Categories: ಮಂಗಳೂರು

ಮಂಗಳೂರು: ಆರ್ಯ ಯಾನೆ ಮರಾಠ ಸಮಾಜ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಂಗಳೂರು: ಆರ್ಯ ಯಾನೆ ಮರಾಠ ಸಮಾಜ ಸಂಘ (ರಿ) ಮಂಗಳೂರು-ಕಾಸರಗೋಡು ಇದರ ಯೋಜಿತ ಕಾರ್ಯಗಳಲ್ಲಿ ಒಂದಾದ ಪ್ರತಿಭಾ ಪುರಸ್ಕಾರ,ವಿದ್ಯಾರ್ಥಿ ವೇತನ,ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸಹಾಯ ಧನ, ಸಾಧಕರ ಸಮ್ಮಾನ ಹಾಗೂ ಅಡ್ವೊಕೇಟ್ ಎಲ್ಲೋಜಿ ರಾವ್ ಸಂಸ್ಮರಣಾ ಕಾರ್ಯಕ್ರಮ ಆರ್ಯ ಮರಾಠ ಭವನ, ಜಪ್ಪಿನಮೊಗರುವಿನಲ್ಲಿ ನಡೆಯಿತು.

ಮಂಗಳಾದೇವಿ ಶ್ರೀರಾಮಕೃಷ್ಣ ಮಠದ ಏಕಗಮ್ಯಾನಂದಜೀ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಆರ್ಯಾ ಮರಾಠ ಸಂಘ ಇದರ ಅಧ್ಯಕ್ಷರಾದ  ವಾಮನ ರಾವ್ ವಾಗ್ಮನ್, ಮುಳ್ಳ೦ಗೋಡು ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡರು.ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ವೀಣಾ ಮಂಗಳ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸತೀಶ್ ಕುಂಪಲ, ಪುತ್ತೂರು ಉಪ ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಾದ ಶ್ರೀಮತಿ ತ್ರಿವೇಣಿ ರಾವ್ ಕೆ., ಮಾಧೋಜಿ ರಾವ್ ಬೇಡೆಕರ್ ರಾಜಶ್ರೀ ರೈಸ್ ಮಿಲ್ ಮುಂಡ್ಕೂರು,  ಸುಧಾಕರ್ ರಾವ್ ಬಹುಮಾನ್ ಮಾಲಕರು ಮಂಗಳೂರು ಇಲೆಕ್ಟ್ರಿಕಲ್ಸ್ ಕಾರ್ಕಳ, ಶ್ರೀಮತಿ ಪ್ರೇಮಲತಾ ವೈ ರಾವ್, ಅಧ್ಯಕ್ಷ ರು ಅಡ್ವೊಕೇಟ್ ಎಲ್ಲೋಜಿ ರಾವ್ ಮೆಮೋರಿಯಲ್ ಟ್ರಸ್ಟ್,  ಗಿರೀಶ್ ರಾವ್ ಬಹುಮಾನ್ ಪ್ರತಿನಿಧಿ ರಾಯಲ್ ಆರ್ಯಾಸ್ ದುಬೈ, ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಸಾಧಕರುಗಳನ್ನುಗೌರವಿಸಲಾಯಿತು.ಸಾಹಿತ್ಯ ಕ್ಷೇತ್ರದಲ್ಲಿ ಡಾ. ಎ.ಮೋಹನ್ ಕುಂಟಾರ್, ಶೈಕ್ಷಣಿಕ ಕ್ಷೇತ್ರದಲ್ಲಿ ಡಾ.ಪಲ್ಲವಿ ಕೀರ್ತನ್ ಕುಮಾರ್ ಲಾಡ್, ಯಕ್ಷಗಾನ ಕ್ಷೇತ್ರದಲ್ಲಿ ಎನ್.ಕೇಶವ ಶಕ್ತಿನಾಗರ, ಬಾಲ ಪ್ರತಿಭೆಗಳಾದ ತುಷಾರ್ ಜಿ ರಾವ್, ಸಾಹಿತ್ಯ ಕೆ. ಪಿ. ಇವರುಗಳನ್ನು ಗೌರವಿಸಲಾಯಿತು.

