Categories: ಮಂಗಳೂರು

ಸೇಂಟ್ ಜೋಸೆಫ್ ಕಾಲೇಜ್‌ ನಲ್ಲಿ ಯಶಸ್ವಿಯಾಗಿ ನಡೆದ ಝೆಪೈರ್‌-2024 ವಿಚಾರ ಸಂಕಿರಣ

ಮಂಗಳೂರು: ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಇದರ ʼವ್ಯವಹಾರ ಆಡಳಿತ ವಿಭಾಗʼ ದ ವತಿಯಿಂದ ಎರಡು ದಿನಗಳ ಕಾಲ ನಡೆದ ಝೆಪೈರ್‌ 2024 (ನಿರ್ವಹಣೆ ಮತ್ತು ಸಾಂಸ್ಕೃತಿಕ ಉತ್ಸವ) ಯಶಸ್ವಿಯಾಗಿ ನಡೆಯಿತು.

ಮಾ.26ರಂದು ಕಲಾಂ ಆಡಿಟೋರಿಯಂ, ಅಕಾಡೆಮಿಕ್ ಬ್ಲಾಕ್ II ನಲ್ಲಿ ನೆರವೇರಿದ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಖಿಲೇಶ್ ಬಿ ಸಿ ಪ್ರಾಜೆಕ್ಟ್ ಮ್ಯಾನೇಜರ್, ಮೂಡೀಸ್ ರೇಟಿಂಗ್ಸ್ (2007-09 ಬ್ಯಾಚ್‌ನ ಹಳೆಯ ವಿದ್ಯಾರ್ಥಿ) ಭಾಗಿಯಾಗಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭಾಹಾರೈಸಿದರು. ಇನ್ನು ಡಾ ರಿಯೊ ಡಿಸೋಜಾ ಪ್ರಾಂಶುಪಾಲರು, SJEC., ಗೌರವ ಅತಿಥಿಯಾಗಿ ರೆವ್. ಫ್ರಾ ಕೆನೆತ್ ರೇನರ್ ಕ್ರಾಸ್ಟಾ ಸಹಾಯಕ ನಿರ್ದೇಶಕ, SJEC., ಹಾಗು ಸಮಾರಂಭದ ಅಧ್ಯಕ್ಷತೆಯನ್ನು ರೆ.ಫಾ ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ನಿರ್ದೇಶಕರು, SJEC ವಹಿಸಿಕೊಂಡಿದ್ದರು.

ಇನ್ನು ಈ ಕಾರ್ಯಕ್ರಮದ ವೇದಿಕೆಯಲ್ಲಿ ಡಾ ಪ್ರಕಾಶ್ ಪಿಂಟೋ ಡೀನ್, ಎಮ್.ಬಿ.ಎ., ಶ್ರೀಮತಿ ಆಚಾರ್ಯ ಚಿತ್ರಲೇಖಾ ಜೆ ಅಧ್ಯಾಪಕ ಸಂಯೋಜಕ- ಜೆಫಿರ್ ಹಾಗು ವಿದ್ಯಾರ್ಥಿ ಸಂಚಾಲಕರಾದ ಪ್ರಜ್ವಲ್ ಎಸ್.ಕೆ, ಹೃತಿಕ್ ಚಂದ್ ಉಪಸ್ಥಿತರಿದ್ದರು.

ಇಂದು ನಡೆದ ಹಲವು ಸ್ಪರ್ಧೆಯ ವಿಜೇತರ ವಿವಗಳು ಹೀಗಿದೆ. . .
ಬ್ಯುಸಿನೆಸ್‌ ಕ್ವಿಜ್ ನಲ್ಲಿ ನಿರಂಜನ್‌, ಹಾಗು ರಾಕೇಶ್‌ ಪ್ರಸಾದ್‌ ಕೆ ವಿವೇಕಾನಂದ ಕಾಲೇಜು ಇವರು ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಇನ್ನು ದ್ವಿತೀಯ ಬಹುಮಾನವನ್ನು ಕೆನಾರ ಕಾಲೇಜಿನ ಕಾರ್ತಿಕ್‌ ಹಾಗು ಮಿಥುನ್‌ ಪಡೆದುಕೊಂಡರು.

