ಮಂಗಳೂರು

ಮಂಗಳೂರು: ಇಲೆಕ್ಟ್ರಾನಿಕ್ಸ್ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸೊತ್ತು ಭಸ್ಮ

ಮಂಗಳೂರು: ಬಿಸಿರೋಡಿನ ಪ್ರಿಯಾ ಇಲೆಕ್ಟ್ರಾನಿಕ್ಸ್ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಫೆ. 2 ರಂದು ಗುರುವಾರ ಬೆಳಿಗ್ಗಿನ ಜಾವ ನಡೆದಿದೆ.

ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಎದರುಕಡೆ ಕೈಕುಂಜೆ ರಸ್ತೆಯಲ್ಲಿರುವ ಪ್ರೀತಂ ಎಂಬವರಿಗೆ ಸೇರಿದ ಪ್ರಿಯಾ ಎಲೆಕ್ಟ್ರಾನಿಕ್ಸ್ ಅಂಗಡಿಗೆ ಬೆಂಕಿ ತಗುಲಿ ಕೊಮಾಕಿ ಕಂಪೆ‌ನಿಗೆ ಸೇರಿದ ಸ್ಕೂಟರ್ ಹಾಗೂ ಎಲೆಕ್ಟ್ರಾನಿಕ್ಸ್ ಸೊತ್ತುಗಳು ಸುಟ್ಟು ಭಸ್ಮವಾಗಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ.

ಯಾವ ಕಾರಣದಿಂದ ಕಟ್ಟಡಕ್ಕೆ ಬೆಂಕಿ ತಗುಲಿದೆ ಎಂಬುದು ಇನ್ನೂ ಕೂಡ ಸರಿಯಾಗಿ ತಿಳಿದುಬಂದಿಲ್ಲ. ಪ್ರಿಯಾ ಎಲೆಕ್ಟ್ರಾನಿಕ್ಸ್ ಕಟ್ಟಡದ ಮೇಲಿನ ಅಂತಸ್ತಿನಲ್ಲಿ ತಗಡು ಶೀಟು ಅಳವಡಿಸಿ ಗೋದಾಮು ಮಾಡಲಾಗಿತ್ತು. ಇದರಲ್ಲಿ ಕೊಮಾಕಿ ಕಂಪೆನಿಗೆ ಸೇರಿದ ಸ್ಕೂಟರ್ ಗಳನ್ನು ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು.

ಲಕ್ಷಾಂತರ ಮೌಲ್ಯದ ಸೊತ್ತುಗಳು ಯಾವುದು? ಎಷ್ಟು ಇತ್ತು?

ಕೊಮಾಕಿ ಕಂಪೆನಿಗೆ ಸೇರಿದ 45 ಸ್ಕೂಟರ್, ಕಚೇರಿ ಉಪಯೋಗ ದ ಕಂಪ್ಯೂಟರ್, ಗ್ರಾಹಕರ ದಾಖಲೆಗಳನ್ನು ಹೊಂದಿರುವ ಸರ್ವರ್, 70 ಟಿಲ್ಟಿಂಗ್ ಗ್ರೈಂಡರ್ , 100 ಅಧಿಕ ವಾಷಿಂಗ್ ಮೆಷಿನ್, ಪ್ರಿಡ್ಜ್ , ಹತ್ತಾರು ಎ.ಸಿ. ಗ್ರಾಹಕರು ರಿಪೇರಿಗೆ ತಂದು ಕೊಟ್ಟಿದ್ದ ಎಲೆಕ್ಟ್ರಾನಿಕ್ಸ್ ವಸ್ತುಗಳು, ಲಿಪ್ಟ್, ಸೋಲಾರ್, ವಿದ್ಯುತ್ ವಯರ್ ಗಳು, ಹೀಗೆ ಅನೇಕ ಸೊತ್ತುಗಳು ಬೆಂಕಿಗೆ ಆಹುತಿಯಾಗಿದೆ.

ಬ್ಯಾಟರಿ ಬ್ಲಾಸ್ಟ್ ಆಗಿರಬಹುದೇ?

