News Karnataka Kannada
Tuesday, April 16 2024
Cricket
ಮಂಗಳೂರು

ಮಂಗಳೂರು: ಮಳೆ ನೀರು ತುಂಬಿ ತಡೆಗೋಡೆ ಕುಸಿದು ಮನೆಗೆ ಹಾನಿ

Mangaluru: House damaged as retaining wall collapses
Photo Credit : News Kannada

ಮಂಗಳೂರು: ಅವೈಜ್ನಾನಿಕ ಚರಂಡಿ ಕಾಮಗಾರಿಯಿಂದಾಗಿ ತೊಕ್ಕೊಟ್ಟು ಹೆದ್ದಾರಿಯಲ್ಲಿ ಮಳೆ ನೀರು ತುಂಬಿ ಹರಿದು ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ರಸ್ತೆಯಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರು ಪರದಾಡಿದರು.

ಮಳೆಗಾಲದಲ್ಲಿ ಪ್ರತಿ ವರುಷವೂ ತೊಕ್ಕೊಟ್ಟು ಫ್ಲೈ ಓವರ್ ಕೆಳಗಡೆ ‌ಮಳೆ ನೀರು ರಸ್ತೆಯಲ್ಲೇ ಹರಿದು ಕೃತಕ ನೆರೆ ವಾತಾವರಣ ಸೃಷ್ಟಿಯಾಗುತ್ತದೆ.

ಧಾರಾಕಾರ ಸುರಿದ ಮಳೆಗೆ ಉಳ್ಳಾಲ ನಗರ ವ್ಯಾಪ್ತಿಯ ಸೇವಂತಿ ಗುಡ್ಡೆ ಎಂಬಲ್ಲಿ ಜೋಸೆಫ್ ಡೇಸಾ ಅವರ ಮನೆಯ ಬೃಹತ್ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಪಕ್ಕದ ವಿಷು ಶೆಟ್ಟಿ ಎಂಬುವರ ಮನೆಗೆ ಭಾಗಶಃ ಹಾನಿಯುಂಟಾಗಿದೆ.

ಘಟನೆ ವೇಳೆ ವಿಷು ಅವರ ಪತ್ನಿ ಅಮಿತಾ ಮನೆಯಲ್ಲಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸ್ಥಳೀಯ ನಗರಸಭಾ ಸದಸ್ಯ ಮುಶ್ತಾಕ್ ಪಟ್ಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು