News Karnataka Kannada
Sunday, April 21 2024
Cricket
ಮಂಗಳೂರು

ಮಂಗಳೂರು: ಅಮೃತ ನಗರ ಪೌರ ಸಮಿತಿಯ ಹತ್ತನೇ ವಾರ್ಷಿಕ ಸಭೆ

Mangaluru: 10th Annual Meeting of Amrita Nagar Pourakarmika Samiti
Photo Credit : News Kannada

ಮಂಗಳೂರು: ವಾಮಾಂಜೂರಿನ ಅಮೃತ ನಗರ ಪೌರ ಸಮಿತಿಯ ಹತ್ತನೇ ವಾರ್ಷಿಕ ಸಭೆಯನ್ನು ಜೂನ್ 25ರಂದು ಅಮೃತ ನಗರದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಪೌರ ಸಮಿತಿಯ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಶ್ರೀ ಲಕ್ಷ್ಮಣ್ ಶೆಟ್ಟಿಗಾರ್ ಅವರು ನೂತನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ವಿಟ್ಟಲ್ ಸಾಲಿಯಾನ್, ಉಪಾಧ್ಯಕ್ಷರಾಗಿ ರಾಜ್‌ಕುಮಾರ್ ಶೆಟ್ಟಿ , ಬಾಲಕೃಷ್ಣ ಎಂ, ಎಲ್ಎನ್.ವಿಕ್ಟರ್  ಮೊರಾಸ್ , ಶ್ರೀಮತಿ ಶೋಭಾ,ಜೆಸಿಂತಾ ಕುಟಿನ್ಹೂ ಹಾಗು ಅಬ್ದುಲ್ ಗಫೂರ್, ಕಾಯ೯ದರ್ಶಿಯಾಗಿ ಡಾ.ರಾಮಾನಂದ,
ಜಂಟಿ ಕಾರ್ಯದರ್ಶಿಗಳಾಗಿ ಬಾರ್ಟನ್ ಮೊಂತೆರೋ ,ಸಿಲ್ವಿಯಾ ಸಲ್ದಾನ ಕೋಶಾಧಿಕಾರಿಯಾಗಿ ಸುಧಾಕರ ಕಾರಂತ್
ಸಂಘಟನಾ ಕಾರ್ಯದರ್ಶಿಗಳಾಗಿ ರಾಕೇಶ್ ಲೋಬೋ ಹಾಗೂ ಡಾ.ಕಾರ್ತಿಕ್ ರೈ ಗೌರವ ಸಲಹೆಗಾರರಾಗಿ ಶಾಂತಾನ್ ಡಿಸಿಲ್ವ , ಸ್ಥಾನಿ ಕುಟ್ಟಿನೋ, ಶ್ರೀ ಜನಾರ್ಧನ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಿರುವೆಲು ವಾರ್ಡಿನ ಕಾರ್ಪೊರೇಟರ್ ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಹೇಮಲತಾ ರಘು ಸಾಲಿಯಾನ್ ಉಪಸ್ಥಿತರಿದ್ದರು.

ಹಾಗೆಯೇ ಅಮೃತ ನಗರ ಪರಿಸರದ ಸುಮಾರು 150 ಮೇಲ್ಪಟ್ಟ ನಾಗರಿಕರು ಉಪಸ್ಥಿತರಿದ್ದರು. ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಲಕ್ಷ್ಮಣ್ ಶೆಟ್ಟಿಗಾರ್ ಮಾತನಾಡಿ ಮುಂಬರುವ ದಿನಗಳಲ್ಲಿ ನಾವು ಎಲ್ಲಾ ಪದಾಧಿಕಾರಿಗಳನ್ನು ಸೇರಿಸಿ ನಮ್ಮ ಅಮೃತನಗರ ವನ್ನು ಮಾದರಿ ನಗರವನ್ನಾಗಿ ಮಾಡುತ್ತೇವೆ. ನಮಗೆ ಅಮೃತ ನಗರದ ಎಲ್ಲಾ ನಾಗರಿಕರು ಸಹಕರಿಸಬೇಕು ಎಂದು ಕರೆ ಕೊಟ್ಟರು.

ಕಾರ್ಪೊರೇಟರ್ ಹೇಮಲತಾ ರಘು ಸಾಲಿನ್ ಅವರು ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆಯಿಂದ ದೊರಕುವ ಎಲ್ಲಾ ಸಹಾಯವನ್ನು ಖಂಡಿತವಾಗಿಯೂ ಒದಗಿಸುತ್ತೇನೆ ಎಂದು ಬರವಸೆ ಕೊಟ್ಟು ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿದರು.

ಪೌರ ಸಮಿತಿಯ ಸದಸ್ಯರುಗಳಾದ ಜನಾರ್ಧನ ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ಲೋಕೇಶ್ ಕುಮಾರ್ ಅವರು ಧನ್ಯವಾದ ಸಮರ್ಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು