Categories: ಮಂಗಳೂರು

ಮಂಗಳೂರು: ಮರವೂರು ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ , ಸದ್ಯಕ್ಕಿಲ್ಲ ಕುಡಿಯುವ ನೀರಿನ ಸಮಸ್ಯೆ

ಮಂಗಳೂರು: ಈ ಬಾರಿಯ ಎಲ್ಲೆಡೆ ಕುಡಿಯುವ ನೀರಿಗೆ ತತ್ವಾರ ಉಂಟಾಗುತ್ತಿದ್ದು, ಅಲ್ಲಲ್ಲಿ ಅಣೆಕಟ್ಟುಗಳು ಬರಿದಾಗುತ್ತಿವೆ. ಆದರೆ ಬಜಪೆ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮರವೂರಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅಣೆಕಟ್ಟಿನಲ್ಲಿ ಸದ್ಯದ ಮಟ್ಟಿಗೆ ನೀರಿನ ಸಂಗ್ರಹ ಸಾಕಷ್ಟಿದೆ.

ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಉಪ್ಪು ನೀರು ತಡೆ ಅಣೆಕಟ್ಟು. ನದಿಯಲ್ಲಿ ಒಳ ಹರಿವು ಇಲ್ಲದಿದ್ದರೂ ಅಣೆಕಟ್ಟಿನಿಂದ ಮೇಲ್ಭಾಗದಲ್ಲಿ ಸುಮಾರು 18 ಕಿ.ಮೀ. ವ್ಯಾಪ್ತಿಯ ವರೆಗೆ ನೀರಿನ ಸಂಗ್ರಹವಿದೆ. ಇದರಿಂದಾಗಿ ಮಳೆಯಾಗದಿದ್ದರೂ ಆತಂಕ ಪಡುವ ಪರಿಸ್ಥಿತಿ ಇಲ್ಲ. ಘಟ್ಟದ ತಪ್ಪಲಲ್ಲಿ ಮಳೆಯಾಗಿ ನೀರಿನ ಒಳ ಹರಿವು ಹೆಚ್ಚಾದರೆ ಈ ಬಾರಿ ಸಮಸ್ಯೆಯೇ ಇಲ್ಲದಂತೆ ಬೇಸಗೆಯನ್ನು ನಿಭಾಯಿಸಿದಂತಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಅಣೆಕಟ್ಟಿನಿಂದ ಬಜಪೆ ಸುತ್ತಮುತ್ತಲಿನ 14 ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದೆ. ಬಜಪೆ, ಮರವೂರು, ಕೆಂಜಾರು, ಮೂಡುಶೆಡ್ಡೆ, ಪಡುಶೆಡ್ಡೆ, ಜೋಕಟ್ಟೆ, ಬಡಗ ಎಕ್ಕಾರು, ತೆಂಕ ಎಕ್ಕಾರು, ಪೆರ್ಮುದೆ, ಕುತ್ತೆತ್ತೂರು, ಬಾಳ, ಕಳವಾರು, ಸೂರಿಂಜೆ, ದೇಲಂತಬೆಟ್ಟು ಗ್ರಾಮಗಳಿಗೆ ಮರವೂರು ಅಣೆಕಟ್ಟಿನಿಂದ ನೀರು ಪೂರೈಕೆಯಾಗುತ್ತದೆ. ಅಣೆಕಟ್ಟಿನಿಂದ 5 ಎಂಎಲ್‌ಡಿ ನೀರನ್ನು ಸಂಸ್ಕರಿಸಿ, ಪ್ರತಿ ದಿನ ಪೂರೈಕೆ ಮಾಡಲಾಗುತ್ತಿದೆ.ಅಣೆಕಟ್ಟಿನಲ್ಲಿ ನೀರು ಇರುವುದರಿಂದ ಇಕ್ಕೆಲಗಳಲ್ಲಿರುವ ಕೃಷಿಕರ ಜಮೀನಿಗೂ ಯಥೇಚ್ಛ ನೀರು ಸಿಗುವಂತಾಗಿದ್ದು, ಬಾವಿ, ಕೆರೆಗಳಲ್ಲೂ ನೀರು ಧಾರಾಳವಾಗಿದೆ.

ಒಂದೆಡೆ ನೀರು ಸಾಕಷ್ಟಿದ್ದರೂ, ಇನ್ನೊಂದೆಡೆ ಬಿಸಿಲ ಬೇಗೆ ಹೆಚ್ಚಿರುವುದರಿಂದ ಆವಿಯಾಗುವ ಪ್ರಮಾಣವೂ ಹೆಚ್ಚಿದೆ. ಬೇಸಗೆ ಮಳೆಯ ನಿರೀಕ್ಷೆ ಇರುವುದರಿಂದಾಗಿ ನೀರಿಗೆ ಸಮಸ್ಯೆ ಇಲ್ಲ ಎಂದು ಹೇಳಬಹುದಾದರೂ ನೀರಿನ ನಿಯಮಿತ ಬಳಕೆ ಮಾಡದಿದ್ದರೆ, ಮಳೆಯೂ ಕೈ ಕೊಟ್ಟರೆ ಸಮಸ್ಯೆ ಖಚಿತ ಎನ್ನುವುದನ್ನೂ ಮರೆಯುವಂತಿಲ್ಲ. ಎರಡು ವರ್ಷದ ಹಿಂದೆ ಮರವೂರು ಅಣೆಕಟ್ಟಿನಲ್ಲೂ ನೀರಿನ ಪ್ರಮಾಣ ಬಹುತೇಕ ಕಡಿಮೆಯಾಗಿ ತಳ ಕಾಣುತಿತ್ತು ಎನ್ನುವುದನ್ನು ಇಲ್ಲಿ ನೆನಪಿಸಬಹುದು.

ಮರವೂರು ಕಿಂಡಿ ಅಣೆಕಟ್ಟಿನ ಕೆಳ ಭಾಗದ ನೀರು, ಕೈಗಾರಿಕೆಗಳ ಕಲುಷಿತ ನೀರು ಸೇರಿ ಮಲೀನಗೊಂಡಿದೆ. ಇದರಿಂದ ನೀರು ಸಂಪೂರ್ಣ ಕಪ್ಪಾಗಿದ್ದು, ಆಯಿಲ್‌ ಪದರ ನೀರಿನ ಮೇಲ್ಭಾಗದಲ್ಲಿ ಎದ್ದು ಕಾಣುತ್ತಿದೆ. ಈ ನೀರು ಉಬ್ಬರದ ಸಂದರ್ಭ ಮೇಲಕ್ಕೆ ಬರುವುದರಿಂದ ಅಣೆಕಟ್ಟಿನ ಒಳಗೆ ಕೆಲವು ಕಡೆಗಳಲ್ಲಿ ಸೋರಿಕೆಯಾಗುತ್ತಿದೆ. ಇದರಿಂದ ಡ್ಯಾಂನಲ್ಲಿರುವ ಕುಡಿಯುವ ನೀರು ಕೂಡ ಕಲುಷಿತವಾಗುವ ಆತಂಕ ಉಂಟಾಗಿದೆ ಎನ್ನುತ್ತಾರೆ ಸ್ಥಳೀಯರು.

Ashika S

Recent Posts

ಗಾಳಿ ಸಮೇತ ಭಾರಿ ಮಳೆ : ನೆಲಕಚ್ಚಿದ ಮರಗಳು

ಧಾರವಾಡದಲ್ಲಿ ಶನಿವಾರ ಗಾಳಿ ಸಮೇತ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ನೆಲಕಚ್ಚಿದ ಬಗ್ಗೆ ವರದಿಯಾಗಿದೆ. ಬೆಳಿಗ್ಗೆಯಿಂದ ವಿಪರೀತ ಬಿಸಿಲಿನ ವಾತಾವರಣವಿತ್ತು

7 mins ago

ಮನುಷ್ಯನ ಆರೋಗ್ಯಕ್ಕೆ ಕ್ರೀಡೆಗಳು ಅತ್ಯಂತ ಸಹಕಾರಿ : ತಮ್ಮಯ್ಯ

ಕ್ರೀಡೆಗಳು ಮನುಷ್ಯನ ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡುವ ಜೊ ತೆಗೆ ಮನಸ್ಸನ್ನು ಹತೋಟಿಗಿಡುವ ಬಹುದೊಡ್ಡ ಸಾಧನ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ…

19 mins ago

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು- ತಮ್ಮಯ್ಯ

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಆ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಬೇಕೆಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಹೇಳಿದ್ದಾರೆ. ನಗರದ ಬಸವನಹಳ್ಳಿಯ…

29 mins ago

ಮಕ್ಕಳು ಬೇಸಿಗೆ ರಜೆಯಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು : ಶಿಕ್ಷಕ ಬಾಲಾಜಿ

ಬೇಸಿಗೆ ರಜೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಸಂಸ್ಥೆಗಳ ಬೇಸಿಗೆ ತರಬೇತಿ ಶಿಬಿರಗಳಿಗೆ ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕಳಿಸುವುದು ಸಾಮಾನ್ಯ.…

39 mins ago

ಚರಂಡಿ ಸ್ವಚ್ಛಗೊಳಿಸುವಂತೆ ಸಾರ್ವಜನಿಕರ ಆಗ್ರಹ

ಪಟ್ಟಣದ ವಿವಿಧ ವಾರ್ಡ್‌ಗಳು ಹಾಗೂ ಪ್ರಮುಖ ವೃತ್ತಗಳಲ್ಲಿನ ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಧಿಕಾರಿಗಳ…

51 mins ago

ನಿವೃತ್ತಿ ಘೋಷಿಸಿದ ಇಂಗ್ಲೆಂಡ್​ ತಂಡ ವೇಗದ ಬೌಲರ್​ : ಕಾರಣ ಇಲ್ಲಿದೆ

ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು…

1 hour ago