Categories: ಮಂಗಳೂರು

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಲೋಬೊ ರಿಂದ ಆಟೋ ರಿಕ್ಷಾ ಚಾಲಕ, ಮಾಲಕರೊಂದಿಗೆ ಸಂವಾದ

ಮಂಗಳೂರು: ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ರಿಂದ ಇಂದು ತಾ 8.5.2023ರಂದು ನಗರದ ಆಟೋ ಪಾರ್ಕ್ ಗಳಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಯೋಜನೆಯನ್ನು ಮಾಜಿ ವಿಧಾನಪರಿಷತ್ ಸದಸ್ಯರು, ಆಟೋ ರಿಕ್ಷಾ ಸಂಘದ ಗೌರವ ಅಧ್ಯಕ್ಷರಾದ ಐವನ್ ಡಿಸೋಜಾ ರವರು ಏರ್ಪಡಿಸಿದ್ದರು.

ಅಭ್ಯರ್ಥಿ ಜೆ. ಆರ್ ಲೋಬೊರವರು ಐವನ್ ಜತೆಗೂಡಿ ಕಂಕನಾಡಿ ಕರಾವಳಿ ಪಾರ್ಕ್ ನಿಂದ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿ ಫಾದರ್ ಮುಲ್ಲರ್ ಪಾರ್ಕ್, ಹೈ ಲ್ಯಾಂಡ್ ಯುನಿಟಿ ಪಾರ್ಕ್, ಸೂರಜ್ ಪಾರ್ಕ್, ಓ. ಪಿ. ಪಾರ್ಕ್, ರೈಲ್ವೆ ಪಾರ್ಕ್ ಕಾಪ್ರಿಗುಡ್ಡ ಪಾರ್ಕ್ ಗೆ ತೆರಳಿ ರಿಕ್ಷಾ ಮಾಲಕರು, ಚಾಲಕರ ಬಳಿ ತೆರಳಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಸಂವಾದದಲ್ಲಿ ಜೆ. ಆರ್. ಲೋಬೊ  ಮಾತನಾಡುತ್ತಾ, ರಿಕ್ಷಾ ಚಾಲಕ, ಮಾಲಕರು ಮಂಗಳೂರಿನ ರಾಯಭಾರಿಗಳು. ಯಾಕೆಂದರೆ, ಹೊರ ಊರಿನಿಂದ ಬಂದ ಜನರನ್ನು ಮನೆ ತನಕ ಬಹಳ ಜಾಗೃತೆಯಿಂದ ಮುಟ್ಟಿಸಿಬಿಡುವ ಪ್ರವೃತ್ತಿ ಅವಿಸ್ಮರಣೀಯ. ರಿಕ್ಷಾ ಚಾಲಕ, ಮಾಲಕರ ಕಷ್ಟದ ಅರಿವು ಕಾಂಗ್ರೆಸ್ ಪಕ್ಷಕ್ಕೆ ಇದೆ.ಆಟೋ ಚಾಲಕರ ಕಲ್ಯಾಣಕ್ಕೆ ಸ್ಥಿರ ಸರಕಾರದ ಅಗತ್ಯ ಇದೆ. ನಮಗೆ ಅಧಿಕಾರ ಸಿಕ್ಕಿದರೆ ನಿಮ್ಮ ಸೇವೆಗೆ ಸದಾ ಸಿದ್ದ ಎಂದರು.

ಈ ಸಂದರ್ಭದಲ್ಲಿ ಮಾಜಿ ಎಂಎಲ್ ಸಿ ಮಾತನಾಡಿ, ಆಟೋ ರಿಕ್ಷಾ ಚಾಲಕರು ಬಹಳ ಕಷ್ಟ ದಲ್ಲಿದ್ದಾರೆ. ಈಗಿನ ಸರಕಾರ ಯಾವ ಸ್ಪಂದನೆಯನ್ನು ಮಾಡುವುದಿಲ್ಲ. ಒಳ್ಳೆಯ ಆಡಳಿತಕ್ಕೆ ಕಾಂಗ್ರೆಸ್ ಸರಕಾರ ಬೇಕು.ಎಲ್ಲರೂ ಕಾಂಗ್ರೆಸ್ ನ್ನು ಬೆಂಬಲಿಸಿ ಲೋಬೊರವರನ್ನು ಶಾಸಕರಾಗಿ ಆಯ್ಕೆ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಎಐಸಿಸಿ ಅನಿವಾಸಿ ಭಾರತೀಯ ಘಟಕದ ಅಧ್ಯಕ್ಷೆ ಡಾ. ಆರತಿ ಕೃಷ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಟಿ. ಕೆ. ಸುಧೀರ್, ಅಲಿಸ್ಟರ್ ಡಿಕುನ್ನಾ, ಭಾಸ್ಕರ್ ರಾವ್, ಇಮ್ರಾನ್, ಹಬೀಬ್ ಕಣ್ಣೂರು, ಸತೀಶ್ಸ ಪೆಂಗಲ್, ಸಲಿಂ, ಮಿಲಾಜ್ ಅತ್ತಾವರ, ಗೀತಾ ಸುವರ್ಣ, ವಿನಯ್ ಮಸ್ಕಾರೆನ್ಹಸ್ ಮೊದಲಾದವರು ಉಪಸ್ಥಿತರಿದ್ದರು.

Sneha Gowda

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

19 mins ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

32 mins ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

45 mins ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

1 hour ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

1 hour ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

1 hour ago