Categories: ಮಂಗಳೂರು

ಮಂಗಳೂರು: ಜೂನ್ ನಲ್ಲಿ ಮುಚ್ಚಲ್ಪಡುತ್ತಿದೆ 38 ವರ್ಷಗಳಷ್ಟು ಹಳೆಯದಾದ ಗ್ರಂಥಾಲಯ

ಮಂಗಳೂರು: ಸುಮಾರು ನಾಲ್ಕು ದಶಕಗಳಿಂದ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ, ಲೈಟ್ ಹೌಸ್ ಹಿಲ್ ರಸ್ತೆಯಲ್ಲಿರುವ ಐಕಾನಿಕ್ ಖಾಸಗಿ ಸಂಚಾರ ಗ್ರಂಥಾಲಯ-ರೀಡರ್ಸ್ ಡಿಲೈಟ್- ಈ ಜೂನ್ ನಲ್ಲಿ ಮುಚ್ಚಲಿದೆ. ಇದು ಓದುಗರಿಗೆ ನಿರಾಸೆಯನ್ನು ಉಂಟು ಮಾಡಿದೆ. ಇನ್ನು ಕೋವಿಡ್ ಸಾಂಕ್ರಾಮಿಕ ಸಮಯವು ಪುಸ್ತಕ ಓದುವ ಹವ್ಯಾಸವನ್ನು ಕಡಿಮೆ ಮಾಡ ತೊಡಗಿತು. ಹೀಗಾಗಿ 38 ವರ್ಷಗಳಷ್ಟು ಹಳೆಯದಾದ ಖಾಸಗಿ ಗ್ರಂಥಾಲಯ ಕ್ರಮೇಣ ಅವನತಿಯತ್ತ ಸಾಗಿದೆ.

ಈ ಗ್ರಂಥಾಲಯವನ್ನು 28 ಮಾರ್ಚ್ 1985ರಂದು ಜೆರಾಲ್ಡ್ ಫೆರ್ನಾಂಡಿಸ್ ಅವರು ತಮ್ಮ ಕುಟುಂಬದ ಬೆಂಬಲದೊಂದಿಗೆ ಪ್ರಾರಂಭಿಸುತ್ತಾರೆ. ನಂತರ ಓದಿನಲ್ಲಿ ಹೆಚ್ಚಿನ ಒಲವು ಹೊಂದಿದ್ದ ಅವರ ಪತ್ನಿ ವಿಲ್ಮಾ ಬೆಂಬಲಿಸುತ್ತ ಬಂದರು. ಬಳಿಕ ಜೆರಾಲ್ಡ್ ಓದುವ ಹವ್ಯಾಸವನ್ನು ಮುಂದುವರೆಸಲು ಉದ್ಯೋಗವಾಗಿ ದಿ. ಲಾರೆಸ್ಸ್ ಮಸ್ಕರೇನ್ ಹಸ್ ಸ್ಥಾಪಿಸಿದ ಮೊಲದ ಜನಪ್ರಿಯ ಗ್ರಂಥಾಲಯವನ್ನು ಸೇರಿಕೊಂಡರು. ಕೆಲವೇ ವರ್ಷಗಳಲ್ಲಿ ಸ್ವಂತ ಲೈಬ್ರರಿ ಆರಂಭಿಸುವ ಚಿಂತನೆ ಮೊಳಕೆಯೊಡೆದು ‘ರೀಡರ್ಸ್ ಡಿಲೈಟ್’ ಹುಟ್ಟಿಕೊಂಡಿತ್ತು.

ಬಳಿಕ 2019ರಲ್ಲಿ ಮುಚ್ಚಲ್ಪಟ್ಟ ಸ್ಟ್ಯಾಂಡರ್ಡ್ ಲೈಬ್ರರಿಯ ಮಾಲೀಕ ವಿಕ್ಟರ್ ಅಲ್ವಾರೆಸ್ ಜೊತೆಗೆ ಮುಂಬೈ ಮತ್ತು ಬೆಂಗಳೂರಿನ ಸಗಟು ವ್ಯಾಪಾರಿಗಳಿಂದ ಪುಸ್ತಕಗಳನ್ನು ಸಂಗ್ರಹಿಸಿದೆ ಎಂದು ಜೆರಾಲ್ಡ್ ಹೇಳಿದರು.  ಜೊತೆಗೆ ಓದುಗರ ನಾಡಿತ ಅರಿತು ಮಕ್ಕಳಿಂದ ಹಿಡಿದು ವೃದ್ದರವರೆಗೆ ಓದುಗರು ಯಾವುದಕ್ಕೆ ಆದ್ಯತೆ ನೀಡುತ್ತಾರೆ ಎಂಬುದನ್ನು ಅರಿತುಕೊಂಡು ಎಲ್ಲಾ ವರ್ಗದವರಿಗೂ ಅನುಕೂಲವಾಗುವಂತಹ ಪುಸ್ತಕಗಳನ್ನು ಸಂಗ್ರಹಿಸಿದ್ದೆ. ಒಂದು ಸಮಯದಲ್ಲಿ ನಮ್ಮ ಗ್ರಂಥಾಲಯದಲ್ಲಿ ಸುಮಾರು 40ಸಾವಿರ ಪುಸ್ತಕಗಳನ್ನು ಹೊಂದಿತ್ತು. ಇತ್ತೀಚಿನ ಟಿವಿ, ವಿಸಿಆರ್, ಡಿವಿಡಿ, ಸ್ಮಾರ್ಟ್‍ಫೋನ್ ಗಳ ದಾಳಿಯಿಂದ ಪುಸ್ತಕ ಓದುಗರ ಸಂಖ್ಯೆ ಕ್ರಮೇಣ ಕ್ಷೀಣಿಸತೊಡಗಿದೆ ಎಂದು ಜೆರಾಲ್ಡ್ ಮತ್ತು ವಿಲ್ಮಾ ಹೇಳಿದರು.

Ashitha S

Recent Posts

ಶಿವಸೇನೆಯ ನಾಯಕರನ್ನು ಕರೆತರಲು ಹೊರಟಿದ್ದ ಹೆಲಿಕಾಪ್ಟರ್​ ಪತನ

ಮಹಾರಾಷ್ಟ್ರದ ರಾಯಗಢದಲ್ಲಿ ಶುಕ್ರವಾರ ಶಿವಸೇನೆಯ ನಾಯಕರನ್ನು ಕರೆತರಲು ಹೊರಟಿದ್ದ ಹೆಲಿಕಾಪ್ಟರ್​ ಪತನಗೊಂಡಿರುವ ಘಟನೆ  ನಡೆದಿದೆ.

7 mins ago

ಅಂಚೆಮತಪತ್ರ ವಿತರಣೆ: ಮೇ.1 ರಂದು1262 ಜನ ಸಿಬ್ಬಂದಿಯಿಂದ ಮತದಾನ

ಧಾರವಾಡ ಲೋಕಸಭೆ ಮತಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿಯೋಜಿತರಾದ ಸಿಬ್ಬಂದಿ, ಅಧಿಕಾರಿಗಳು ಧಾರವಾಡ ಲೋಕಸಭಾ ಮತಕ್ಷೇತ್ರದ ಮತದಾರರಾಗಿದ್ದು ಮತ್ತು ಚುನಾವಣಾ ಆಯೋಗ…

25 mins ago

ಪುತ್ರನ ಕರ್ಮಕಾಂಡ; ಭವಾನಿ ರೇವಣ್ಣಗೂ ಎಸ್‌ಐಟಿ ನೋಟಿಸ್‌ !

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ದೇಶ್ಯಾದ್ಯಂತ ಸದ್ದು ಮಾಡುತ್ತಿದ್ದು, ಈಗಾಗಲೇ ಈ ಸಂಬಂಧ ಸಂತ್ರಸ್ತೆಯರ ಆರೋಪದ ಮೇಲೆ…

35 mins ago

ಲೈಂಗಿಕ ದೌರ್ಜನ್ಯ ಕೇಸ್: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ರೇವಣ್ಣ

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು…

45 mins ago

ಅಧಿಕ ಬಿಸಿಲಿನ ತಾಪಮಾನ, ಬಿಸಿಗಾಳಿಯಿಂದ ತತ್ತರಿಸಿದ ಧಾರವಾಡ

ಇದೀಗ ಅಧಿಕ ಬಿಸಿಲಿನ ತಾಪಮಾನ ಹಾಗೂ ಬಿಸಿಗಾಳಿಯಿಂದ ತತ್ತರಿಸುತ್ತಿದೆ. ಧಾರವಾಡ ಜಿಲ್ಲೆಯ ಜನರಂತೂ ಬಿಸಿಲಿನ ತಾಪಮಾನದಿಂದ ತತ್ತರಿಸಿ ಹೋಗಿದ್ದಾರೆ.

57 mins ago

ಪಾಕಿಸ್ತಾನದಿಂದಲೂ ಬಾಲರಾಮನ ದರ್ಶನ ಪಡೆಯಲು ಬರುತ್ತಿರುವ ಭಕ್ತರು

ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದಾಗಿನಿಂದ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿದ್ದು, ಇದೀಗ ಪಾಕಿಸ್ತಾನದಿಂದಲೂ ಇಂದು ಬಾಲರಾಮನ ದರ್ಶನ ಪಡೆಯಲು…

1 hour ago