ಮಂಗಳೂರು

ಮಂಗಳೂರು: ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಅಂಗವಾಗಿ “ಹರ್ ಘರ್ ತಿರಂಗಾ” ಅಭಿಯಾನ

ಮಂಗಳೂರು: ಭಾರತ ಸರ್ಕಾರದಿಂದ 75 ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ವರ್ಷಾಚರಣೆಯ ಅಂಗವಾಗಿ “ಹರ್ ಘರ್ ತಿರಂಗಾ (ಮನೆ ಮನೆಗೂ ರಾಷ್ಟ್ರೀಯ ಧ್ವಜ) ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮನೆಗಳಲ್ಲಿ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ದಿನಾಂಕ: 13/08/2022 ರಿಂದ 15/08/2022 ರವರೆಗೆ ಹಾರಿಸಿ ದೇಶಾಭಿಮಾನವನ್ನು ಬಿಂಬಿಸುವಂತ ಸಾರ್ವಜನಿಕರಿಗೆ ಈಗಾಗಲೆ ಕೋರಲಾಗಿರುತ್ತದೆ.

ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ‘ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಾಲಿಕೆಯ ವತಿಯಿಂದ ಈ ಕೆಳಕಂಡ ಕಾರ್ಯಕ್ರವನ್ನು ಹಮ್ಮಿಕೊಂಡಿರುತ್ತದೆ.

1. ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆ ವತಿಯಿಂದ ಅಂದಾಜು 60000 ರಾಷ್ಟ್ರಧ್ವಜವನ್ನು ಪ್ರತಿ ಮನೆಗಳ, ಸರ್ಕಾರಿ ಕಛೇರಿ ಕಟ್ಟಡಗಳು, ಸರ್ಕಾರೇತರ ಸಂಘ ಸಂಸ್ಥೆಗಳ ಕಟ್ಟಡಗಳು ಮತ್ತು ಇತರೆ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಹಾಲಿಸುವಂತೆ ಉದ್ದೇಶಿಸಲಾಗಿದೆ. ಇದಲ್ಲದೆ ಎಲ್ಲಾ ಸಂಘ ಸಂಸ್ಥೆಗಳ ಪತಿನಿದಿಗಳ ಸಭೆಯನ್ನು ಕರೆದು ಇವರ ಮುಖಾಂತರ ಉಳಿದ ಎಲ್ಲಾ ಕಟ್ಟಡಗಳಲ್ಲಿ ಕೂಡ ರಾಷ್ಟ್ರಧ್ವಜವನ್ನು ಹಾರಿಸುವಂತೆ ಕೂರಲಾಗಿರುತ್ತದೆ.

2. ಪಾಲಿಕೆ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರಿಗೆ ರಾಷ್ಟ್ರಧ್ವಜವನ್ನು ಪ್ರತಿ ಬಾವುಟಕ್ಕೆ ರೂ 22 ರಂತೆ 3 ನೇ ಆಗಸ್ಟ್ 2022 ರಿಂದ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ.

3. ರಾಷ್ಟ್ರಧ್ವಜವನ್ನು ಈ ಕೆಳಗೆ ನಿಗದಿಪಡಿಸಿರುವ ಸ್ಥಳಗಳಲ್ಲಿ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

• ಪಾಲಿಕೆಯ ಎಲ್ಲಾ ವಲಯ ಕಚೇರಿಗಳು ಮತ್ತು ವಾರ್ಡ್ ಕಚೇರಿಗಳು.

• ಪಾಲಿಕೆ  ವ್ಯಾಪ್ತಿಯ ಎಲ್ಲಾ 10 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು: ಸುರತ್ಕಲ್, ಕುಳಾಯಿ, ಕುಲೂರು, ಶಕ್ತಿ ನಗರ, ಕದ್ರಿ, ಪಡೀಲ್, ಯಕ್ಕೂರ್, ಜೆಪ್ಪು, ಬಂದರ್ ಹಾಗೂ ಬೇಂಗ್ರೆ.

• ಪ್ರಮುಖ ಮಾಲ್‌ಗಳು: ಭಾರತ್ ಮಾಲ್, ಸಿಟಿ ಸೆಂಟರ್, ಮತ್ತು ಫೋರಮ್ ಫಿಜಾ ಮಾಲ್.

