ಮಂಗಳೂರು

ಮಂಗಳೂರು ವಿಮಾನ ನಿಲ್ದಾಣ: ಪ್ರಯಾಣಿಕರ ಓಡಾಟದಲ್ಲಿ ಶೇ.76 ಪ್ರಗತಿ

ಮಂಗಳೂರು: ಇಲ್ಲಿನ ವಿಮಾನ ನಿಲ್ದಾಣ (ಎಂಐಎ)ದಲ್ಲಿ ದೇಶಿಯ ಹಾಗೂ ವಿದೇಶಿಯಾನಕ್ಕೆ ಸಂಬಂಧಿಸಿ 2022-23ನೇ ಸಾಲಿನಲ್ಲಿ ಪ್ರಯಾಣಿಕರ ಓಡಾಟದಲ್ಲಿ ಶೇ.76ರಷ್ಟು ಪ್ರಗತಿ ದಾಖಲಾಗಿದೆ.

ದೇಶದ ವಿಮಾನಯಾನ ಕ್ಷೇತ್ರ ಮತ್ತೆ ಚುರುಕುಗೊಳ್ಳುತ್ತಿದ್ದು ಅದರಂತೆ ಮಂಗಳೂರು ವಿಮಾನ ನಿಲ್ದಾಣದಲ್ಲೂ ಈ ಪ್ರಗತಿ ಕಂಡು ಬಂದಿದೆ. ಮಾತ್ರವಲ್ಲದೆ ಈ ಅವಧಿಯಲ್ಲಿ ಏರ್‌ ಟ್ರಾಫಿಕ್‌ನಲ್ಲೂ ಶೇ. 42ರಷ್ಟು ಹೆಚ್ಚಳವಾಗಿದೆ.

2022-23ನೇ ಆರ್ಥಿಕ ವರ್ಷದಲ್ಲಿ ಐಎಂಎ 17,94,054 ಪ್ರಯಾಣಿಕರನ್ನು ನಿಭಾಯಿಸಿದ್ದು, ಹಿಂದಿನ ಆರ್ಥಿಕ ವರ್ಷಕ್ಕಿಂತ ಶೇ.76ರಷ್ಟು ಪ್ರಗತಿಯಾಗಿದೆ. 2021-22ರಲ್ಲಿ ವಿಮಾನ ನಿಲ್ದಾಣ 10,16,559 ಪ್ರಯಾಣಿಕರನ್ನು ನಿಭಾಯಿಸಿದೆ. 17.94 ಲಕ್ಷ ಪ್ರಯಾಣಿಕರಲ್ಲಿ, 12.08 ಲಕ್ಷ ಪ್ರಯಾಣಿಕರು ದೇಶೀಯರು, ಉಳಿದ 5.86 ಲಕ್ಷ ಮಂದಿ ಸಾಗರೋತ್ತರ ಪ್ರಯಾಣಿಕರಾಗಿದ್ದಾರೆ.

ಈ ಅವಧಿಯಲ್ಲಿ 14,475 ಏರ್‌ ಟ್ರಾಫಿಕ್‌ ಮೂವ್‌ಮೆಂಟ್‌ (ವಿಮಾನಗಳ ಸಂಚಾರ)ಗಳನ್ನು ನಿರ್ವಹಣೆ ಮಾಡಲಾಗಿದ್ದು, ಶೇ.42ರಷ್ಟು ಬೆಳವಣಿಗೆ ದಾಖಲಾಗಿದೆ.

ಇದರಲ್ಲಿ 10,060 ದೇಶೀಯ ವಿಮಾನಗಳಾಗಿದ್ದು, 4,150 ಅಂತಾರಾಷ್ಟ್ರೀಯ ವಿಮಾನಗಳು. 265 ಚಾರ್ಟರ್ಡ್‌ ಫ್ಲೆ$çಟ್‌. 2021-22ರಲ್ಲಿ 7792 ದೇಶೀಯ, 2122 ಅಂತರಾಷ್ಟ್ರೀಯ ಮತ್ತು 298 ಚಾರ್ಟರ್ಡ್‌ ವಿಮಾನಗಳು ಸೇರಿದಂತೆ 10,212 ವಿಮಾನಗಳನ್ನು ನಿರ್ವಹಿಸಲಾಗಿದೆ.

ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ವಿಮಾನ ನಿಲ್ದಾಣವು ಮಾರ್ಚ್‌ ತಿಂಗಳಲ್ಲಿ ಪ್ರಯಾಣಿಕರ ದಟ್ಟಣೆಯಲ್ಲಿ ಶೇ.7ರಷ್ಟು ಬೆಳವಣಿಗೆ ಕಂಡಿದೆ.

ಮಾರ್ಚ್‌ ತಿಂಗಳಲ್ಲಿ 98,191 ದೇಶೀಯ ಪ್ರಯಾಣಿಕರು ಸೇರಿದಂತೆ 1,43,788 ಪ್ರಯಾಣಿಕರನ್ನು ನಿರ್ವಹಿಸಲಾಗಿದ್ದು, ಫೆಬ್ರವರಿ ತಿಂಗಳಲ್ಲಿ ಈ ಸಂಖ್ಯೆ 1,34,583 ಇತ್ತು. ವಿಮಾನಗಳ ಓಡಾಟವೂ ಮಾರ್ಚ್‌ನಲ್ಲಿ ಶೇ.7ರಷ್ಟು ಹೆಚ್ಚಾಗಿದೆ ಎಂದು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.

Sneha Gowda

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

8 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

9 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

10 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

10 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

10 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

10 hours ago