Categories: ಮಂಗಳೂರು

ಮಂಗಳೂರು: ಅಕ್ರಮ ಗಾಂಜಾ ಸಾಗಾಟ- ಓರ್ವ ವಶಕ್ಕೆ

ಮಂಗಳೂರು: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಮಂಗಳೂರು ಹಾಗೂ ಕೇರಳಕ್ಕೆ ಕಾರ್‌ನಲ್ಲಿ ಬೃಹತ್‌ ಪ್ರಮಾಣದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಮಂಗಳೂರು ಸಿಸಿಬಿ ಪೊಲೀಸರು ಓರ್ವನನ್ನು ಬಂಧಿಸಿ 23.250 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಬನೂರು, ಬಂದ್ಯೋಡ್‌ನ ಮೊಯಿದ್ದೀನ್ ಶಬೀರ್ (35) ಎಂಬಾತನೇ ಬಂಧಿತ ಆರೋಪಿ.

ಮಹಿಂದ್ರಾ ಕೆಯುವಿ 100 ಕಾರ್‌ನಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮಂಗಳೂರು ಸಿಸಿಬಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಮುಡಿಪು ಕಾಯರಗೋಳಿ ಕ್ರಾಸ್‌ನಲ್ಲಿ ಕಾರನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ ಮಹಿಂದ್ರಾ ಕೆಯುವಿ ಕಾರನ್ನು ಸ್ವಾಧೀನಪಡಿಸಿಕೊಂಡ ಪೊಲೀಸರು ಆರೋಪಿ ಮೊಯಿದ್ದೀನ್ ಶಬೀರ್‌ನನ್ನು ಬಂಧಿಸಿದ್ದಾರೆ.

ಈ ವೇಳೆ ಕಾರಿನಲ್ಲಿದ್ದ ಸಾಗಾಟ ಮಾಡುತ್ತಿದ್ದ 23.250 ಕೆಜಿ ಗಾಂಜಾ, 2 ಮೊಬೈಲ್ ಫೋನ್‌ಗಳು, 220 ರೂ. ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 12,96,470ರೂ. ಆಗಿದೆ. ಆರೋಪಿ ವಿಶಾಖಪಟ್ಟಣದಿಂದ ಬೆಂಗಳೂರು ಮೂಲಕ ಗಾಂಜಾವನ್ನು ಕಾರಿನಲ್ಲಿರಿಸಿ ಸಾಗಾಟ ಮಾಡುತ್ತಿದ್ದನು. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gayathri SG

Recent Posts

ಬೆಂಗಳೂರಿನಲ್ಲಿ ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಜನರನ್ನು ತಂಪಾಗಿಸಿದ ಮಳೆರಾಯ

ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಬೆಂಗಳೂರಿಗೆ ಸುಮಾರು ಆರು ತಿಂಗಳ ನಂತರ ನಗರದ ಬಹುತೇಕ ಕಡೆ ಗುರುವಾರ ಸಂಜೆ, ಗುಡುಗು–ಮಿಂಚು ಸಹಿತ…

11 mins ago

ರಾಜಕೀಯ ಲಾಭಕ್ಕೆ ಧರ್ಮವನ್ನು ಆಯುಧವಾಗಿ ಬಳಕೆ: ಪರಕಾಲ ಪ್ರಭಾಕರ್‌

ಬಿಜೆಪಿ ಅಧಿಕಾರದಲ್ಲಿರುವ ನವಭಾರತದಲ್ಲಿ ರಾಜಕೀಯ ಲಾಭಕ್ಕೆ ಧರ್ಮವನ್ನು ಆಯುಧವಾಗಿ ಬಳಕೆ ಮಾಡಲಾಗುತ್ತಿದೆ ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್‌ ಆರೋಪಿಸಿದರು.

28 mins ago

ಚಿನ್ನ ಬೆಳ್ಳಿ ಬೆಲೆ ಕೊಂಚ ಏರಿಕೆ ಕಂಡಿದೆ: ಇಂದಿನ ದರ ಪಟ್ಟಿ ಹೀಗಿದೆ!

ಚಿನ್ನ ಮತ್ತು ಬೆಳ್ಳಿ ಬೆಲೆ ಎರಡನೇ ಬಾರಿ ಏರಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 40 ರೂನಷ್ಟು ಹೆಚ್ಚಾದರೆ, ಬೆಳ್ಳಿ…

57 mins ago

ನಾಳೆ ದಾವಣಗೆರೆಗೆ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಭೇಟಿ

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ನಾಳೆ ಮೇ ಮೂರರಂದು ದಾವಣಗೆರೆಗೆ ಆಗಮಿಸುತ್ತಿದ್ದಾರೆ.

9 hours ago

ಕಾರ್ಮಿಕರನ್ನು ಮತ್ತೆ ಗುಲಾಮಗಿರಿಯತ್ತ ತಳ್ಳುವ ಹುನ್ನಾರ ನಡೆಸುತ್ತಿದೆ: ಸುನಿಲ್ ಕುಮಾರ್ ಬಜಾಲ್

ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅಂದಿನ ಕಾರ್ಮಿಕ ವರ್ಗ ಇಂದು ಮತ್ತೆ ದೇಶವನ್ನು ಉಳಿಸಲು ಸನ್ನದ್ದವಾಗಬೇಕು.ಕಳೆದ 10…

9 hours ago

ಮಲೆಮಹದೇಶ್ವರನ ಹುಂಡಿಯಲ್ಲಿ 3.05 ಕೋಟಿ ಕಾಣಿಕೆ ಸಂಗ್ರಹ

ಪವಾಡ ಪುರುಷ ಮಲೆ ಮಹದೇಶ್ವರ ಕೋಟಿ ಒಡೆಯನಾಗಿ ಮುಂದುವರೆಯುತ್ತಿದ್ದು, ಇದೀಗ 34 ದಿನಗಳ ಅಂತರದಲ್ಲಿ ಮೂರು ಕೋಟಿ ನಾಲ್ಕು ಲಕ್ಷದ…

9 hours ago