4. ಇಂದಿನಿಂದ ಎಲ್ಲಾ ಪಾಲಿಕೆ  ಸದಸ್ಯರ ನೇತೃತ್ವದಲ್ಲಿ, ಎಮ್.ಪಿ.ಡಬ್ಲ್ಯೂ ಸಿಬ್ಬಂದಿಗಳು, ಮತ್ತು ವಾರ್ಡ್ ಕಮಿಟಿ ನೋಡಲ್ ಅಧಿಕಾರಿಗಳಿಂದ ಮನೆ ಮನೆಗೆ ಭೇಟಿ ನೀಡಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯದೊಂದಿಗೆ ರಾಷ್ಟ್ರಧ್ವಜವನ್ನು ಉಚಿತವಾಗಿ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗುವುದು.

5. ಸಂಘ ಸಂಸ್ಥೆಗಳು ಹಾಗೂ ಅಪಾರ್ಟ್‌ ಮೆಂಟ್ ಕಟ್ಟಡದ ಮಾಲಕರು ಸ್ವಇಚ್ಛೆಯಿಂದ ರಾಷ್ಟ್ರಧ್ವಜವನ್ನು ಖರೀದಿಸಿ ಅವರೋಹಿಸಲು ಕೋರಲಾಗಿರುತ್ತದೆ.

6. ಶಾಲಾ ಕಾಲೇಜು ಸಂಸ್ಥೆಗಳ ಸಹಕಾರದೊಂದಿಗೆ ಮಕ್ಕಳ ಮುಖಾಂತರ ರಾಷ್ಟ್ರಧ್ವಜವನ್ನು ಎಲ್ಲಾ ಮನೆಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು.

ವಿದ್ಯುತ್ ದೀಪಾಲಂಕಾರ

ಪಾಲಿಕೆ  ವ್ಯಾಪ್ತಿಯಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವವನ್ನು ವೈವಿದ್ಯಮಯವಾಗಿ ಆಚರಿಸಿ ಸ್ಮರಣೀಯವಾಗಿರಿಸಲು ಪಾಲಿಕೆ  ಕಛೇರಿ ಕಟ್ಟಡ, ಪ್ರಮುಖ ವೃತ್ತ, ತುಂಬೆ ವೆಂಟೆಡ್ ಡ್ಯಾಂ ಮತ್ತು ಇತರೆ ಪ್ರಮುಖ ಸ್ಥಳಗಳಲ್ಲಿ ಕೇಸರಿ , ಬಿಳಿ, ಹಸಿರು ವರ್ಣದ ಎಲ್.ಇ. ಡಿ ದೀಪಗಳೊಂದಿಗೆ ದಿನಾಂಕ 13.08.2022 ರಿಂದ 15.08.2022 ರವರೆಗೆ ವರ್ಣರಂಜಿತ ವಿದ್ಯುತ್‌ ದೀಪಾಲಂಕಾರ ಮಾಡಲು ಉದ್ದೇಶಿಸಲಾಗಿದೆ.

ಕಛೇರಿ ಕಟ್ಟಡಗಳು:

> ಪಾಲಿಕೆ ಕೆಂದ್ರ ಕಛೇರಿ ಲಾಲ್‌ಬಾಗ್

> ಸುರತ್ಕಲ್ ವಲಯ ಕಛೇರಿ

>ಪುರಭವನ ಕಟ್ಟಡ

> ಈಜುಕೊಳ

> ಲಾಲ್‌ಬಾಗ್ ವಾಣಿಜ್ಯ ಸಂಕೀರ್ಣ ಕಛೇರಿ ಕಟ್ಟಡ

ಪ್ರಮುಖ ವೃತ್ತಗಳು:

ಲಾಲ್‌ಬಾಗ್ ವೃತ್ತ, ಶ್ರೀ ಬ್ರಹ್ಮ ಶ್ರೀ ನಾರಾಯಣಗುರು ವೃತ್ತ, ಶ್ರೀ ಗೋವಿಂದ ಪೈ ವೃತ್ತ,ಎ.ಬಿ ಶೆಟ್ಟಿ ವೃತ್ತ, ಕ್ಲಾಕ್ ಟವರ್ ವೃತ್ತ, ಪ್ರಾಥಮಿಕ ಆರೋಗ್ಯ ಕೇಂದ್ರ ಬಿಳಿ ವೃತ್ತ ಜೆಪ್ಪು,ಮಾರ್ನಮಿಕಟ್ಟೆ ವೃತ್ತ, ಕೋಟಿಚೆ ನ್ನಯ ವೃತ್ತ ನಂದಿಗುಡ್ಡೆ,  ಬೋಂದೆಲ್ ವೃತ್ತ, ಸುರತ್ಕಲ್ ವೃತ್ತ,ಕದ್ರಿ-ಮಲ್ಲಿಕಟ್ಟೆ ವೃತ್ತ.

