿದ್ದನ್ನು ಕಂಡು ಅಂಗನವಾಡಿ ಕಾರ್ಯಕರ್ತರು ಅವಕ್ಕಾಗಿದ್ದಾರೆ.

ಅಂಗನವಾಡಿ ಕೇಂದ್ರದಿಂದ ಆ ವ್ಯಾಪ್ತಿಯ ಗರ್ಭಿಣಿ ಮಹಿಳೆಯರಿಗೆ ಮೊಟ್ಟೆ ಪೂರೈಸುವ ಕಾರ್ಯ ಮಾಡುತ್ತಿದ್ದು, ಮೊಟ್ಟೆ ಒಯ್ದಿದ್ದ ಗರ್ಭಿಣಿಯರು, ಬಾಣಂತಿಯರ ಕುಟುಂಬಸ್ಥರು ಶಿಕ್ಷಕಿಯರಿಗೆ ಬೈದ ಘಟನೆಯೂ ನಡೆದಿದೆ.  ಗುತ್ತಿಗೆದಾರರು ಎರಡು ತಿಂಗಳು ಮೊಟ್ಟೆ ಸಂಗ್ರಹಿಸಿಟ್ಟು ಹಾಳಾದ ಬಳಿಕ ಪೂರೈಕೆ ಮಾಡಿದ್ದಾರ ಎಂಬುವುದು ಇನ್ನು ತಿಳಿದು ಬರಬೇಕಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿಗಳಿಗೆ ಆಹಾರ ಪೂರೈಕೆ ಹೊಣೆ ಹೊತ್ತುಕೊಂಡಿದ್ದು, ವಾರದ ಹಿಂದೆ ಹಾಸನದಲ್ಲಿಯೂ ಅಂಗನವಾಡಿಯಲ್ಲಿ ಕೊಳೆತ ಮೊಟ್ಟೆ ಪೂರೈಕೆ ಪ್ರಕರಣ ಬೆಳಕಿಗೆ ಬಂದಿತ್ತು. ಕೊಳೆತ ಮೊಟ್ಟೆ ಪೂರೈಕೆ ಬಗ್ಗೆ ಶಿಕ್ಷಕಿಯರು ಅಲವತ್ತುಕೊಂಡರೂ, ಆಡಳಿತದ ನಿರ್ಲಕ್ಷ್ಯ ವಹಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಗುತ್ತಿಗೆದಾರನನ್ನು ಬ್ಲಾಕ್ ಲಿಸ್ಟ್ ಹಾಕ್ತೀನಿ ಎಂದಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು