Categories: ಮಂಗಳೂರು

ಮಂಗಳೂರು: ಭಾರಿ ಮಳೆಯಿಂದ ವಿಮಾನ ಲ್ಯಾಂಡಿಂಗ್‌ ಗೆ ತೊಂದರೆ

ಮಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ಮುಂಬೈ ಹಾಗೂ ದುಬೈಯಿಂದ ಆಗಮಿಸಿರುವ ವಿಮಾನಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ತಡವಾಗಿ ಲ್ಯಾಂಡಿಂಗ್ ಆಗಿದೆ. ಜೊತೆಗೆ ಹೈದರಾಬಾದ್​ನಿಂದ ಆಗಮಿಸಿರುವ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ಗೋವಾಕ್ಕೆ ತೆರಳಿ ಮತ್ತೆ ಹಿಂತಿರುಗಿ ಬಂದು ಲ್ಯಾಂಡ್ ಆಗಿದೆ. ಭಾರಿ ಮಳೆಯಿಂದಾಗಿ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಕಳೆದಸೋಮವಾರದಿಂದ ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುತ್ತಿದೆ. ಶುಕ್ರವಾರ ಮಳೆ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದ್ದು, ಇಂದು ಮುಂಜಾನೆಯಿಂದ ಮತ್ತೆ ಆರಂಭವಾಗಿದೆ. ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಮಳೆ ಹಾನಿ ಸಂಭವಿಸಿದೆ. ಮಳೆಯಿಂದಾಗಿ ನಾಲ್ವರು ಸಾವನ್ನಪ್ಪಿದ್ದು, ಓರ್ವ ನೀರುಪಾಲಾಗಿದ್ದಾನೆ. ನೂರಾರು ಮನೆಗಳು ಜಲಾವೃತಗೊಂಡಿವೆ.

ಶುಕ್ರವಾರ ಮಳೆ ಕೊಂಚ ಬಿಡುವು ನೀಡಿದ ಹಿನ್ನೆಲೆಯಲ್ಲಿ ಇಂದು ಶಾಲೆ ಕಾಲೇಜಿಗಳಿಗೆ ರಜೆಯನ್ನು ನೀಡಿರಲಿಲ್ಲ. ಮಂಗಳವಾರದಿಂದ ಶುಕ್ರವಾರದವರೆಗೆ ಶಾಲೆ,‌ ಪ್ರೌಢಶಾಲೆ ಮತ್ತು ಪಿಯು ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

Ashika S

Recent Posts

ಕೊಟ್ಟ ಮಾತಿನಂತೆ ಚಿತ್ರ ಬಿಡಿಸಿದ ಯುವತಿಗೆ ಪತ್ರ ಬರೆದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಫೋಟೋ ಹಿಡಿದು ನಿಂತಿದ್ದ ಯುವತಿಯನ್ನು ಕಂಡು ತಮ್ಮ ಅಂಗರಕ್ಷಕ ಅಧಿಕಾರಿಗಳಿಂದ ಯುವತಿಯ ಫೋಟೊ…

6 hours ago

‘ಕಲ್ಕಿ-2898 AD’ ಚಿತ್ರಕ್ಕೆ ಕನ್ನಡದಲ್ಲಿ ಧ್ವನಿ ನೀಡಿದ ದೀಪಿಕಾ ಪಡುಕೋಣೆ

ನಟ ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ 'ಕಲ್ಕಿ-2898 AD' ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ನಟಿ ದೀಪಿಕಾ ಪಡುಕೋಣೆ ತಮ್ಮ ಪಾತ್ರದ ಡಬ್ಬಿಂಗ್‌…

6 hours ago

ಧನುಷ್- ಐಶ್ವರ್ಯ ಇಬ್ಬರೂ ಬೇರೆಯವರೊಟ್ಟಿಗೆ ಡೇಟಿಂಗ್; ಖ್ಯಾತ ಗಾಯಕಿ ಮಾಹಿತಿ

ಕಾಲಿವುಡ್‌ ನಟ ಧನುಷ್‌ ಮತ್ತು ಸೂಪರ್‌ ಸ್ಟಾರ್‌ ರಜನಿಕಾಂತ್‌ ಪುತ್ರಿ ಐಶ್ವರ್ಯಾ ರಜನಿಕಾಂತ್‌ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ.…

6 hours ago

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಎಚ್​.ಡಿ ರೇವಣ್ಣ ಏನಂದ್ರು ?

ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಪರಪ್ಪರ ಅಗ್ರಹಾರ ಜೈಲಿನಿಂದ ಬಿಡುಗಡೆ ಹೊಂದಿದ ಶಾಸಕ…

7 hours ago

ಅಂಕಿತಾ ಓದಿದ ಶಾಲೆಗೆ 1 ಕೋಟಿ ರೂ. ಘೋಷಿಸಿದ ಸಿಎಂ ಸಿದ್ದರಾಮಯ್ಯ

ಈ ವರ್ಷದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ರಾಜ್ಯಕ್ಕೆ ಫಸ್ಟ್…

7 hours ago

10 ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ ಏರಿಕೆಯಾಗಿದ್ದು ಎಷ್ಟು?

ಪ್ರಧಾನಿ ನರೇಂದ್ರ ಮೋದಿ ಅವರು ಸತತ 3ನೇ ಬಾರಿ ಲೋಕಸಭಾ ಚುನಾವಣೆಗೆ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇಂದು ಬೆಳಗ್ಗೆ 11.40ರ…

7 hours ago