News Karnataka Kannada
Wednesday, April 24 2024
Cricket
ಮಂಗಳೂರು

ಮಂಗಳೂರು: ಸ್ವಸ್ತಿಕಾ ನ್ಯಾಶನಲ್ ಸ್ಕೂಲಿನಲ್ಲಿ ಗುರುಪೂರ್ಣಿಮೆ ಆಚರಣೆ

Mangaluru: Guru Purnima celebrations at Swastika National School
Photo Credit : News Kannada

ಮಂಗಳೂರು: ಶಿಕ್ಷಣದಲ್ಲಿ ಭಾರತೀಯ ಸಂಸೃತಿ ಮತ್ತು ಮೌಲ್ಯಗಳನ್ನು ಸದಾ ಆಚರಿಸಿ ಮೈಗೂಡಿಸಿಕೊಂಡು ಬೆಳೆಸುತ್ತಿರುವ ಮಾದರಿ ವಿದ್ಯಾಸಂಸ್ಥೆ ಸ್ವಸ್ತಿಕ ನ್ಯಾಶನಲ್ ಸ್ಕೂಲ್, ಉರ್ವಸ್ಟೋರ್, ಮಂಗಳೂರು ಇಲ್ಲಿನ ವಿದ್ಯಾರ್ಥಿಗಳು ಗುರುಪೂರ್ಣಿಮೆಯ ದಿನ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಕಾಲೇಜಿನ ಪ್ರಾಂಶುಪಾಲೆ ಡಾ ಮಾಲಿನಿ ಎನ್ ಹೆಬ್ಟಾರ್ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ.ರಾಘವೇಂದ್ರ ಹೊಳ್ಳರು ಈ ಒಂದು ಸಂಸ್ಕೃತಿಯ ಇನ್ನು ಮುಂದೆಯೂ ನಮ್ಮ ಸಂಸ್ಥೆಯಲ್ಲಿ ಮುಂದುವರಿಯಲಿ ಎ೦ದು ಹಾರೈಸಿದರು.

ಎಲ್ಲಾ ವಿದ್ಯಾರ್ಥಿಗಳು ಅಧ್ಯಾಪಕರ ಪಾದ ಪೂಜೆ ಮಾಡಿ ಅವರಿಂದ ಆಶೀರ್ವಾದ ಸ್ವೀಕರಿಸಿದರು. ವಿದ್ಯಾರ್ಥಿ ನಾಯಕಿ ಕು. ಚಿನ್ಮಯಿ ಸ್ವಾಗತಿಸಿದರು. ವಿದ್ಯಾರ್ಥಿ ಭುವನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಎಲ್ಲರನ್ನೂ ವಂದಿಸಿದರು. ಕಾಲೇಜಿನ ಎಲ್ಲಾ ಭೋಧಕ , ಭೋಧಕೇತರ ವೃಂದ ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು