News Karnataka Kannada
Wednesday, April 17 2024
Cricket
ಮಂಗಳೂರು

ಉದ್ಘಾಟನೆಗೊಂಡಿದ್ದ ಮಾಧವ ರತ್ನ ಬಿಗ್‌ಬಜಾರ್‌ ಗೆ ಕೆಲವೇ ಗಂಟೆಯಲ್ಲಿ ಬೀಗ

Madhava Ratna Big Bazaar, which was inaugurated, closed within a few hours
Photo Credit : News Kannada

ಬಂಟ್ವಾಳ: ವಿಟ್ಲದ ಅಡ್ಡದ ಬೀದಿಯಲ್ಲಿರುವ ಜೆ.ಎಮ್.ಜೆ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಂಡಿದ್ದ ಮಾಧವ ರತ್ನ ಬಿಗ್‌ಬಜಾರ್‌ ಗೆ ಕೆಲವೇ ಗಂಟೆಯಲ್ಲಿ ಬೀಗ ಜಡಿದಿದ್ದಾರೆ.‌

ವಿಟ್ಲದ ಅಡ್ಡದಬೀದಿಯಲ್ಲಿ ಶುಕ್ರವಾರ ಬೆಳಿಗ್ಗೆ ಅದ್ಧೂರಿಯಾಗಿ ಬಿಗ್‌ಬಜಾರ್‌ ಶುಭಾರಂಭಗೊಂಡಿತ್ತು. ಸಂಜೆ ಇಲ್ಲಿಗೆ ಆಗಮಿಸಿದ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗೋಪಾಲ ನಾಯ್ಕ ಮತ್ತು ಸಿಬ್ಬಂದಿ ಪರಿಶೀಲಿಸಿದ್ದಾರೆ. ಇಲ್ಲಿ ವ್ಯಾಪಾರ ನಡೆಸಲು ಪ.ಪಂ ನಿಂದ ಯಾವುದೇ ಅನುಮತಿ ಪಡೆಯದಿರುವುದು ಗಮನಕ್ಕೆ ಬಂದಿದೆ. ಬಳಿಕ ಅಧಿಕಾರಿಗಳು ಅಂಗಡಿ ಬೀಗ ಜಡಿದಿದ್ದಾರೆ. ಬಿಗ್‌ಬಜಾರ್‌ನ ಪ್ರಚಾರದ ಬ್ಯಾನರ್ ಅನ್ನು ವಿದ್ಯುತ್ ಟ್ರಾನ್ಸ್ ಫಾರ್ಮಾರ್ ಗೆ ಅಳವಡಿಸಿದ್ದು, ಇದು ಕಾನೂನು ಬಾಹಿರವಾಗಿದ್ದು, ಅದನ್ನು ಕೂಡಾ ಅಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು