Categories: ಮಂಗಳೂರು

ಮಂಗಳೂರು: ಕಸ್ಟಮ್ಸ್ ಅಧಿಕಾರಿಗಳಿಂದ 1 ಕೆಜಿ 625 ಗ್ರಾಂ ಚಿನ್ನವಶ

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಫೆಬ್ರವರಿಯಲ್ಲಿ ಭಾರಿ ಚಿನ್ನ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದ್ದು,1 ಕೆಜಿ 625 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.

ಫೆ.01ರಿಂದ 15ರ ವರೆಗೆ ನಡೆಸಿದ ಕಾರ್ಯಾಚರಣೆಗಳಲ್ಲಿ ಅಧಿಕಾರಿಗಳು ದುಬೈ ಮತ್ತು ಬಹ್ರೇನ್ ನಿಂದ ಆಗಮಿಸಿದ ಐವರು ಪುರುಷ ಪ್ರಯಾಣಿಕರಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಈ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ವಶಪಡಿಸಿಕೊಳ್ಳಲಾದ ಚಿನ್ನದ ಮಾರುಕಟ್ಟೆ ಮೌಲ್ಯ 91ಲಕ್ಷದ 35 ಸಾವಿರದ 850 ರೂ.ಆಗಿದೆ. ಚಿನ್ನ ಮಾತ್ರವಲ್ಲದೆ ಭಾರತೀಯ ರೂಪಾಯಿ 6ಲಕ್ಷದ 54 ಸಾವಿರದ 750ರೂ. ಮೌಲ್ಯದ ವಿದೇಶಿ ನೋಟುಗಳನ್ನು ಓರ್ವ ಪ್ರಯಾಣಿಕನಿಂದ ವಶಕ್ಕೆ ಪಡೆಯಲಾಗಿದೆ.

ಚಿನ್ನವನ್ನು ಪೇಸ್ಟ್ ರೂಪದಲ್ಲಿ ಘನ ಗಮ್‌ನೊಂದಿಗೆ ಬೆರೆಸಿ ಅಂಡಾಕಾರದ ಪ್ಯಾಕೆಟ್‌ಗಳಾಗಿ ಮಾಡಿ ಗುದನಾಳದಲ್ಲಿ ಮರೆಮಾಚಿ, ಟ್ರಾಲಿ ಬ್ಯಾಗ್ ನ ಹ್ಯಾಂಡಲ್ ನಲ್ಲಿ ಮರೆಮಾಚಿದ್ದು, ರಟ್ಟಿನ ಪೆಟ್ಟಿಗೆಯಲ್ಲಿ ಪೇಸ್ಟ್ ರೂಪದಲ್ಲಿ ಮರೆಮಾಚಿದ್ದು ಸೇರಿ ವಿವಿಧ ರೂಪದಲ್ಲಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Ashika S

Recent Posts

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

17 mins ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

35 mins ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

49 mins ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

1 hour ago

ಪೆನ್‌ಡ್ರೈವ್‌ ಕೇಸ್‌ : ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌, ಮಹಿಳೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಮುಖಂಡ, ವಕೀಲರೂ ಆಗಿರುವ ದೇವರಾಜೇಗೌಡರನ್ನು 14…

1 hour ago

ರೈತನ ಆರು ತಿಂಗಳ ಶ್ರಮ ಅರ್ಧಗಂಟೆಯಲ್ಲೇ ಹೋಮ

ಇಂದು ಸಂಜೆ ಸುರಿದ ಬಾರಿ ಮಳೆಗೆ ರೈತ ಬೆಳೆದಿದ್ದ ಬಾಳೆ ಫಸಲು ಸಂಪೂರ್ಣವಾಗಿ ನಾಶವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿಯಲ್ಲಿ…

2 hours ago