ಮಂಗಳೂರು

ಮಂಗಳೂರು ವಿಮಾನ ನಿಲ್ದಾಣದಿಂದ ಹಗಲಿನ ವೇಳೆ ವಿಮಾನ ಹಾರಾಟ ಇಲ್ಲ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಂದಿನ ನಾಲ್ಕು ತಿಂಗಳುಗಳ ಕಾಲ ಹಗಲಿನ ವೇಳೆ ಬಳಕೆಗೆ ಲಭ್ಯವಿರದು.  ರನ್‌ವೇ ಪುನರ್‌ರಚನೆ ಕಾಮಗಾರಿಯಿಂದಾಗಿ ಕಾರಣದಿಂದ ವಿಮಾನಗಳು ರಾತ್ರಿ  ಮಾತ್ರ ಹಾರಾಟ ನಡೆಸಲಿವೆ.

ಇದರಿಂದ ಮಂಗಳೂರಿನಿಂದ ಇತರೆಡೆಗೆ ವಿಮಾನದಲ್ಲಿ ಪ್ರಯಾಣಿಸಬೇಕಾದವರು ಅನಿ ವಾರ್ಯವಾಗಿ ತೊಂದರೆ ಅನುಭವಿಸಲಿದ್ದಾರೆ. ನಿಲ್ದಾಣದಲ್ಲಿ  ರನ್‌ವೇ ಮರು ರಚನೆ ಕಾಮಗಾರಿ ಜ. 27ರಿಂದ ಆರಂಭವಾಗಿದ್ದು, ಮೇ 31ರ ವರೆಗೆ ನಡೆಯಲಿದೆ.

ಭಾನುವಾರ ಮತ್ತು ರಾಷ್ಟ್ರೀಯ ರಜಾದಿನ ಹೊರತುಪಡಿಸಿ ನಾಲ್ಕು ತಿಂಗಳುಗಳ ಕಾಲ ಬೆಳಗ್ಗೆ 9.30ರಿಂದ ಸಂಜೆ 6ರ ವರೆಗೆ ಕಾಮಗಾರಿ ನಡೆಯಲಿದ್ದು, ಈ ಅವಧಿಯಲ್ಲಿ ರನ್‌ವೇ ಬಳಕೆಗೆ ಲಭ್ಯವಿರದು. ಇಷ್ಟು ಸುದೀರ್ಘ ಅವಧಿಗೆ ವಿಮಾನ ಸೇವೆ ಹಗಲು ಪ್ರಯಾಣಿಕರಿಗೆ ಕಷ್ಟ ಲಭ್ಯವಿಲ್ಲದಿರುವುದು ತರಲಿದೆ.

ಸಾಮಾನ್ಯವಾಗಿ ಬೆಳಗ್ಗಿನಿಂದ ಸಂಜೆಯವರೆಗೆ ವಿಮಾನ ಪ್ರಯಾಣಿಕರಿಗೆ ಮಂಗಳೂರಿಗೆ ಆಗಮನ-ನಿರ್ಗಮನ ಕಷ್ಟವೇನಲ್ಲ. ಆದರೆ ಸದ್ಯ ವಿಮಾನ ಪ್ರಯಾಣ ಸಮಯ ಮುಂಜಾನೆ 4 ಅಥವಾ 5 ಗಂಟೆಗೆ ಇರುವುದರಿಂದ ಪ್ರಯಾಣಿಕರು ಮಧ್ಯರಾತ್ರಿಯೇ ವಿಮಾನ ನಿಲ್ದಾಣಕ್ಕೆ ಬರಬೇಕಾಗಿದೆ.

ಮಂಗಳೂರಿನಿಂದ ಬೆಂಗಳೂರು, ಮುಂಬಯಿ ಅಥವಾ ಇತರ ಕಡೆಗೆ ಹೋಗಿ, ಅಲ್ಲಿಂದ ಬೇರೆ ಕಡೆಗೆ ಪ್ರಯಾಣಿಸುವ ವಿಮಾನ ಪ್ರಯಾ ಣಿಕರಿಗೆ ಇದು ಮತ್ತೊಂದುಕಿರಿಕಿರಿ. ಯಾಕೆಂದರೆ ಮಧ್ಯಾಹ್ನ ಇತರ ಏರ್‌ಪೋರ್ಟ್‌ಗೆ ತಲುಪ ಬೇಕಾದವರು ಈಗ ಮುಂಜಾನೆ ಅಥವಾ ಒಂದು ದಿನದ ಮುನ್ನವೇ ಮಂಗಳೂರಿನಿಂದ ತೆರಳಬೇಕಾಗುತ್ತದೆ.

ಕಾಮಗಾರಿಯಿಂದಾಗಿ ಬೆಳಗ್ಗೆ 9.30ರ ಮೊದಲು ಮತ್ತು ಸಂಜೆ 6 ಗಂಟೆಯ ಅನಂತರ ಮಾತ್ರ ರನ್‌ವೇ ತೆರೆದಿರುತ್ತದೆ. ಒಂದು ವೇಳೆ ಈ ಗಡುವಿನ ಕೊನೆಯ ಹಂತದಲ್ಲಿ ಯಾವುದೇ ವಿಮಾನ ಆಗಮನ/ನಿರ್ಗಮನ ತಡವಾದರೆ ಪ್ರಯಾಣಿಕರಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಎರಡು ದಿನಗಳ ಹಿಂದೆ ಬೆಳಗ್ಗೆ 9.20ಕ್ಕೆ ಮಂಗಳೂರಿನಿಂದ ಮಸ್ಕತ್‌ಗೆ ವಿಮಾನ ತೆರಳಲು ಸಿದ್ಧವಾಗಿತ್ತು. ಆ ವೇಳೆಗೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಎದುರಾಯಿತು. ಅದನ್ನು 9.35ಕ್ಕೆ ಸರಿ ಪಡಿಸಲಾಯಿತಾದರೂ 5 ನಿಮಿಷ ಮುನ್ನ ರನ್‌ವೇ ಮುಚ್ಚುಗಡೆ ಆಗಿ ಸಂಚಾರಕ್ಕೆ ಅವಕಾಶ ಸಿಗಲಿಲ್ಲ. ಹೀಗಾಗಿ ಪ್ರಯಾಣಿಕರು ಸಂಜೆಯ ವರೆಗೆ ನಿಲ್ದಾಣದಲ್ಲಿಯೇ ಕಾಯಬೇಕಾದ ಪರಿಸ್ಥಿತಿ ಒದಗಿತು. ಕೊನೆಗೆ ವಿಮಾನ ಸಂಜೆ 6.25ಕ್ಕೆ ಸಂಚರಿಸಿತು!

ಕೇಂದ್ರ ಗೃಹ ಸಚಿವರಿಗೂ ಅಡ್ಡಿ:  ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ. 11ರಂದು ಮಧ್ಯಾಹ್ನ ಪುತ್ತೂರಿಗೆ ಭೇಟಿ ನೀಡಲಿದ್ದಾರೆ. ಅವರು ಮಂಗಳೂರಿಗೆ ಆಗಮಿಸುವ ಯೋಚನೆಯಿತ್ತು. ಆದರೆ ರನ್‌ವೇ ಕಾಮಗಾರಿಯಿಂದಾಗಿ ಅವರು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಪುತ್ತೂರಿಗೆ ಹೆಲಿಕಾಪ್ಟರ್‌ನಲ್ಲಿ ಬರಲಿದ್ದಾರೆ. ಆದರೆ ರಾತ್ರಿ ಮಂಗಳೂರು ರನ್‌ವೇ ತೆರೆದಿರುವ ಕಾರಣ ಇಲ್ಲಿಂದಲೇ ಮರು ಪ್ರಯಾಣ ಕೈಗೊಳ್ಳಲಿದ್ದಾರೆ. ಚುನಾವಣೆ ಸನಿಹದಲ್ಲಿರುವ ಕಾರಣ ಇನ್ನೂ ಹಲವು ನಾಯಕರ ಸಂಚಾರ ಬದಲಾವಣೆಗೆ ರನ್‌ವೇ ಮುಚ್ಚುಗಡೆ ಕಾರಣವಾಗಲಿದೆ!

2,450 ಮೀ. ಉದ್ದ ಮತ್ತು 45 ಮೀ. ಅಗಲದ ಮಂಗಳೂರಿನ ಕಾಂಕ್ರೀಟ್ ರನ್‌ವೇಯನ್ನು 2006ರ ಮೇ ತಿಂಗಳಿನಲ್ಲಿ ಬಳಕೆಗೆ ಮುಕ್ತಗೊಳಿಸಲಾಗಿತ್ತು.

ಎರಡು ರನ್‌ವೇ ಗಳಿರುವ ಕರ್ನಾಟಕದ ಮೊದಲ ಹಾಗೂ ಕಾಂಕ್ರೀಟ್ ರನ್‌ವೇ ಹೊಂದಿರುವ ಮೊದಲ ನಿಲ್ದಾಣ: ರನ್‌ವೇಯನ್ನು ಅದರ ಸೂಕ್ಷ್ಮ ಮತ್ತು ಮ್ಯಾಕ್ರೋ ವಿನ್ಯಾಸವನ್ನು ಸುಧಾರಿಸಲು ಪುನಾರಚನೆ ಮಾಡಲಾಗುತ್ತಿದ್ದು, ಕಾಮಗಾರಿ ರನ್‌ವೇ ಸೆಂಟರ್‌ಲೈನ್ ದೀಪಗಳ ರಚನೆಯನ್ನೂ ಒಳಗೊಂಡಿದೆ. ಪ್ರತೀ ದಿನ ಹಗಲಿನಲ್ಲಿ ಕೆಲವೇ ಮೀಟರ್‌ ಕಾಮಗಾರಿ ನಡೆಸಿ ರಾತ್ರಿ ವಿಮಾನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಕಾಮಗಾರಿ ಪೂರ್ಣಗೊಂಡ ಬಳಿಕ ರಾತ್ರಿ ಮತ್ತು ಕಡಿಮೆ ಗೋಚರ ಪರಿಸ್ಥಿತಿಗಳಲ್ಲಿ ವಿಮಾನ ಉಡ್ಡಯನ-ಅವತರಣಗಳಿಗೆ ಸಹಾಯವಾಗಲಿದೆ.

Sneha Gowda

Recent Posts

ನೂರಕ್ಕೆ ನೂರು ‘ಇಂಡಿಯಾ’ ಮೈತ್ರಿಗೆ ಅಧಿಕಾರ: ಈಶ್ವರ ಖಂಡ್ರೆ

'ದೇಶದಲ್ಲಿ ಈ ಸಲ 'ಇಂಡಿಯಾ' ಒಕ್ಕೂಟ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ…

2 mins ago

ನಾನು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ ಎಂದ ವಿರಾಟ್​​ ಕೊಹ್ಲಿ

ವಿರಾಟ್​​ ಕೊಹ್ಲಿ ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ. ಅವರು ಹೇಳಿರುವ ಆಡಿಯೋ ಸಮೇತ ದೃಶ್ಯ ವೈರಲ್​ ಆಗಿದೆ. 

17 mins ago

ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಮಹಿಳೆಯ ತಲೆ ಸಿಕ್ಕಿಕೊಂಡು ಪರದಾಟ

ಕೆಎಸ್‌ಆರ್‌ಟಿಸಿ ಬಸ್‌ ನ ಕಿಟಕಿಯಿಂದ ಉಗುಳಲು ಹೋಗಿ ಮಹಿಳೆಯೊಬ್ಬರ ತಲೆ ಸಿಕ್ಕಿಕೊಂಡಿರುವ ಘಟನೆ ನಡೆದಿದೆ.

39 mins ago

92ನೇ ಜನ್ಮದಿನ ಆಚರಿಸಿಕೊಳ್ಳದಿರಲು ಎಚ್‌.ಡಿ. ದೇವೇಗೌಡರ ನಿರ್ಧಾರ!

ಇದೇ ತಿಂಗಳ 18 ರಂದು 92ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಈ ಬಾರಿ ಹುಟ್ಟುಹಬ್ಬ…

41 mins ago

ಬಂಡೀಪುರ ರಸ್ತೆಯಲ್ಲಿ ಜೋಡಿ ಜಿಂಕೆಗಳ ಕುಸ್ತಿ

ವಾಹನಗಳ ಸಂಚಾರವಿದ್ದರೂ ರಸ್ತೆಬದಿಯಲ್ಲಿ ಜೋಡಿ ಜಿಂಕೆಗಳು ನಾನಾ-ನೀನಾ ಎಂದು ಕುಸ್ತಿ ಮಾಡಿದ ಘಟನೆ ಮೈಸೂರು-ಉಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬಂಡೀಪುರದ…

58 mins ago

‘ಜೀವನಕ್ಕೆ ಹೊಸಬರು ಬರಲಿದ್ದಾರೆ’: ಕುತೂಹಲ ಮೂಡಿಸಿದ ಪ್ರಭಾಸ್ ಪೋಸ್ಟ್ ವೈರಲ್‌

ಪ್ರಭಾಸ್ ಮದುವೆ ಬಗ್ಗೆ ಆಗಾಗ್ಗೆ ಸುದ್ದಿ ಹರಡುತ್ತಲೇ ಇರುತ್ತದೆ. ದರಲ್ಲಿಯೂ ನಟಿ ಅನುಷ್ಕಾ ಶೆಟ್ಟಿ ಜೊತೆಗಂತೂ ಪ್ರಭಾಸ್ ಮದುವೆಯೇ ಆಗಬಿಟ್ಟಿದ್ದಾರೆ…

1 hour ago