Categories: ಮಂಗಳೂರು

ಮಂಗಳೂರು: ಎಂಸಿಸಿ ಬ್ಯಾಂಕ್ ಸ್ಥಾಪಕರ ದಿನ ಆಚರಣೆ

ಮಂಗಳೂರು: ಕರಾವಳಿಯ ಪ್ರಥಮ ಅರ್ಬನ್ ಕೋ-ಆಪ್ ಬ್ಯಾಂಕ್‌ಗಳಲ್ಲಿ ಒಂದಾದ ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಸಂಸ್ಥಾಪಕರ ದಿನವನ್ನು ಮೇ 7 ರಂದು ಬ್ಯಾಂಕಿನ ಆಡಳಿತ ಕಚೇರಿ ಆವರಣದಲ್ಲಿ ಆಚರಿಸಲಾಯಿತು. 111 ವರ್ಷ ಬ್ಯಾಂಕ್‌ ಪೂರ್ಣಗೊಳಿಸಿದ್ದು, ವಿವಿಧ ಸಮಾಜಮುಖಿ ಸೇವೆಗಳಲ್ಲಿ ಮುಂಚೂಣಿಯಲ್ಲಿದೆ.

ಧರ್ಮಗುರು ಬೋನವೆಂಚರ್ ನಜರೆತ್ ಅವರು ಪವಿತ್ರ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಂಸ್ಥೆ ಸಂಸ್ಥಾಪಕ ಸಲ್ಡಾನ್ಹಾ ಅವರ ದೂರದೃಷ್ಟಿಯ ಫಲವಾಗಿ ಬ್ಯಾಂಕ್‌ ಸಮಾಜಮುಖಿಯಾಗಿ 111 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದರು. ಸಿಬ್ಬಂದಿಗಳು ದೂರದೃಷ್ಟಿಯುಳ್ಳವರಾಗಿರಬೇಕು ಮತ್ತು ಬ್ಯಾಂಕ್‌ನ ಅಭಿವೃದ್ಧಿಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದರು. ಬಳಿಕ ಮಾಸಾಶನ ವಿತರಣೆ, ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಅಧ್ಯಕ್ಷತೆ ವಹಿಸಿದ್ದರು
ಮಂಗಳೂರಿನ ಪ್ರಾವಿಟ್ ಫುಡ್ ಪ್ರಾಡಕ್ಟ್ಸ್, ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ, ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್, ನಿರ್ದೇಶಕರು ವೇದಿಕೆಯಲ್ಲಿದ್ದರು.

ಅನಿಲ್ ಲೋಬೋಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕ್‌ ಸಂಸ್ಥಾಪಕ ಸಂಸ್ಥಾಪಕ ಸಲ್ಡಾನ್ಹಾ ಅವರ ಮುಂದಾಲೋಚನೆ, ಸಮಾಜಮುಖಿ ದೃಷ್ಟಿಯಿಂದ ಬ್ಯಾಂಕ್‌ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು. ಅಂತಹ ದಾರ್ಶನಿಕ ಸಂಸ್ಥಾಪಕರ ಮಹಾನ್‌ ಕಾರ್ಯಗಳನ್ನು ನೆನಪಿಸಲು ಬ್ಯಾಂಕ್‌ ಹಲವು ಕಾರ್ಯಯೋಜನೆ ಹಮ್ಮಿಕೊಂಡಿದೆ ಎಂದರು. ಗ್ರಾಹಕರ ಸಭೆ, ಮಹಿಳಾ ದಿನ, ಶತಮಾನೋತ್ಸವದ ನಂತರದ ದಶಮಾನೋತ್ಸವ ಆಚರಣೆ, ಎನ್‌ಆರ್‌ಐ ಸಭೆ ಇತ್ಯಾದಿ ಆಯೋಜಿಸಲಾಗಿದೆ ಎಂದರು. ಇಂತಹ ಕಾರ್ಯಕ್ರಮಗಳು ಬ್ಯಾಂಕಿನ ಗ್ರಾಹಕರು ಮತ್ತು ಷೇರುದಾರರಲ್ಲಿ ಅಭಿಮಾನ ಮೂಡಿಸುವಲ್ಲಿ ನೆರವಾಗಿದೆ. ಎಂದು ಹೇಳಿದರು. ಇಂದು ಬ್ಯಾಂಕ್‌ ಪ್ರಬಲ ಹಣಕಾಸು ಸಂಸ್ಥೆಯಾಗಿ ಬ್ಯಾಂಕ್ ಉಳಿದಿದೆ. ಬ್ಯಾಂಕ್‌ನ ಗ್ರಾಹಕರು, ಷೇರುದಾರರ ನಂಬಿಕೆಯನ್ನು ಗಳಿಸಿ ಮುನ್ನಡೆಯುತ್ತಿದೆ ಎಂದರು. ವಿನ್ಸೆಂಟ್ ಕುಟಿನ್ಹಾ ಅವರು ದೂರದೃಷ್ಟಿಯ ನಾಯಕ ಪಿಎಫ್‌ಎಕ್ಸ್ ಸಲ್ಡಾನ್ಹಾ ಅವರ ಸಾಧನೆಯ ಹಾದಿಯನ್ನು ಸ್ಮರಿಸಿದರು.

ಸಮುದಾಯದ ಅನುಕೂಲಕ್ಕಾಗಿ ಸಂಸ್ಥೆಯನ್ನು ಪ್ರಾರಂಭಿಸಿದ್ದು ಇಂದು ಹಲವರ ಮನೆ ಬೆಳಗುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ ಎಂದರು. ಇಂದು ಬ್ಯಾಂಕ್‌ ಎರಡು ಜಿಲ್ಲೆಗಳಿಂದ 7 ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ ಎಂಬುದು ಸಂತಸದ ವಿಚಾರ ಎಂದರು. ಅಲ್ಲದೆ ಸಿಬ್ಬಂದಿ ವರ್ಗದವರು ಬ್ಯಾಂಕಿನ ಅಭಿವೃದ್ದಿಗೆ ಒಗ್ಗೂಡಿ ಶ್ರಮಿಸಬೇಕು ಎಂದರು.

ಅತಿಥಿಗಳಿಂದ ಸ್ಥಾಪಕರ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಸಂಸ್ಥಾಪಕರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಮೇ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡವರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಡೇವಿಡ್ ಡಿಸೋಜಾ, ಹೆರಾಲ್ಡ್ ಮೊಂಟೆರೊ ರೋಶನ್ ಡಿಸೋಜಾ, ಎಲ್ರಾಯ್ ಕ್ರಾಸ್ಟೊ, ಡಾ ಫ್ರೀಡಾ ಡಿಸೋಜಾ, ಸುಶಾಂತ್ ಸಲ್ಡಾನ್ಹಾ, ಅಲ್ವಿನ್ ಪಿ. ಮೊಂಟಿಯೆರೊ, ಶರ್ಮಿಳಾ ಮೆನೆಜಸ್, ಫೆಲಿಕ್ಸ್ ಡಿಕ್ರೂಜ್, ಡಾ.ಜೆರಾಲ್ಡ್ ಪಿಂಟೋ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಪಕರಾದ ಸುನಿಲ್ ಮಿನೇಜಸ್ ವಂದಿಸಿದರು. ಶೈನಿ ಡಿಸೋಜಾ ಉಪಸ್ಥಿತರಿದ್ದರು.

Ashika S

Recent Posts

ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದ ಮಗು: ವಿಡಿಯೋ ವೈರಲ್‌

ತಮಿಳುನಾಡಿನ ಚೆನ್ನೈನ ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ  ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ಏಳು ತಿಂಗಳ ಮಗುವೊಂದು ವಿಂಡೋ ಪೋರ್ಚ್‌  ಮೇಲೆ ಬಿದ್ದ ಘಟನೆ ನಡೆದಿದೆ. 

17 mins ago

ಸೋನಾಮಾರ್ಗ್‌ನಲ್ಲಿ ಸ್ಕಿಡ್​ ಆಗಿ ನದಿಗೆ ಉರುಳಿದ ಕಾರು: 4 ಜನರ ಸಾವು

ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್‌ನಲ್ಲಿ  ಒಂಭತ್ತು ಜನ ಪ್ರಯಾಣ ಮಾಡುತ್ತಿದ್ದ ಟವೇರಾ ಎಸ್‌ಯುವಿ ಕಾರ್ ನಿಯಂತ್ರಣ ತಪ್ಪಿ  ಸಿಂಧ್ ನದಿಗೆ…

41 mins ago

ಬಸ್​ ಹಾಗೂ ಟ್ರಕ್​ ನಡುವೆ ಭೀಕರ ಅಪಘಾತ: ಆರು ಜನರ ದುರ್ಮರಣ

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸಫಿಪುರದಲ್ಲಿ ಬಸ್​ ಹಾಗೂ ಟ್ರಕ್​ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ  ನಡೆದಿದೆ.

1 hour ago

ಮತ್ತೊಂದು ಲವ್ ಜಿಹಾದ್ ಪ್ರಕರಣ: ಬಾಲಕಿಯನ್ನು ಪುಸಲಾಯಿಸಿ ಕರೆತಂದ ಯುವಕ

ಹುಬ್ಬಳ್ಳಿಯಲ್ಲಿ  ಅನ್ಯಕೋಮಿನ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಫುಸಲಾಯಿಸಿ ಬಾಗಲಕೋಟೆ ಜಿಲ್ಲೆಯಿಂದ ಹುಬ್ಬಳ್ಳಿಗೆ ಕರೆದುಕೊಂಡ ಬಂದಿದ್ದಾನೆ.

2 hours ago

ವಕೀಲರ ಸಂಘದ ಅಧ್ಯಕ್ಷರಾಗಿ ಶಿವಶರಣಪ್ಪ ಪಾಟೀಲ ಆಯ್ಕೆ

2024-25ನೇ ಸಾಲಿಗೆ ನಡೆದ ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ಶಿವಶರಣಪ್ಪ ಪಾಟೀಲ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

2 hours ago

ಈ ವಾರವೂ ಅನಿಶ್ಚಿತ ಸ್ಥಿತಿಯಲ್ಲಿ ಚಿನ್ನದ ಬೆಲೆ: ಇವತ್ತಿನ ದರ ಪಟ್ಟಿ ಹೀಗಿದೆ

ಸತತವಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು  ಕಳೆದ ವಾರ ಮಿಶ್ರ ಅನುಭವ ನೀಡಿವೆ. ಒಂದು ವಾರದಲ್ಲಿ ಚಿನ್ನದ…

2 hours ago