Categories: ಮಂಗಳೂರು

ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್‌ನಿಂದ ದ.ಕ. ಜಿಲ್ಲೆಯ ಶ್ರೇಷ್ಠ ಸಾಧಕರಿಗೆ ನೀಡಲಾಗುವ ಮಂಗಳೂರು ಪ್ರೆಸ್ ಕ್ಲಬ್‌ನ 2022ನೇ ಸಾಲಿನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿವಿಧ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ದ.ಕ. ಜಿಲ್ಲೆಯ ಸಾಧಕರನ್ನು ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿಗೆ ಶಿಫಾರಸು ಮಾಡಬಹುದಾಗಿದೆ. ಈ ವರೆಗೂ ಪ್ರಶಸ್ತಿ ಪಡೆಯದ ಎಲೆಮರೆಯ ಕಾಯಿಯಂತಿರುವ ಹಿರಿಯ ಸಾಧಕರಿಗೆ ಆದ್ಯತೆ ನೀಡಲಾಗುವುದು.

ಶಿಫಾರಸಿನಲ್ಲಿ ಸಾಧಕರ ಹೆಸರು, ಖಾಯಂ ವಿಳಾಸ, ವೃತ್ತಿ, ವಯಸ್ಸು, ದೂರವಾಣಿ ಸಂಖ್ಯೆ ಮೊದಲಾದ ಮಾಹಿತಿಗಳಿರಬೇಕು. ಸಾಧಕರ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಅಗತ್ಯ. ಶಿಫಾರಸು ಪತ್ರದೊಂದಿಗೆ ಸಾಧಕರ ಸಾಧನೆಯ ಬಗ್ಗೆ 200 ಶಬ್ದಗಳಿಗೆ ಮೀರದಂತೆ ಪರಿಚಯ ಹಾಗೂ ಸಂಪೂರ್ಣ ಮಾಹಿತಿಯೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಡಿಸೆಂಬರ್ 25, 2022 ಸಂಜೆ 4 ಗಂಟೆಯ ಒಳಗಾಗಿ ಪ್ರಧಾನ ಕಾರ್ಯದರ್ಶಿ, ಮಂಗಳೂರು ಪ್ರೆಸ್ ಕ್ಲಬ್, ಪತ್ರಿಕಾ ಭವನ ಕಟ್ಟಡ, ಉರ್ವ ಮಾರ್ಕೆಟ್ ರಸ್ತೆ, ಮಂಗಳೂರು -6. ಇಲ್ಲಿಗೆ ಕಳುಹಿಸಿಕೊಡಬಹುದಾಗಿದೆ.

ಒಬ್ಬರಿಗೆ ಇಬ್ಬರು ಸಾಧಕರನ್ನು ಶಿಫಾರಸು ಮಾಡುವ ಅವಕಾಶ ಇದೆ. ತಜ್ಞರ ಸಮಿತಿಯು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಿದೆ. ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಪ್ರೆಸ್ ಕ್ಲಬ್ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಮಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Gayathri SG

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

6 hours ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

6 hours ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

7 hours ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

7 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

7 hours ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

7 hours ago