Categories: ಮಂಗಳೂರು

ಮಂಗಳೂರು: ಹ್ಯಾಮಿಲ್ಟನ್ ವೃತ್ತದಲ್ಲಿ ಸೌಹಾರ್ದ ದೀಪಾವಳಿಯ ಸಂಭ್ರಮ

ಮಂಗಳೂರು: ದೇಶಾದ್ಯಂತ ಆಚರಿಸಲ್ಪಡುವ ಬೆಳಕಿನ ಹಬ್ಬ ದೀಪಾವಳಿಯನ್ನು ಸೌಹಾರ್ದ ದೀಪಾವಳಿಯನ್ನಾಗಿ ಆಚರಿಸಬೇಕೆಂಬ ತೀರ್ಮಾನದ ಭಾಗವಾಗಿ ಸಮಾನ ಮನಸ್ಕರು ಮಂಗಳೂರು ಇದರ ಆಶ್ರಯದಲ್ಲಿ 26-10-2022ರಂದು ನಗರದ ಸ್ಟೇಟ್ ಬ್ಯಾಂಕ್ ಬಳಿಯಲ್ಲಿರುವ ಹ್ಯಾಮಿಲ್ಟನ್ ವೃತ್ತದಲ್ಲಿ ಸೌಹಾರ್ದ ದೀಪಾವಳಿಯನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು.

ಸರ್ವ ಜನತೆಯ ಮನೆ ಮನ ಬೆಳಗಿಸುವ ಹಬ್ಬವಾದ ದೀಪಾವಳಿಯು ಅಜ್ಞಾನ, ಅಂಧಶ್ರದ್ದೆ, ದ್ವೇಷ ತುಂಬಿದ ಕತ್ತಲೆಯನ್ನು ಹೋಗಲಾಡಿಸಿ, ವಿಜ್ಞಾನ, ವೈಜ್ಞಾನಿಕ ಮನೋಭಾವ, ಪ್ರೀತಿ ತುಂಬಿದ ಬೆಳಕನ್ನು ಮೂಡಿಸಬೇಕಾಗಿದೆ. ಆ ಮೂಲಕ ಸೌಹಾರ್ದತೆ ಮಾನವೀಯತೆ ಬೆಳಗಿಸಬೇಕೆಂಬ ಆಶಯದೊಂದಿಗೆ ಜರುಗಿದ ದೀಪಾವಳಿ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಡಿವೈಎಫ್ಐ ನಾಯಕರಾದ ಮುನೀರ್ ಕಾಟಿಪಳ್ಳ, ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್, ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್, ಕಾರ್ಮಿಕ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಸಮರ್ಥ್ ಭಟ್, ಯುaವಜನ ನಾಯಕರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಮನೋಜ್ ವಾಮಂಜೂರು, ತಯ್ಯೂಬ್ ಬೆಂಗರೆ, ಸಾಮಾಜಿಕ ಚಿಂತಕರಾದ ಅಸುಂತ ಡಿಸೋಜ, ಕ್ವೀನಿ ಪರ್ಸಿ ಆನಂದ್ ಮುಂತಾದವರು ಹಾಜರಿದ್ದರು.

ಖ್ಯಾತ ಹಾಡುಗಾರ್ತಿ ಮೇಘನಾ ಕುಂದಾಪುರರವರಿಂದ ಸೌಹಾರ್ದ ಹಾಡುಗಳು ಪ್ರಸ್ತುತಗೊಂಡವು. ಬಳಿಕ ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಲಾಯಿತು.

Ashika S

Recent Posts

ದ.ಕ ಬರ ಪರಿಸ್ಥಿತಿ ಹಿನ್ನಲೆ ನೀರು ಪೂರೈಕೆಗೆ ಜಿಲ್ಲಾಡಳಿತ ಮುಂಜಾಗೃತ ಕ್ರಮ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಸಾರ್ವಜನಿಕರಿಗರ ಕುಡಿಯುವ ನೀರನ್ನು ಪೂರೈಸಲು ಜಿಲ್ಲಾಡಳಿತದಿಂದ ಈಗಾಗಲೇ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ.…

3 mins ago

ಕಲ್ಲಡ್ಕದಲ್ಲಿ ಪ್ರಥಮ ಮಳೆಗೆ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ : ಸಂಚಾರ ಅಸ್ತವ್ಯಸ್ತ

ನಿನ್ನೆ ಸುರಿದ ಪ್ರಥಮ ಮಳೆಗೆ ಕಲ್ಲಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಡುಕುಂಟಾಗಿದೆ.

9 mins ago

ಡಾಲರ್‌ ಮೌಲ್ಯದ ಚಿನ್ನ ದರೋಡೆ ಪ್ರಕರಣ: ಭಾರತೀಯ ಮೂಲದ ವ್ಯಕ್ತಿ ಬಂಧನ

ಕೆನಡಾದಲ್ಲಿ ಬಹುಕೋಟಿ ಡಾಲರ್‌ ಮೌಲ್ಯದ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ವ್ಯಕ್ತಿಯನ್ನು ಟೊರೊಂಟೋ ವಿಮಾನ ನಿಲ್ದಾಣದಲ್ಲಿ ಅರೆಸ್ಟ್‌…

22 mins ago

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ : ಆನ್‌ಲೈನ್‌ನಲ್ಲಿ ಹೀಗೆ ನೋಡಿ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದೆ. ಈ ವರ್ಷದ ತೇರ್ಗಡೆ ಪ್ರಮಾಣ…

30 mins ago

ಪತ್ರಿಕಾ ವಿತರಕ ರೈಲಿಗೆ ಸಿಲುಕಿ ಆತ್ಮಹತ್ಯೆ

ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಬಳಿ ನಡೆದಿದೆ.

44 mins ago

ಮಲೆ ಮಾದಪ್ಪನಿಗೆ ಬೆಳ್ಳಿ ಆರತಿ ತಟ್ಟೆ ನೀಡಿದ ದಾನಿ : ಹೇಗಿದೆ ಗೊತ್ತಾ?

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಶ್ರೀ ಮಲೆ ಮಹದೇಶ್ವರನಿಗೆ ಬೆಂಗಳೂರಿನ ನಾಗಮಣಿ.ಎಂ ಮತ್ತು ಕುಟುಂಬ 01 ಕೆಜಿ…

53 mins ago