8. ಅಮೃತ ಮಹೋತ್ಸವದ ಸಂಭ್ರಮ ಹಾಗೂ ಸ್ವಾತಂತ್ರ್ಯಕ್ಕೆ ಕಾರಣವಾದ ಎಲ್ಲರನ್ನು ಗೌರವಿಸುವುದು ಹಾಗೂ ಸ್ಮರಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಜಾಗೃತಿ ಅಭಿಯಾನದ ಅಂಗವಾಗಿ ಪಾಲಿಕೆಯ ವತಿಯಿಂದ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದು ವಿವರಗಳು ಈ ಕೆಳಗಿನಂತಿದೆ.

“ರಂಗೋಲಿ ಸ್ಪರ್ಧೆ” ಭಾರತದ ಸ್ವಾತಂತ್ರ ಹೋರಾಟದ ಯಶಸ್ಸಿನ 75ವರ್ಷಗಳು ಪರಿಕಲ್ಪನೆಯಲ್ಲಿ “ರಂಗೋಲಿ ಸ್ಪರ್ಧೆಯನ್ನು ದಿನಾಂಕ 11.08.2022 ರಂದು ಕುಲ್ಮುಲ್ ರಂಗರಾವ್ ಭವನ (ಪುರಭವನ)ದಲ್ಲಿ ಹಮ್ಮಿಕೊಳ್ಳಲಾಗಿದೆ.

“ಸಂಭ್ರಮದ ನಡಿಗೆ” : ದಿನಾಂಕ 12.08.2022 ರಂದು ಭಾರತೀಯ ಸಂಸ್ಕೃತಿ, ಸಾಧನೆ ಮತ್ತು ಭವ್ಯವಾದ ಇತಿಹಾಸವನ್ನು ಗೌರವಿಸಿ ಆಚಲಿಸಲು ಮಂಗಳೂರು ಮಹಾನಗರಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ವಿದ್ಯಾರ್ಥಿಗಳಿಂದ (ಪಾಲಿಕೆ ಕೇಂದ್ರ ಕಚೇರಿಯಿಂದ – ‘ಬ್ರಹ್ಮಶ್ರೀ ನಾರಾಯಣ ಗುರು ವೃತ್ತ – ಮಣ್ಣಗುಡ್ಡೆ ಕೆನರಾ ಶಾಲೆ ಕೇಂದ್ರ ಕಚೇರಿ) “ಸಂಭ್ರಮದ -ನಡಿಗೆ”

ಸ್ವಾತಂತ್ರ್ಯ ಹೋರಾಟಗಾರರಿಗೆ ನುಡಿ ನಮನ : ದಿನಾಂಕ 10.08.2022 ರಂದು ಮಹಾನಗರಪಾಲಿಕೆಯ ಕೇಂದ್ರ ಕಛೇರಿಯಲ್ಲಿ ಪಾಲಿಕೆಯ ಎಲ್ಲಾ ಅಧಿಕಾರಿಗಳು – ಹಾಗೂ ಸಿಬ್ಬಂದಿ ವರ್ಗದವರಿಂದ ದೇಶಭಕ್ತಿ ಸಾರುವ ಗೀತೆಗಳನ್ನು ಹಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮತ್ತು ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಸಂಕಲ್ಪ ತೊಡುವುದು.

ದೇಶ ಭಕ್ತಿಯೊಂದಿಗೆ ಸೆಲ್ಫಿ : ದಿನಾಂಕ 08.08.2022 ರಂದು ಪಾಲಿಕೆಯ ಕೇಂದ್ರ ಕಛೇರಿ ಹಾಗೂ ಸುರತ್ಕಲ್ ವಲಯ ಕಛೇರಿಗಳಲ್ಲಿ “ದೇಶ ಭಕ್ತಿಯೊಂದಿಗೆ ಸೆಲ್ಫಿ” ಎಂಬ ಪರಿಕಲ್ಪನೆಯ ಬೂತ್ ಗಳನ್ನು ತೆರೆದು ಸಾರ್ವಜನಿಕರು ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾಲಿಸುವ ಬಗ್ಗೆ ಜಾಗೃತಿಯ ಅಭಿಯಾನ .

Gayathri SG

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

6 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

6 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

7 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

7 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

7 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

7 hours ago