ಫೈನನ್ಸ್‌ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಅಕ್ಷಯ ಹಾಗೂ ಸೌಜನ್ಯ ಎಜೆಐಎಮ್‌ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಶ್ರೀಹರಿ ಹಾಗು ಮನೀಷಾ ಮಂಗಳೂರು ಯುನಿವರ್ಸಿಟಿ ಕೊಣಾಜೆ ಇವರು ಪಡೆದುಕೊಂಡರು.

ಹೆಚ್‌ ಆರ್‌ ವಿಭಾಗದಲ್ಲಿ,  ಪ್ರಥಮ ಸ್ಥಾನವನ್ನು ಅರ್ಪಿತ ಹಾಗು ಪ್ರಕೃತಿ ಎಮೈಟಿಇ ಪಡೆದುಕೊಂಡರೆ, ದ್ವಿತೀಯ ಸ್ಥಾನ ಭುವನ ಹಾಗು ಧನ್ಯ ಇವರು ಪಡೆದುಕೊಂಡರು.

ಮಾರ್ಕೇಟಿಂಗ್‌ ವಿಭಾಗದಲ್ಲಿ,  ಪ್ರಥಮ ಬಹುಮಾನ ಎಮ್‌ಐಟಿಇ ಯ ನಾರೀಶ್‌ ಹಾಗು ಅದಿತ್ಯ ಪಡೆದುಕೊಂಡರೆ, ದ್ವಿತೀಯ ಬಹುಮಾನ ಕೆನಾರ ಕಾಲೇಜಿನ ಪ್ರಿತಿ ಹಾಗು ಶ್ರೀನಿಧಿ ಪಡೆದುಕೊಂಡರು.

ಬಿಜಿಎಮ್‌ ಐ ನಲ್ಲಿ ಯೆನೆಪೊಯಾದ ಝೈನ್‌, ಅಭಿ ಎ, ಇಕ್ಬಾಲ್‌ ಹಾಗು ಸಂದೇಶ್‌ ದ್ವಿತೀಯ ಸ್ಥಾನ ಪಡೆದುಕೊಂಡರೆ, ಪ್ರಥಮ ಸ್ಥಾನವನ್ನು ಸೈಂಟ್‌ ಫಿಲೋಮಿನ ಕಾಲೇಜಿನ ಅಶ್ವಿತ್‌ ಶೆಟ್ಟಿ, ಯಶ್ವಂತ್‌ ಎನ್‌ ಟಿ, ಯಶ್ವಿನ್‌ ಎಸ್‌ ಸಿ ಹಾಗು ಚೇತನ್‌ ಡಿ ಪಡೆದುಕೊಂಡರು.

ಬ್ರ್ಯಾಂಡ್‌ ರಂಗೋಲಿ ವಿಭಾಗದಲ್ಲಿ ಸುಪ್ರಿಯ ಹಾಗು ದೀಕ್ಷಿತ ರನ್ನರ್‌ ಅಪ್‌, ಪ್ರತಿಕ್ಷಾ ಹಾಗು ಶ್ರೀಲಕ್ಷ್ಮೀ ಆರ್‌ ಉಡುಪ ಪದವು ಕಾಲೇಜು ಇವರು ಪ್ರಥಮ ಸ್ಥಾನ ಪಡೆದಿದ್ದಾರೆ.

ಇನ್ನು ಫೇಸ್‌ ಪೈಂಟಿಂಗ್‌ ಸ್ಪರ್ಧೆಯಲ್ಲಿ ಮಾನಸ ಜಿ, ಶ್ರೇಯಾಸ್‌ ಕೆ.ಬಿ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಪವಿತ್ರ ಹಾಗು ಪ್ರಜ್ಞಾ ಕೆ ಗೌಡ ಎಸ್‌ ಡಿ ಎಮ್‌ ಪಿಜಿ ಸೆಂಟರ್‌ ಉಜಿರೆ ಇವರು ಪಡೆದುಕೊಂಡರು.

ಇನ್ನು ಟ್ರೇಶರಿ ಹಂಟ್‌ ನಲ್ಲಿ ಅಭಿಲಾಷ್‌ ಹಾಗು ಮನ್ವಿತ್‌ ಪ್ರಥಮ ಸ್ಥಾನ ಪಡೆದರೆ, ಅನುರಾಗ್‌ ವಿಲ್ಮೊಲ್‌ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹಾಡುಗಾರಿಕೆಯಲ್ಲಿ ಬಿಪಿ ಲಿಖಿತ್‌, ಅರ್ಪಣಾ ಎಸ್‌ ಡಿ ಎಮ್‌ ಪಿಜಿ ಉಜಿರೆ ಇವರು ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನ ಲೋಹಿತ್ಯಾ ಹಾಗು ಶ್ರದ್ಧಾ ವಿವೇಕಾನಂದ ಕಾಲೇಜು ಪುತ್ತೂರು ಇವರು ಪಡೆದುಕೊಂಡರು.

ಇನ್ನು ಛಾಯಾಚಿತ್ರ ವಿಭಾಗದಲ್ಲಿ ವಿಲ್ಸನ್‌ ಡಿಸೋಜಾ ಪದವು ಕಾಲೇಜು ದ್ವೀತಿಯ ಸ್ಥಾನ ಪಡೆದುಕೊಂಡರೆ, ಪ್ರಥಮ ಸ್ಥಾನವನ್ನು ಶ್ರೇಯಸ್‌ ಶ್ರೀನಿವಾಸ್‌ ಕಾಲೇಜ್‌ ಇವರು ಪಡೆದುಕೊಂಡರು.

Ashitha S

Recent Posts

ನಟಿ ರೂಪಾ ಅಯ್ಯರ್‌ ಗೆ ಆನ್ ಲೈನ್ ನಲ್ಲಿ ವಂಚನೆ: ಹಣ ದೋಚೋಕೆ ಟ್ರೈ ಮಾಡಿದ ಕಳ್ಳರು

ಸ್ಯಾಂಡಲ್‌ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಅವರಿಗೆ ಆನ್ ಲೈನ್ ಕಳ್ಳರು ಕಾಟ ಕೊಟ್ಟಿದ್ದಾರೆ. ಸಿಸಿಬಿ ಸಿಸಿಬಿ ಅಧಿಕಾರಿಗಳೆಂದು ಕಾಲ್…

14 mins ago

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು: ಪ್ರಹ್ಲಾದ್ ಜೋಶಿ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ವಿಚಾರ, ಸಂಪೂರ್ಣ ಈ ಕೇಸ್ ನಲ್ಲಿ ಅತ್ಯಂತ ಗೊಂದಲವಿದೆ. ನಮ್ಮ ಪಾರ್ಟಿ ಹಾಗೂ…

38 mins ago

ಬಿರುಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್ ಅರಳಿ ಮರ: ನಾಲ್ಕು ಮನೆಗಳು ಜಖಂ

ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಅರಳಿ ಮರವೊಂದು ಬೇರು ಸಮೇತ ನಾಲ್ಕು ಮನೆಗಳ ಮೇಲೆ ಉರುಳಿ ಬಿದ್ದು ಮನೆಗಳು…

52 mins ago

ಕೇಜ್ರಿವಾಲ್‌ಗೆ ಷರತ್ತು ವಿಧಿಸಿ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಮಧ್ಯಂತ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಸಹ…

1 hour ago

ಅಶ್ಲೀಲ‌ ವಿಡಿಯೋ ಕೇಸ್: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.

2 hours ago

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಶವ ಪತ್ತೆ

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ ಶವವಾಗಿ ಪತ್ತೆಯಾಗಿದ್ದಾನೆ.

2 hours ago