ತಗಡು ಶೀಟಿನ ಕೊಠಡಿಯಲ್ಲಿ ಕೊಮಾಕಿ ಕಂಪೆನಿಗೆ ಸೇರಿದ ಸ್ಕೂಟರ್ ಗಳನ್ನು ದಾಸ್ತಾನು ಇರಿಸಲಾಗಿತ್ತು. ರಾತ್ರಿ ವೇಳೆ ಎಲೆಕ್ಟ್ರಿಕ್‌ ಸ್ಕೂಟರ್ ನ ಬ್ಯಾಟರಿಯನ್ನು ಚಾರ್ಜಿಂಗ್ ಗಾಗಿ ಇಡಲಾಗಿತ್ತು ಎನ್ನಲಾಗಿದೆ . ಓವರ್ ಚಾರ್ಜ್ ಆಗಿ ಬ್ಯಾಟರಿ ಬ್ಲಾಸ್ಟ್ ಆಗಿರಬಹುದೇ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಆದರೆ ಈ ರೀತಿಯಲ್ಲಿ ಬ್ಲಾಸ್ಟ್ ಆಗುತ್ತಾ? ಇದಕ್ಕೆ ಕಂಪೆನಿ ಸರಿಯಾದ ಉತ್ತರ ನೀಡಬಹುದು. ಎಲ್ಲವು ಜನರ ಊಹೆಯಷ್ಡೆ! ಬೆಂಕಿಗೆ ಸರಿಯಾದ ಕಾರಣ ಗೊತ್ತಾಗಿಲ್ಲ ಅನ್ನುವುದು‌ಮಾತ್ರ ಸ್ಪಷ್ಟ.

ಸಕ್ರಮ?

ಪ್ರಿಯಾ ಎಲೆಕ್ಟ್ರಾನಿಕ್ಸ್ ನ ಮೇಲಿನ ಅಂತಸ್ತು ಅಂದರೆ ತಗಡು ಶೀಟು ಹಾಕಿ ನಿರ್ಮಿಸಿರುವ ದಾಸ್ತಾನು ‌ಕೊಠಡಿಗೆ ಸ್ಥಳೀಯ ಪುರಸಭಾ ಇಲಾಖೆ ಅನುಮತಿ ಇದೆಯಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಈ ಮೇಲಿನ ನಾಲ್ಕನೇ ಅಂತಸ್ತಿನಲ್ಲಿ ತುರ್ತು ನಿರ್ಗಮನ ವ್ಯವಸ್ಥೆ ಇಲ್ಲದೆ ಇರುವ ಬಗ್ಗೆ ಯೂ ಜನರು ಆಡಿಕೊಳ್ಳುತ್ತಿದ್ದರು.

Ashika S

Recent Posts

ಸ್ವಾತಿ ಮಲಿವಾಲ್‌ ಮೇಲೆ ದೂರು ದಾಖಲಿಸಿದ ಆರೋಪಿ ಬಿಭವ್‌

ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಬಿಭವ್‌ ಕುಮಾರ್‌ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ…

2 mins ago

ತಾಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿವ್ಯವಸ್ಥೆ ಪರಿಶೀಲಿಸಿದ ಡಿವೈಎಸ್ಪಿ

ಲೋಕಾಯುಕ್ತದ ಕಲಬುರಗಿ ಡಿವೈಎಸ್ಪಿ ಆಯಂಟನಿ ಜಾನ್ ಹಾಗೂ ಇತರೆ ಅಧಿಕಾರಿಗಳು ಗುರುವಾರ ನಗರದಲ್ಲಿನ ತಾಲ್ಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ…

18 mins ago

ಪವಿತ್ರಾ ಜಯರಾಂ ಮೃತಪಟ್ಟ ಬೆನ್ನಲ್ಲೇ ನಟ ಚಂದು ಆತ್ಮಹತ್ಯೆ

ಇತ್ತೀಚೆಗಷ್ಟೇ ತ್ರಿನಯನಿ ಧಾರಾವಾಹಿಯ ನಟಿ ಪವಿತ್ರಾ ಜಯರಾಂ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ  ತೆಲುಗು ಧಾರಾವಾಹಿ ನಟ…

30 mins ago

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

8 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

9 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

9 hours ago