ಕಾಸರಗೋಡು ಹಾಗೂ ಮಂಗಳೂರು ಸೇರಿದಂತೆ 82 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 125ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷ ರಾದ ಧನಂಜಯ ಬಹುಮಾನ್, ಪ್ರಮೋದ್ ಬಹುಮಾನ್, ಜತೆ ಕಾರ್ಯದರ್ಶಿಗಳಾದ ನಾರಾಯಣ ಲಾಡ್, ಶಿಶುಪಾಲ್ ಭೊಂಸ್ಲೆ, ಉಪ ಕೋಶಾಧಿಕಾರಿ ಹರಿಶ್ಚಂದ್ರ ಜಾಧವ್, ಯುವ ವೇದಿಕೆ ಸಂಚಾಲಕ ಧರ್ಮರಾಜ್ ಜಾಧವ್, ಮಹಿಳಾ ಸಂಚಾಲಕಿ ಶ್ರೀಮತಿ ಪೂರ್ಣಿಮಾ ಚಂದ್ರಮಾನ್ ಕಾರ್ಯಕ್ರಮ ಸಂಚಾಲಕರಾದ ರಾಜೇಶ್ ಪಾಟೀಲ್, ಸದಸ್ಯರುಗಳಾದ, ಬಿ. ಜೆ ಚಂದ್ರಶೇಖರ್ ಪಾಟೀಲ್, ಗಾಯತ್ರಿ ಸೂರ್ಯನಾರಾಯಣ ಚವಾಣ್, ರಾಜ್ ಕುಮಾರ್ ಲಾಡ್, ಶ್ರೀಮತಿ ವಾಣಿ ಮೊರೆ, ಯಶ್ವತ ಧರೇಕರ್, ಸಾರಿಕ  ಭೊಂಸ್ಲೆ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ವಲಯ ಸಂಚಾಲಕರು ಉಪಸ್ಥಿತರಿದ್ದರು.

ಭೋಜನ ವಿರಾಮದ ಬಳಿಕ ಸಮಾಜ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.ಕಾರ್ಯದರ್ಶಿ ಪ್ರದೀಪ್ ಚಂದ್ರ ಜಾಧವ್ ಸ್ವಾಗತಿಸಿ ಕೋಶಾಧಿಕಾರಿ ಮೋಹನ್ ರಾವ್ ಭೊಂಸ್ಲೆ ವಂದಿಸಿದರು. ದಿವ್ಯ ಪವಾರ್ ಮತ್ತು ಮಮತಾ ಬಹುಮಾನ್ ಕಾರ್ಯಕ್ರಮ ನಿರೂಪಿಸಿದರು.

Ashika S

Recent Posts

ಮಲ್ಲಮ್ಮ ಜಯಂತಿಗೆ ಅಗೌರವ : ರೆಡ್ಡಿ ಸಮಾಜ ಪದಾಧಿಕಾರಿಗಳ ಪ್ರತಿಭಟನೆ

ಚಿಟಗುಪ್ಪ'ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಗೌರವ…

1 min ago

ಮಳೆಯಿಂದ​ ಪಂದ್ಯ ರದ್ದು : ರಾಯಲ್ಸ್​ ವಿರುದ್ಧ ರಾಜಸ್ಥಾನ್​ ಕಣಕ್ಕೆ

17ನೇ ಆವೃತ್ತಿಯ ಐಪಿಎಲ್​ನ ಕೊನೆಯ ಲೀಗ್​ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್​ ರಾಯಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ತಂಡಗಳು ಈ…

20 mins ago

ನಿಮ್ಮ ಡಲ್‌ಸ್ಕಿನ್‌ಗೆ ಇದು ಬೆಸ್ಟ್‌ ಪಾನೀಯ : ಎರಡು ವಾರದಲ್ಲೆ ಉತ್ತಮ ರಿಸಲ್ಟ್‌

ಬೇಸಿಗೆಯಲ್ಲಿ ಬಿಸಿಲಿನ ತಾಪ, ಕಲುಷಿತ ನೀರು, ಮಾಲಿನಗೊಂಡ ವಾತಾವರಣದಿಂದಾಗಿ ಸಾಕಷ್ಟು ಜನರು ಚರ್ಮದ ಸಮಸ್ಯೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಡಲ್‌ಸ್ಕಿನ್‌ ಇರುವವರೂ…

31 mins ago

ಇಂದು 49 ಕ್ಷೇತ್ರಗಳಲ್ಲಿ 5ನೇ ಹಂತದ ಮತದಾನ

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನವು ಸೋಮವಾರ (ಮೇ 20) ನಡೆಯಲಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ…

50 mins ago

ಇಂದಿನ ರಾಶಿ ಭವಿಷ್ಯ : ಈ ರಾಶಿಯವರಿಗೆ ಹೊಸ ಉದ್ಯೋಗ ಆಫರ್ ಬರಲಿದೆ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ…

60 mins ago

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

9 hours ago