Categories: ಮಂಗಳೂರು

ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮುಂದುವರಿಯಲಿ- ಹರೀಶ್ ಪೂಂಜ

ಬೆಳ್ತಂಗಡಿ: ಕೊರೊನಾ ಕಾಲಘಟ್ಟ, 2019ರ ನೆರೆ ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ತಾಲೂಕಿನ ನಾನಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವರ್ಗ ಮಾದರಿಯಾಗಿ ಕೆಲಸ ನಿರ್ವಹಿಸಿದೆ. ಸಮಾಜವನ್ನು ಪ್ರಾಮಾಣಿಕವಾಗಿ ಮುನ್ನಡೆಸಲು ತಾಲೂಕು ಆಡಳಿತ, ಜನಪ್ರತಿನಿಧಿಗಳು ಹಾಗೂ ಇಲಾಖೆಗಳು ಉತ್ತಮವಾಗಿ ಕೆಲಸ ನಿರ್ವಹಿಸಿದ್ದು,ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಕಾರ್ಯ ಕೈಗೊಳ್ಳುವುದನ್ನು ಮುಂದುವರಿಸಬೇಕು” ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಗುರುವಾರ ಲಾಯಿಲದ ಸಂಗಮ ಸಭಾಭವನದಲ್ಲಿ ತಾಲೂಕು ಆಡಳಿತ ಹಾಗೂ ತಾಪಂ ವತಿಯಿಂದ ನಡೆದ ಮುಂಗಾರು ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು “ಸರ್ವೆ ಇಲಾಖೆಯಲ್ಲಿ ಬಾಕಿ ಇರುವ ಕಡತಗಳ ವಿಲೇವಾರಿಯನ್ನು ತಕ್ಷಣ ಮಾಡಬೇಕು, ಪ್ರಕೃತಿ ವಿಕೋಪಗಳಿಗೆ ಸಂಬಂಧಪಟ್ಟ ಇಲಾಖೆಗಳು ತ್ವರಿತ ಪರಿಹಾರ ನೀಡಲು ಸನ್ನದ್ಧವಾಗಿರಬೇಕು. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿರುವ ಮುಂಗಾರು ಸಮಸ್ಯೆಗಳ ಕುರಿತು ಅಧ್ಯಕ್ಷರು,ಪಿಡಿಒಗಳು ಚರ್ಚಿಸಿ ತಕ್ಷಣ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಬೇಕು” ಎಂದು ತಿಳಿಸಿದರು.

ಎಂ ಎಲ್ ಸಿ ಪ್ರತಾಪ ಸಿಂಹ ನಾಯಕ್ ಮುಖ್ಯ ರಸ್ತೆಗಳ ಚರಂಡಿ ದುರಸ್ತಿ ಇಷ್ಟರೊಳಗೆ ನಡೆಯಬೇಕಿತ್ತು. ಚರಂಡಿಗಳಲ್ಲಿರುವ ತ್ಯಾಜ್ಯ ವಿಲೇವಾರಿ, ದುರಸ್ತಿ ಇನ್ನಿತರ ಅಗತ್ಯ ಕೆಲಸಗಳ ಬಗ್ಗೆ ತಕ್ಷಣ ಗಮನಹರಿಸುವಂತೆ ಸೂಚಿಸಿದರು.

ನಿರ್ವಹಣಾ ಅನುದಾನ ಕೊರತೆ
ಚರಂಡಿ ದುರಸ್ತಿಯ ಟೆಂಡರ್ ಹಾಗೂ ನಿರ್ವಹಣಾ ಅನುದಾನ ಇನ್ನು ಕೂಡ ಬಿಡುಗಡೆಗೊಂಡಿಲ್ಲ.ಈ ಕಾರಣದಿಂದ ಚರಂಡಿ ದುರಸ್ತಿ ಆರಂಭವಾಗಿಲ್ಲ ಎಂಬ ವಿಚಾರ ಸಭೆಯ ಗಮನಕ್ಕೆ ತರಲಾಯಿತು. ಚರಂಡಿ ದುರಸ್ತಿಗೆ ಗುತ್ತಿಗೆದಾರರಲ್ಲಿ ವಿನಂತಿಸಿ ಕೂಡಲೇ ಕಾಮಗಾರಿ ನಡೆಸಲು ಇಂಜಿನಿಯರ್ ಅವರಿಗೆ ಸೂಚಿಸಲಾಯಿತು.

ಅಪಾಯಕಾರಿ ಮರಗಳು
ರಸ್ತೆ ಬದಿ ಇರುವ ಅಪಾಯಕಾರಿ ಮರ ಹಾಗೂ ಮರದ ರೆಂಬೆಗಳನ್ನು ತೆರೆವುಗೊಳಿಸುವ ಕುರಿತು ಆಯಾಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ತಕ್ಷಣ ಪರಿಶೀಲನೆ ನಡೆಸಿ ಅರಣ್ಯ ಇಲಾಖೆ ಹಾಗೂ ಮೆಸ್ಕಾಂಗೆ ಮಾಹಿತಿ ನೀಡಬೇಕು. ಹಾಗೂ ಇವುಗಳ ತೆರವು ಕಾರ್ಯ ಕೂಡಲೇ ಆರಂಭಿಸುವಂತೆ ಶಾಸಕರು ಸೂಚಿಸಿದರು.

ಆಡಳಿತ ಸನ್ನದ್ಧ
ಮಳೆಗಾಲದ ಸಮಸ್ಯೆಗಳ ತುರ್ತು ನಿರ್ವಹಣೆಗೆ ತಾಲೂಕು ಆಡಳಿತ ಸನ್ನದ್ಧವಾಗಿದ್ದು ಜನ-ಜಾನುವಾರು ರಕ್ಷಣೆಗೆ ಮುನ್ನೆಚ್ಚರಿಕೆ ಕೈಗೊಂಡಿದೆ.ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿರುವಂತೆ ಸೂಚಿಸಲಾಗಿದೆ. ಪ್ರವಾಹ ಉಂಟಾಗಬಹುದಾದ ಗ್ರಾಮಗಳಲ್ಲಿ ನುರಿತ ಈಜುಗಾರರ ಸೇವೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು ಅವಘಡಗಳು ಉಂಟಾದ ಸಂದರ್ಭ ತುರ್ತು ಸ್ಪಂದನೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ್ ಸುರೇಶ್ ಕುಮಾರ್ ಹೇಳಿದರು.

ತಾಪಂ ಇಒ ಕುಸುಮಾಧರ ಸ್ವಾಗತಿಸಿದರು. ಸಂಯೋಜಕ ಜಯಾನಂದ ಲಾಯಿಲ ವಂದಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.

ಜೂ. 4 ಕಿಂಡಿ ಅಣೆಕಟ್ಟು ಸ್ವಚ್ಛತೆ ಅಭಿಯಾನ
ಮಳೆಗಾಲದಲ್ಲಿ ನದಿಗಳು ತುಂಬಿ ಹರಿಯುವ ಸಮಯ ಕಿಂಡಿ ಅಣೆಕಟ್ಟುಗಳಲ್ಲಿ ಮರಮಟ್ಟು ಸಿಲುಕಿ ಹಾನಿ ಉಂಟಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ತಾಲೂಕಿನಾದ್ಯಂತ ಜೂ.4ರಂದು ಪಂಚಾಯಿತಿಗಳು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ನದಿ, ಹೊಳೆಗಳ ಪ್ರದೇಶಗಳಲ್ಲಿರುವ ಮರಮಟ್ಟು,ಕಿಂಡಿ ಅಣೆಕಟ್ಟುಗಳಲ್ಲಿರುವ ಮರ, ಅವುಗಳ ವ್ಯಾಪ್ತಿಯಲ್ಲಿರುವ ಮರದ ರೆಂಬೆಗಳನ್ನು ತೆರೆವುಗೊಳಿಸುವ ಅಭಿಯಾನ ನಡೆಸಲು ಶಾಸಕರು ಸೂಚನೆ ನೀಡಿದರು. ಈ ಬಗ್ಗೆ ಎಲ್ಲಾ ಪಂಚಾಯಿತಿಗಳಿಗೆ ತಕ್ಷಣ ಸೂಚನಾ ಪತ್ರ ನೀಡುವಂತೆ ತಾಪಂ ಇಒ ಅವರಿಗೆ ಸೂಚಿಸಲಾಯಿತು.

