News Karnataka Kannada
Friday, April 19 2024
Cricket
ಮಂಗಳೂರು

ಕೂಳೂರು ಸೇತುವೆ ಕಾಮಗಾರಿ ಸ್ಥಗಿತ, ನಾಗರಿಕ ಹಿತರಕ್ಷಣಾ ವೇದಿಕೆ ಸದಸ್ಯರ ಪ್ರತಿಭಟನೆ

Kuloor bridge work stopped, members of Citizens' Welfare Forum stage protest
Photo Credit : News Kannada

ಮಂಗಳೂರು: ಮಂಗಳೂರು ನಗರ ಶೈಕ್ಷಣಿಕ, ವಾಣಿಜ್ಯ ನಗರಿಯಾಗಿ ದೇಶ, ವಿದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಆದರೆ ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳು ಅಭಿವೃದ್ಧಿಯಾಗಿಲ್ಲ. ಸ್ಮಾರ್ಟ್‌ಸಿಟಿ ಯೋಜನೆ ನಗರಕ್ಕೆ ದೊರೆತಿದ್ದರೂ ಇಲ್ಲಿನ ರಸ್ತೆಗಳ ಸ್ಥಿತಿ ದೇವರಿಗೇ ಪ್ರೀತಿ. ತಲೆ ಬುಡವಿಲ್ಲದ ಯೋಜನೆಗಳಿಂದ ವಾಹನ ಸವಾರರು, ಪಾದಚಾರಿಗಳು ಪರದಾಟ ಅನುಭವಿಸುವಂತಾಗಿದೆ.

ಅದೇ ರೀತಿ 2020ರಲ್ಲಿಯೇ ಶಂಕು ಸ್ಥಾಪನೆಯಾಗಿದ್ದ ಕೂಳೂರು ಸೇತುವೆ 2023 ಅರ್ಧ ಕಳೆದರೂ ಪೂರ್ಣಗೊಂಡಿಲ್ಲ. 60 ವರ್ಷ ಹಳೆಯ ಸೇತುವೆಯಲ್ಲಿಯೇ ವಾಹನ ಸಂಚಾರ ಮಾಡುವಂತಾಗಿದೆ. ಕೂಳೂರು ಹಳೆಯ ಸೇತುವೆ ಶಿಥಿಲವಾಗಿದ್ದು, 2020ರಲ್ಲಿ ಹೊಸ ಸೇತುವೆಗೆ ಶಿಲಾನ್ಯಾಸ ವಾಗಿತ್ತು. ಆದರೆ ಕಾಮಗಾರಿ ಆರಂಭಗೊಂಡು ಕೆಲ ತಿಂಗಳು ಭರದಿಂದ ಸಾಗಿತ್ತು. ಬಳಿಕ ಗುತ್ತಿಗೆದಾರರ ನಡುವಿನ ಗೊಂದಲದಿಂದ ಸ್ಥಗಿತಗೊಂಡಿದೆ. ಇದೀಗ ಹಳೇ ಸೇತುವೆಯಲ್ಲಿಯೇ ವಾಹನಗಳು ಸಂಚರಿಸುತ್ತಿವೆ. ಇದೀಗ ಸೇತುವೆ ಅವ್ಯವಸ್ಥೆ ವಿರುದ್ಧ ನಾಗರಿಕ ಹಿತರಕ್ಷಣಾ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು