Categories: ಮಂಗಳೂರು

ಮಂಗಳೂರು: ರಾಷ್ಟ್ರೀಯ ಮಟ್ಟದ ಓಪನ್ ಫಿಡೆ ರೇಟಿಂಗ್ ಚೆಸ್ ಪಂದ್ಯಾವಳಿ – 2022

ಮಂಗಳೂರು: ಕ್ರೀಡೆಗಳು ಮತ್ತು ಆಟಗಳನ್ನು, ಸಾರ್ವಜನಿಕ ವಲಯದ  ಘಟಕಗಳಲ್ಲಿ ಉತ್ತೇಜಿಸುವ / ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಭಾರತ ಸರ್ಕಾರದ ಉಕ್ಕು ಸಚಿವಾಲಯ, ನವದೆಹಲಿ, ಇವರ ನಿರ್ದೆಶನದ ಮೇರೆಗೆ, ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ – ೭೫ ವರ್ಷಗಳ ಭಾರತೀಯ ಸ್ವಾತಂತ್ರ್ಯದ  ಸ್ಮರಣಾರ್ಥವಾಗಿ, ಕೆಐಓಸಿಎಲ್ ಲಿಮಿಟೆಡ್ ಕಂಪೆನಿಯ ವತಿಯಿಂದ (ಸಾರ್ವಜನಿಕ ವಲಯ) ಎರಡು ದಿನದ ರಾಷ್ಟ್ರೀಯ  ಮಟ್ಟದ – “೫ ನೇ ಕುದುರೆಮುಖ ಟ್ರೋಫಿ” ರಾಷ್ಟ್ರೀಯ ಮಟ್ಟದ ಓಪನ್ ಫಿಡೆ ರೇಟಿಂಗ್ ಚೆಸ್ ಪಂದ್ಯಾವಳಿ – ೨೦೨೨, ಇದನ್ನು ೧೦-೧೧ ಡಿಸೆಂಬರ್ ೨೦೨೨ ರಂದು ಕಾವೂರ್‌ನ ಕೆಐಓಸಿಎಲ್ ಉಪನಗರದ ನೆಹರು ಭವನದಲ್ಲಿ ಆಯೋಜಿಸುತ್ತಿದೆ.

೫-೭ , ೯, ೧೧, ೧೩, ೧೫ ವರ್ಷ ವಯಸ್ಸಿನ ವಿಭಾಗಗಳಲ್ಲಿ ಮತ್ತು ಅತ್ಯುತ್ತಮ ಹಿರಿಯ, ಅತ್ಯುತ್ತಮ ಕಿರಿಯ ಹಾಗೂ ಅತ್ಯುತ್ತಮ ಮಹಿಳಾ ಆಟಗಾರರಿಗೆ
ವಿಶೇಷ ಬಹುಮಾನಗಳೊಂದಿಗೆ ಸ್ಪರ್ಧೆಯನ್ನು ನಡೆಸಲಾಗುವುದು. ಒಟ್ಟು ನಗದು ಬಹುಮಾನ ರೂ. ೩,೦೦,೦೦೦/- ಮತ್ತು ೧೭೫ ಟ್ರೋಫಿ ಆಗಿರುತ್ತದೆ. ನೋಂದಣಿ ಶುಲ್ಕ ರೂ ೧೨೫೦/- ಮತ್ತು ೭ ಡಿಸೆಂಬರ್ ೨೦೨೨ ರಂದು ಬೆಳಿಗ್ಗೆ ೭.೦೦ ಗಂಟೆಯೊಳಗೆ  ನೋಂದಣಿಯ ಕೊನೆಯ ದಿನಾಂಕವಾಗಿರುತ್ತದೆ.

ನೋಂದಣಿಗೆ ಈ ಲಿಂಕ್ ಉಪಯೋಗಿಸಿwww.chessfee.com ಹಾಗೂ ನೋಂದಣಿ ಶುಲ್ಕವನ್ನು KIOCL Sports & Recreation Club Account/ ಖಾತೆಗೆ ಪಾವತಿಸಿ ಮತ್ತು ಮಾಹಿತಿಗಾಗಿ kudremukhchess@gmail.com ಗೆ ಇಮೇಲ್ ಮಾಡಿ ಎಂದು ಸಂಸ್ಥೆಯ ಚೀಫ್ ಜನರಲ್ ಮ್ಯಾನೇಜರ್ (ರ‍್ವೀಸೆಸ್) ಮತ್ತು ಅಧ್ಯಕ್ಷರು ಚೆಸ್ ಪಂದ್ಯಾವಳಿ ಸಮಿತಿಯ ಶ್ರೀ ರಾಮಕೃಷ್ಣ ರಾವ್ ಹೆಚ್. ಮತ್ತು ಸೀನಿಯರ್ ಮ್ಯಾನೇಜರ್ (ಮಾನವ ಸಂಪನ್ಮೂಲ ಮತ್ತು ಸಮನ್ವಯ) ಮತ್ತು ಚೆಸ್ ಪಂದ್ಯಾವಳಿ ಸಮಿತಿಯ ಸಮನ್ವಯಕರಾದ ಶ್ರೀ ಮುರ್ಗೇಶ್ ಎಸ್. ರವರು, ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Ashika S

Recent Posts

ಮೊಬೈಲ್‌ಗಾಗಿ ತಮ್ಮನನ್ನೆ ಕೊಂದ ಪಾಪಿ ಅಣ್ಣ

ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದ್ದ 15 ವರ್ಷದ ಬಾಲಕನ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಬಾಲಕ…

4 mins ago

ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್​ನಿಂದ ಹೊರಬರುತ್ತೇನೆ: ಕಂಗನಾ ರಣಾವತ್

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯದ ಮೊದಲ ಇನ್ನಿಂಗ್ಸ್​ ಆರಂಭಿಸಿದ ಕಂಗನಾ ರಣಾವತ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ…

6 mins ago

ವೀಕ್ಷಕರ ಗಮನ ಸೆಳೆದ ನಾಣ್ಯ ಮತ್ತು ನೋಟುಗಳ ಪ್ರದರ್ಶನ

ನಗರದ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು  ಪರಂಪರೆ ಇಲಾಖೆಯಲ್ಲಿ  ಆಯೋಜಿಸಿರುವ ಅಪೂರ್ವ ನಾಣ್ಯ ಮತ್ತು ನೋಟುಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

30 mins ago

ಬೀದಿಗಳಲ್ಲಿ ಹಸುಗಳ ಕಾದಾಟ: ಬಾಲಕಿಯರ ಮೇಲೆ ಬಿದ್ದ ಹಸು, ವಿಡಿಯೋ ವೈರಲ್

ಸಿಸಿಟಿವಿಯಲ್ಲಿ ಆಘಾತಕಾರಿ ಘಟನೆಯೊಂದು ಸೆರೆಯಾಗಿದ್ದು ಬೀದಿಯಲ್ಲಿ ಬಾಲಕಿಯರ ಗುಂಪಿನ ಮೇಲೆ ಎರಡು ಹಸುಗಳು ಬಿದ್ದು ಉರುಳಾಡುವುದು ವೀಕ್ಷಕರನ್ನು ಬೆಚ್ಚಿ ಬೀಳಿಸಿದೆ,…

31 mins ago

ಅಂಜಲಿ ಹತ್ಯೆ ಪ್ರಕರಣ : ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ ಚೇತರಿಕೆ

ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಸಹೋದರಿಯ ಹತ್ಯೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಯಶೋದಾ…

55 mins ago

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ : ಬಿಜೆಪಿ ಮಾಜಿ ಸರಪಂಚ್ ಸಾವು

ಜಮ್ಮು-ಕಾಶ್ಮೀರದಲ್ಲಿ ಇನ್ನು ಎರಡು ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ನಿನ್ನೆ ಶನಿವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ…

1 hour ago