ಜೂ.5 ಗಿಡ ನೆಡುವ ಅಭಿಯಾನ
ಶಿಬಾಜೆ,ಶಿಶಿಲ,ಹತ್ಯಡ್ಕ,ಕಳೆಂಜ ಮೊದಲಾದ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಈ ಬಾರಿ ಕಾಡ್ಗಿಚ್ಚಿನಿಂದ ಸಾವಿರಾರು ಮರ ಗಿಡಗಳು ನಾಶವಾಗಿವೆ.ಜೂ.5 ವಿಶ್ವ ಪರಿಸರ ದಿನದಂದು ಈ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಸ್ಥಳೀಯ ಕಾಲೇಜುಗಳ ಎನ್ನೆಸ್ಸೆಸ್ ವಿದ್ಯಾರ್ಥಿಗಳ ಸಹಕಾರದಲ್ಲಿ ಹಣ್ಣಿನ ಗಿಡಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅತೀ ಹೆಚ್ಚು ಗಿಡಗಳನ್ನು ನೆಡುವಂತೆ ತಿಳಿಸಲಾಯಿತು.

Gayathri SG

Recent Posts

ಅರ್ಹತೆ ಇಲ್ಲದಿದ್ದರೂ ಕಾಮಗಾರಿ ಗುತ್ತಿಗೆ: ಬಸವರಾಜ ಜಾಬಶೆಟ್ಟಿ ಆರೋಪ

'ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರ ಸೋದರ ಸಂಬಂಧಿ ಜಗದೀಶ ಖೂಬಾ ಅವರಿಗೆ…

6 mins ago

ಜಾನುವಾರುಗಳಿಗೆ ಮೇವು ನೀಡಲು ಸರಕಾರಕ್ಕೆ ಆಗ್ರಹ

ಪ್ರತಿದಿನ ಜಾನುವಾರುಗಳಿಗೆ 6 ಕೆ.ಜಿ ಒಣಮೇವಿನ ಅವಶ್ಯಕತೆ ಇದೆ ಆದರೆ ಸರಕಾರ ಹಸಿರು ಮೇವಿನ ಬೀಜ ನೀಡಿದ್ದೇವೆ ಎಂದು ಹೇಳಿ…

7 mins ago

ದ.ಕ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ : ಡಾ.ಎಚ್.ಆರ್.ತಿಮ್ಮಯ್ಯ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ 6 ಬೆಡ್, ಪ್ರತಿ…

17 mins ago

ರಾಜ್ಯದಲ್ಲಿ ನಾಳೆ, ನಾಡಿದ್ದು ಗುಡುಗು ಸಹಿತ ವರುಣಾರ್ಭಟ

ಎರಡು ದಿನದ ಹಿಂದೆ ಸಿಲಿಕಾನ್ ಸಿಟಿಗೆ ಮಳೆರಾಯ ತಂಪೆರೆದು ಹೋಗಿದ್ದಾನೆ. ಸದ್ಯ ಇದರ ಬೆನ್ನಲ್ಲೇ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಲ್ಲಿ…

24 mins ago

ನಿಜಶರಣೆಯ ಮಾದರಿ ಬದುಕು: ಎಡೆಯೂರು ಶ್ರೀಗಳು

ಗುರು ಲಿಂಗ ಜಂಗಮರಲ್ಲಿ ಅನನ್ಯ ಭಕ್ತಿ ಹೊಂದಿದ್ದ ನಿಜಶರಣೆ ಹೇಮರಡ್ಡಿ ಮಲ್ಲಮ್ಮ, ಮಾನವೀಯ ಮೌಲ್ಯಗಳನ್ನು ಬೆಳಗಿಸಿದ ಮಾತೆ ಎಂದು ಎಡೆಯೂರು…

29 mins ago

ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಗ್ರಾಮಸ್ಥರ ಒತ್ತಾಯ

ಗ್ರಾಮದಲ್ಲಿ ಶಾಂತಿಯುತ ವಾತಾವರಣ ಕದಡುವ ಮೂಲಕ ಗ್ರಾಮಸ್ಥರ ನೆಮ್ಮದಿಗೆ ಧಕ್ಕೆ ತಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿ.ಕಾರೇಹಳ್ಳಿ…

31 mins ago