ಮಂಗಳೂರು

ಮಂಗಳೂರು: ಕಾಂಗ್ರೆಸ್ ಭವನದಲ್ಲಿ ವಾಸ್ತುದೋಷ ತಜ್ಞರ ಸಲಹೆಯಂತೆ ಮೆಟ್ಟಿಲು ಬದಲಿಸಿದ ನಾಯಕರು

ಮಂಗಳೂರು: ಕರಾವಳಿಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವುದಕ್ಕೆ ಎಲ್ಲಾ ರೀತಿಯ ಶ್ರಮ ಹಾಕಲಾಗುತ್ತಿದೆ ಅದಕ್ಕಾಗಿ ಮಂಗಳೂರಿನ ಕಾಂಗ್ರೆಸ್ ಕಚೇರಿಯ ವಾಸ್ತು ಬದಲಾವಣೆಗೂ ಪಕ್ಷದ ನಾಯಕರು ಮುಂದಾಗಿದ್ದಾರೆ.

ವಾಸ್ತು ಶಾಸ್ತ್ರಜ್ಞಂತೆ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದ ಮೆಟ್ಟಿಲುಗಳನ್ನು ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಲಾಗಿದೆ. ಕಾಂಗ್ರೆಸ್ ಕಚೇರಿ ಕಟ್ಟಡದ ಪ್ರವೇಶ ದ್ವಾರದಲ್ಲಿ ಎಂಟು ಮೆಟ್ಟಿಲುಗಳಿದ್ದವು ಸಾಮಾನ್ಯವಾಗಿ ವಾಸ್ತು ಪದ್ಧತಿಯ ಪ್ರಕಾರ ಬೆಸ ಸಂಖ್ಯೆಯಲ್ಲಿ ಮೆಟ್ಟಿಲುಗಳನ್ನು ಕೊಡಲಾಗುತ್ತದೆ 3 ,5 ,7 ಹೀಗೆ ಮೆಟ್ಟಿಲುಗಳು ಸಂಖ್ಯೆ ಇರುತ್ತದೆ.

ಅಗ್ರಿ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಎಂಟು ಮೆಟ್ಟಿಲುಗಳನ್ನು ಎರಡು ವರ್ಷದ ಹಿಂದೆ ಬಂದಿದ್ದ ವಾಸ್ತು ಶಾಸ್ತ್ರಜ್ಞ ಒಬ್ಬರು ಆಕ್ಷೇಪಿಸಿದರು , 2016ರಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಭವನ ಉದ್ಘಾಟನೆ ಆದ ಬಳಿಕ 2019 ರಲ್ಲಿ ನಡೆದ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿದ್ದು ,ಕಚೇರಿಗೆ ಒಕ್ಕುವ ಬಾಗಿಲಲ್ಲಿಯೇ ಅಪಧ ಇದ್ದರೆ ಸೋಲಾಗದಿರುತ್ತೆ ಎನ್ನುವ ಮಾತುಗಳು ಕೇಳಿ ಬಂದಿದ್ದವು ,ಹೀಗಾಗಿ ಈ ಬಾರಿ ಚುನಾವಣೆಗೆ ಕೆಲವೇ ತಿಂಗಳ ಇರುವಾಗ ಮೆಟ್ಟಿಲುಗಳನ್ನು ಬದಲಿಸಿದ್ದು ಒಂದು ಮೆಟ್ಟಿಲು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಎರಡು ದಿನಗಳಿಂದ ಮೆಟ್ಟಿಲು ಕಾಮಗಾರಿ ನಡೆಯುತ್ತಿದ್ದು ತರಾತುರಿಯಲ್ಲಿ ಕೆಲಸ ಸಾಗುತ್ತಿದೆ.

ಈ ಬಗ್ಗೆ ಪಕ್ಷದ ಹಿರಿಯ ಜಿಲ್ಲಾ ಸದಸ್ಯರು ಒಬ್ಬರಲ್ಲಿ ಕೇಳಿದಾಗ ಹಾಗೇನಿಲ್ಲ ಮೆಟ್ಟಿಲು ಅಡಿ ಭಾಗದಲ್ಲಿ ನೀರಿನ ವಾಟರ್ ಟ್ಯಾಂಕ್ ಇಡಲಾಗಿತ್ತು. ಅದು ಲೀಕೇಜ್ ಆಗಿತ್ತು ಅದನ್ನು ಕಲ್ಲು ತುಂಬಿಸಿ ಬಂದ್ ಮಾಡಲಾಗಿದ್ದು ಹೆಚ್ಚುವರಿರುವ ಜಾಗವನ್ನು ಫೀಲ್ ಮಾಡಲು ಒಂದು ಮೆಟ್ಟಿಲು ಮೆಚ್ಚಿಸಲಾಗಿದೆ ಎಂದರು .ಇನ್ನೊಬ್ಬ ಸದಸ್ಯರಲ್ಲಿ ವಾಸ್ತು ಪ್ರಕಾರ ಮಾಡುತ್ತಿದ್ದಾರೆ ಎಂದು ಕೇಳಿದಾಗ ಹೌದು ಎಂದರು ವಾಸ್ತು ತಜ್ಞರು ಮೆಟ್ಟಿಲು ಈ ಭಾಗದಲ್ಲಿ ಇರಲೇಬಾರದು ಎಂದಿದ್ದಾರೆ.

ಅವರು ಹೇಳಿದ್ದನ್ನು ಎಲ್ಲಾ ಕೇಳಿದರೆ ಇಡೀ ಕಟ್ಟಡ ಬದಲಿಸಬೇಕಾಗಿದೆ ಸ್ವಲ್ಪಮಟ್ಟಿಗೆ ಬದಲಾವಣೆ ಮಾಡುತ್ತಿದ್ದೇವೆ. ಮೊದಲ ಮಹಡಿಯಲ್ಲೂ ಕೆಲವು ಬದಲಾವಣೆ ಸೂಚಿಸಿದ್ದಾರೆ ಜಿಲ್ಲಾಧ್ಯಕ್ಷರ ಚೇಂಬರ್ ಆ ಜಾಗದಲ್ಲಿ ಇರಬಾರದು ಎಂದಿದ್ದಾರೆ ಅದನ್ನು ಯಾವಾಗ ಬದಲಾವಣೆ ಮಾಡಲಾಗುತ್ತದೆ ಎಂದು ಗೊತ್ತಿಲ್ಲ ಎಂದರು. ಒಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಾಸ್ತು ಬದಲಾವಣೆ ಅಂತೂ ಆಗುತ್ತಿದೆ ಆದರೆ ಜಿಲ್ಲಾ ಕಾಂಗ್ರೆಸ್ ಒಳಗಿನ ಮುಸುಕಿನ ಅಪಸ್ವರ ಯಾವಾಗ ಬದಲಾವಣೆ ಆಗುತ್ತೋ ಏನೋ.

Gayathri SG

Recent Posts

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

31 mins ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

38 mins ago

ಬಿರುಗಾಳಿ ಸಹಿತ ಮಳೆಗೆ ಕುಸಿದ ಮಹಾದ್ವಾರ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

48 mins ago

ಮತ್ತೆ ಭರ್ಜರಿ ಏರಿಕೆ ಕಂಡ ‌ಚಿನ್ನದ ಬೆಲೆ !

ಜಾಗತಿಕವಾಗಿ ಚಿನ್ನಕ್ಕೆ ಈಗ ಸಖತ್ ಬೇಡಿಕೆ ಸೃಷ್ಟಿಯಾಗಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ…

1 hour ago

ಮಳೆಯಿಂದಾಗಿ ಪಂದ್ಯ ರದ್ದು; ಪ್ಲೇಆಫ್​ಗೇರಿದ್ದು ಯಾರು ?

ಐಪಿಎಲ್ 2024ರ 66ನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ತಂಡ ಗುಜರಾತ್ ತಂಡವನ್ನು ಎದುರಿಸಬೇಕಿತ್ತು. ಆದರೆ, ಟಾಸ್‌ಗೂ ಮುನ್ನವೇ…

1 hour ago

ಗುಡ್‌ ನ್ಯೂಸ್:‌ ಶುಗರ್‌, ಹೃದ್ರೋಗ ಸೇರಿ 41 ಔಷಧಿಗಳ ಬೆಲೆ ಕಡಿತ

ಕೇಂದ್ರ ಸರ್ಕಾರವು 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್‌ಗಳ…

1 hour ago