Categories: ಮಂಗಳೂರು

ಮಂಗಳೂರು: ಶಾಸಕ ಹರೀಶ್‌ ಪೂಂಜಾ ನೇತೃತ್ವದಲ್ಲಿ ಎಳನೀರು ಪ್ರದೇಶ ಅಭಿವೃದ್ಧಿಗೆ ವೇಗ

ಮಂಗಳೂರು: ದ.ಕ ಜಿಲ್ಲೆಯ ಹಾಗೂ ಬೆಳ್ತಂಗಡಿ ತಾಲೂಕಿನ ಕೊನೆಯ ಭಾಗದಲ್ಲಿರುವ ಎಳನೀರು ಪ್ರದೇಶದಲ್ಲಿ ಹಲವು ಅಗತ್ಯ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಇಲ್ಲಿನ ಜನರ ಹಲವು ದಶಕಗಳ ಪ್ರಮುಖ ಬೇಡಿಕೆಗಳು ಮುಂದಿನ ಕೆಲವೇ ಸಮಯದಲ್ಲಿ ಪೂರ್ಣಗೊಳ್ಳಲಿದೆ.

ತಾಲೂಕು ಕೇಂದ್ರದಿಂದ 125 ಕಿಮೀ ದೂರದಲ್ಲಿರುವ ಎಳನೀರು ಅತ್ಯಂತ ದುರ್ಗಮ ಪ್ರದೇಶವಾಗಿದ್ದು ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿತ್ತು. ಸುಮಾರು 150 ಮನೆ ಹಾಗೂ 600 ರಷ್ಟು ಜನಸಂಖ್ಯೆ ಇರುವ ಈ ಪ್ರದೇಶ ನೇತ್ರಾವತಿ ನದಿಯ ಉಗಮ ಸ್ಥಾನದಲ್ಲಿದೆ. ಇಲ್ಲಿನ ಜನ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದನ್ನು ಮನಗಂಡ ಶಾಸಕ ಹರೀಶ್ ಪೂಂಜ ಇಲ್ಲಿನ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ವಹಿಸಿ ಹಲವಾರು ಯೋಜನೆಗಳನ್ನು ರೂಪಿಸಿ ಅವುಗಳನ್ನು ನಾನಾ ಅನುದಾನಗಳ ಮೂಲಕ ಅನುಷ್ಠಾನಗೊಳಿಸಿದರು. ಇದರಲ್ಲಿ ಅಗತ್ಯ ಸ್ಥಳಗಳಲ್ಲಿ ಕಿರು ಸೇತುವೆ,ಶಾಲೆ, ಅಂಗನವಾಡಿ ಅಭಿವೃದ್ಧಿಗಳನ್ನು ಈಗಾಗಲೇ ಮಾಡಲಾಗಿದೆ. ಬೆಳಕು ಯೋಜನೆಯಲ್ಲಿ ಇಲ್ಲಿನ ಹಲವಾರು ಮನೆಗಳಿಗೆ ಮೆಸ್ಕಾಂನಿಂದ ವಿದ್ಯುತ್ ಬೆಳಕು ನೀಡುವ ಯೋಜನೆ ಈಗಾಗಲೇ ಲೋಕಾರ್ಪಣೆಗೊಂಡು ಇಲ್ಲಿನ ಜನರು ವಿದ್ಯುತ್ ಬೆಳಕು ನೋಡುವಂತಾಗಿದೆ.

ಅತ್ತ ಚಿಕ್ಕಮಗಳೂರಿಗೆ ಹತ್ತಿರ,ದಕಜಿಲ್ಲೆಗೆ ದೂರದಲ್ಲಿರುವ ಎಳನೀರಿನ ಅಭಿವೃದ್ಧಿ ಕಾಮಗಾರಿಗೆ ಸಲಕರಣೆಗಳನ್ನು ಸಾಗಿಸಲು ಸಾಕಷ್ಟು ಸುತ್ತು ಬಳಸಿ ಸಾಗಬೇಕು. ಅಗಲ ಕಿರಿದಾಗ ಇಲ್ಲಿನ ಒಳ ರಸ್ತೆಗಳಲ್ಲಿ ಯಂತ್ರೋಪಕರಣಗಳನ್ನು ಸಾಧಿಸಲು ಸಮಸ್ಯೆ ಇದೆ.ಆದರೂ ಈಗಾಗಲೇ ಇಲ್ಲಿ ಪ್ರಮುಖ ಕಾಮಗಾರಿಗಳು ಪ್ರಗತಿಯಲ್ಲಿವೆ.

ಒಡ್ಡಿ ಪ.ಪಂಗಡದ ಕಾಲೋನಿ ಅಭಿವೃದ್ದಿ:
ಸುಮಾರು 10 ಮನೆಗಳಿರುವ ಒಡ್ಡಿ ಪರಿಶಿಷ್ಟ ಪಂಗಡದ ಕಾಲೋನಿಗೆ ಸಂಪರ್ಕ ಕಲ್ಪಿಸಲು 5 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಕಿರು ಸೇತುವೆಗಳು ರಚನೆಗೊಳ್ಳುತ್ತಿವೆ.

1.280ಕಿಮೀ. ರಸ್ತೆಗೆ ಈಗಾಗಲೇ ಕಾಂಕ್ರೀಟಿಕರಣ ಪೂರ್ಣಗೊಂಡಿದೆ. ಅಲ್ಲದೆ ಕಿರಿ ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಈ ಪರಿಸರದ ಜನತೆಗೆ ಕಾಯಂ ಸಂಪರ್ಕ ವ್ಯವಸ್ಥೆಯಾಗಲಿದೆ. ಇದರ ಜತೆ ದಿಡುಪೆ- ಎಳನೀರು ರಸ್ತೆಯಲ್ಲಿರುವ ಜಲಪಾತ ಪ್ರದೇಶದಲ್ಲೂ ಕಿರು ಸೇತುವೆ ರಚನೆಗೊಳ್ಳುತ್ತಿದೆ. ಹೀಗೆ ಒಟ್ಟು ಐದು ಕಿರು ಸೇತುವೆಗಳು ನಿರ್ಮಾಣವಾಗಲಿವೆ.

ಬಂಗಾರಪಲ್ಕೆಗೆ ಸಂಪರ್ಕ
ಸುಮಾರು 15 ಮನೆಗಳಿರುವ ಇಲ್ಲಿನ ಬಂಗಾರಪೇಟೆ ಪರಿಸರಕ್ಕೆ ವಾಹನ ಸಂಚಾರ ದುಸ್ತರವಾಗಿದೆ.ಇಲ್ಲಿನ ಕಚ್ಚಾ ರಸ್ತೆ ತೀರಾ ಹದಗೆಟ್ಟು ಜನರು ಸಂಚಾರಕ್ಕೆ ಬವಣೆ ಪಡುತ್ತಿದ್ದರು. ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳಕ್ಕೆ ಕಾಲು ಸಂಕವೇ ಆಸರೆಯಾಗಿತ್ತು.ಇಲ್ಲಿ ಕಿಂಡಿ ಅಣೆಕಟ್ಟು ಸಹಿತ‌ ಸೇತುವೆ ನಿರ್ಮಾಣಗೊಳ್ಳುತ್ತಿದೆ ಇದರ ಹೆಚ್ಚಿನ ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿನ ಸಂಪರ್ಕ ರಸ್ತೆಯ ಅಭಿವೃದ್ಧಿ ನಡೆಯುತ್ತಿದೆ. ತಡೆಗೋಡೆ ಸಹಿತ ರಸ್ತೆ ನಿರ್ಮಾಣವಾಗಲಿದ್ದು ಇದು ಕೂಡ ಸುಮಾರು 5 ಕೋಟಿ ರೂ. ಅನುದಾನದಲ್ಲಿ ನಡೆಯಲಿದೆ. ಈ ಎಲ್ಲಾ ಕಾಮಗಾರಿಗಳಿಂದ ಎಳನೀರು ಪ್ರದೇಶದ ಒಳ ರಸ್ತೆಗಳ ಸಂಪರ್ಕ ಸಮಸ್ಯೆಗೆ ಪರಿಹಾರ ಸಿಗಲಿದೆ.

ದಿಡುಪೆ-ಎಳನೀರು ರಸ್ತೆ:
ತಾಲೂಕು ಕೇಂದ್ರದಿಂದ ದಿಡುಪೆ ಮೂಲಕ ಎಳನೀರಿಗೆ ಇರುವ ದೂರ ಕೇವಲ 30ಕಿಮೀ. ಆದರೆ ದಿಡುಪೆಯಿಂದ ಎಳನೀರಿಗೆ ಸಂಪರ್ಕ ನೀಡುವ ರಸ್ತೆಯಲ್ಲಿ ಬೇಸಿಗೆಕಾಲದಲ್ಲಿ ಜೀಪ್ ಮೂಲಕ ಮಾತ್ರ ಸಂಚರಿಸಬಹುದು. ಮಳೆಗಾಲದಲ್ಲಿ ಇಲ್ಲಿ ಸಂಚಾರ ಅಸಾಧ್ಯ. ಈ ರಸ್ತೆಯ ಅಭಿವೃದ್ಧಿಗೆ ಅರಣ್ಯ ಸಮಸ್ಯೆ ತಡೆಯಾಗಿದ್ದು, ಶಾಸಕ ಹರೀಶ್ ಪೂಂಜ ಅರಣ್ಯ ಪರಿಸರದ ಮೂಲಕ ರಸ್ತೆ ಅಭಿವೃದ್ಧಿಪಡಿಸಲು ಸಂಬಂಧ ಪಟ್ಟ ಇಲಾಖೆಗಳ ಜತೆ ಪ್ರಥಮ ಹಂತದ ಮಾತುಕತೆಗಳನ್ನು ನಡೆಸಿದ್ದರು. ಈ ರಸ್ತೆ ಅಭಿವೃದ್ಧಿ ಹೊಂದಿದರೆ ಎಳನೀರು ಪ್ರದೇಶದ ಜನರಿಗೆ ಭಾರಿ ಅನುಕೂಲವಾಗಲಿದೆ. ಈಗಾಗಲೇ ಕಂದಾಯ ವ್ಯಾಪ್ತಿಯಲ್ಲಿರುವ ಈ ರಸ್ತೆಯ ಪ್ರದೇಶಗಳಲ್ಲಿ ಕಾಂಕ್ರಿಟಿಕರಣದ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಅರಣ್ಯ ವ್ಯಾಪ್ತಿಯ ರಸ್ತೆ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಹೊಂದಿಲ್ಲ.

“ಹರೀಶ್ ಪೂಂಜ ಅವರು ಶಾಸಕರಾದ ಬಳಿಕ ಎಳನೀರಿನ ಅಭಿವೃದ್ಧಿ ಶಕೆ ಆರಂಭವಾಗಿದ್ದು ಹಲವಾರು ಕಾಮಗಾರಿಗಳು ನಡೆದಿವೆ. ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದರಿಂದ ಈ ಪ್ರದೇಶದ ಜನರ ಅನೇಕ ವರ್ಷಗಳ ಮೂಲಭೂತ ಸೌಕರ್ಯ ಕೊರತೆಗೆ ಪರಿಹಾರ ಸಿಕ್ಕಿದೆ”- ಪ್ರಕಾಶ್ ಜೈನ್, ಕೃಷಿಕರು, ಎಳನೀರು

Sneha Gowda

Recent Posts

ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮೋದಿ ಮನವಿ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಎಂದರೆ ಮಂಗಳವಾರ ನಡೆಯುತ್ತಿದೆ. ದೇಶದ 93 ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕು…

3 mins ago

ಪ್ರಜ್ವಲ್ ರೇವಣ್ಣನ ಗೆ ಕಠಿಣಾತಿ ಕಠಿಣ ಶಿಕ್ಷೆ ನೀಡಬೇಕು; ಪ್ರಧಾನಿ ಮೋದಿ

ಪ್ರಜ್ವಲ್ ರೇವಣ್ಣನನ್ನು ವಿದೇಶದಿಂದ ಕರೆ ತಂದು ಕಠಿಣ ಶಿಕ್ಷೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೊದಲ ಬಾರಿಗೆ…

7 mins ago

2ನೇ ಹಂತದ ಲೋಕಸಭೆ ಚುನಾವಣೆ: ಮತ ಚಲಾಯಿಸಿದ ಬಿಎಸ್​ ವೈ

ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಬಿಎಸ್​…

20 mins ago

2ನೇ ಹಂತದ ಲೋಕಸಭೆ ಚುನಾವಣೆ; ಕೊಪ್ಪಳದಲ್ಲಿ ಮತದಾನ ಬಹಿಷ್ಕಾರ

ಲೋಕಸಭೆ ಚುನಾವಣೆಗೆ ರಾಜ್ಯದ ಎರಡನೇ ಹಂತದ ಮತದಾನ ಇಂದು (ಮೇ 7) ಆರಂಭವಾಗಿದೆ. ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ…

29 mins ago

30 ಕೋಟಿ ರೂ. ನಗದು ಪತ್ತೆ: ಸಚಿವ ಆಲಂಗೀರ್​ ಆಪ್ತ ಸಂಜೀವ್​ ಲಾಲ್ ಬಂಧನ

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾರ್ಖಂಡ್​ನ ಸಚಿವ ಆಲಂಗೀರ್ ಆಲಮ್​ ಆಪ್ತ ಸಂಜೀವ್​ ಲಾಲ್ ಅವರನ್ನು ಬಂಧಿಸಿದ್ದಾರೆ. ಜಾರ್ಖಂಡ್ ಸಚಿವ ಅಲಂಗೀರ್…

1 hour ago

ಅಹಮದಾಬಾದ್‌ನಲ್ಲಿ ಮತದಾನ ಮಾಡಿದ ಪ್ರಧಾನಿ ಮೋದಿ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಎಂದರೆ ಮಂಗಳವಾರ ನಡೆಯುತ್ತಿದೆ. ದೇಶದ 93 ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕು…

1 hour ago