ಮಂಗಳೂರು

ಹೃದಯ ಗಡ್ಡೆಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಹೊಸ ಮೈಲಿಗಲ್ಲು ಸಾಧಿಸಿದ ಅತ್ತಾವರ ಕೆಎಂಸಿ ಆಸ್ಪತ್ರೆ

ಮಂಗಳೂರು: ಮಂಗಳೂರಿನ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಯ ಆಂಕಾಲಜಿ ಕೇಂದ್ರವು ಗಮನಾರ್ಹ ಸಾಧನೆಯೊಂದನ್ನು ದಾಖಲಿಸುವ ಮೂಲಕ ವೈದ್ಯಕೀಯ ಉತ್ಕೃಷ್ಟತೆಯ ಅಸಾಮಾನ್ಯ ಸಮೂಹ ಪ್ರಯತ್ನ ಮತ್ತು ಪ್ರಾವೀಣ್ಯವನ್ನು ಮೆರೆದಿದೆ.

ಪೆರಿಕಾರ್ಡಿಯಲ್ ಟೆರಟೋಮಾ ಎಂಬ ಅಪರೂಪದ ಹೃದಯ ಗಡ್ಡೆಯನ್ನು ಹೊಂದಿದ್ದ ನವಜಾತ ಶಿಶುವಿಗೆ ಆಸ್ಪತ್ರೆಯ ಪರಿಣತ ವೈದ್ಯಕೀಯ ತಂಡವು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.

ಆಮ್ಲಜನಕ ಮಟ್ಟವು ಶೇ 40ಕ್ಕೆ ಕುಸಿದಿದ್ದುದರಿಂದ ಈ ಶಿಶು ಜನಿಸಿದ ತಕ್ಷಣವೇ ಚಿಕಿತ್ಸೆ ಒದಗಿಸುವುದು ಅನಿವಾರ್ಯವಾಗಿತ್ತು. ಹಿರಿಯ ಶಿಶು ಶಸ್ತ್ರಚಿಕಿತ್ಸಾ ತಜ್ಞ ಡಾ। ಸದಾಶಿವ ರಾವ್ ಪಲ್ಲದೆ ಅವರ ನೇತೃತ್ವದಲ್ಲಿ ಸರ್ಜಿಕಲ್ ಅಂಕಾಲಜಿಸ್ಟ್ ಡಾ| ಅರವಿಂದ ಎನ್ ನವಜಾತ ಶಿಶು ತಜ್ಞೆ ಡಾ| ಲಕ್ಷ್ಮಿ ಕಾಮತ್ ಹಿರಿಯ ಅರಿವಳಿಕೆ ಶಾಸ್ತ್ರಜ್ಞ ಡಾ| ಸುಮೇಶ್ ರಾವ್, ಡಾ| ಕಮಲಾಕ್ಷಿ ಭಟ್ ಡಾ| ನೂತನ್ ಕಾಮತ್ ಅವರನ್ನು ಒಳಗೊಂಡ ಬಹು ವಿಭಾಗೀಯ ವೈದ್ಯರ ತಂಡವು ಮಕ್ಕಳ ತಜ್ಞರು, ಶಸ್ತ್ರಚಿಕಿತ್ಸಾ ಕೊಠಡಿಯ ಸಿಬ್ಬಂದಿಗಳು ಮತ್ತು ನವಜಾತ ಶಿಶು ತೀವ್ರ ನಿಗಾ ಘಟಕದ ಸಿಬ್ಬಂದಿಗಳ ಸಹಕಾರದಲ್ಲಿ ಕಾರ್ಯಾಚರಣೆಗೆ ಮುಂದಾಯಿತು.

ಪರಿಕಾರ್ಡಿಯೋಸೆಂಟೆಸಿಸ್‌ನಿಂದ ಶಿಶುವಿನ ಪೆರಿಕಾರ್ಡಿಯಲ್ ಪ್ಯಾಕ್‌ ನಿಂದ 150 ೩ ಲೀಟರ್‌ಗಳನ್ನು ದ್ರವಾಂಶವನ್ನು ಹೊರತೆಗೆಯುವ ಮೂಲಕ ಶಿಶುವಿನ ಸ್ಥಿತಿಯನ್ನು ಸಾಕಷ್ಟು ಸುಧಾರಣೆಗೊಳಿಸಲಾಯಿತು. ಆ ಬಳಿಕ ಸಿಟಿ-ಸ್ಕ್ಯಾನ್ ನಂತರು ತಪಾಸಣೆಗಳನ್ನು ನಡೆಸಿದಾಗ ದೊಡ್ಡ ಗಾತ್ರದ ಗಡ್ಡೆಯು ಶಿಶುವಿನ ಹೃದಯ ಮತ್ತು ಪಧಾನ ರಕ್ತನಾಳಗಳ ಮೇಲೆ ಒತ್ತಡ ಹೇರುತ್ತಿರುವುದು ತಿಳಿದು ಬಂದು ಗಡ್ಡೆಯನ್ನು ನಿವಾರಿಸಲು ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸುವುದು ಅನಿವಾರ್ಯವಾಯಿತು.

ಇಂತಹ ಪಕರಣಗಳು ಅಪರೂಪ ಮತ್ತು ಶಸ್ತ್ರಚಿಕಿತ್ಸೆ ತುಂಬಾ ಸಂಕೀಣ ಎಂಬುದರ ಹೊರತಾಗಿಯೂ ಮಗು ಗುಣಮುಖವಾಗುವಲ್ಲಿ ಅತ್ಯಾವಶ್ಯಕ ಹೆಜ್ಜೆಯಾಗಿರುವ ರಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಜತೆಗೆ ನಿರ್ದಿಷ್ಟವಾಗಿ ಸೋಂಕು ನಿಯಂತ್ರಣದತ್ತ ಗಮನ ಕೇಂದ್ರೀಕರಿಸಿ ತೀವತರಹ ಮತ್ತು ಸವಾಲಾಗಿರುವ ರಸ್ತ್ರಚಿಕಿತ್ಸೆಯ ಬಳಿಕದ ಆರೈಕೆ ಹಂತವನ್ನೂ ನಿರ್ವಹಿಸಲಾಯಿತು.

ಡಾ। ಸದಾಶಿವ ರಾವ್ ಪಲ್ಲದೆ ಅವರು ಈ ಸವಾಲೆನಿಸುವ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಬಗ್ಗೆ ತುಂಬು ಹರ್ಷವನ್ನು ವ್ಯಕ್ತಪಡಿಸಿದ್ದು, ವೈದ್ಯಕೀಯ ಸಮೂಹದ ಸದಸ್ಯರ ಸೀಮಾರಹಿತ ಸಹಯೋಗ ಮತ್ತು ಅತ್ಯುತ್ಕೃಷ್ಟ ದರ್ಜೆಯ ವೈದ್ಯಕೀಯ ಚಿಕಿತ್ಸಾ ಕ್ರಮಗಳ ಆಳವಡಿಕೆಯೊಂದಿಗೆ ಇದು ಸಾಧ್ಯವಾಯಿತು ಎಂದಿದ್ದಾರೆ ನವಜಾತ ಶಿಶುವೊಂದರ ಹೃದಯದಲ್ಲಿದ್ದ ಗಡ್ಡೆಗೆ ಚಿಕಿತ್ಸೆ ಒದಗಿಸಿರುವ ಈ ಪ್ರಕರಣವು ಜಾಗತಿಕ ಮಟ್ಟದ ಯಶಸ್ವಿ ಉದಾಹರಣೆಗಳಲ್ಲಿ ಒಂದಾಗಿದ್ದು, ಸಮಗ್ರ ಕ್ಯಾನ್ಸರ್ ಆರೈಕೆಯಲ್ಲಿ ಕೆಎಂಸಿ ಆಸ್ಪತ್ರೆ ಅತ್ತಾವರವು ಮುಂಚೂಣಿಯಲ್ಲಿದೆ ಎಂಬುದಕ್ಕೂ ನಿದರ್ಶನವಾಗಿದೆ.

ಈ ವೈದ್ಯಕೀಯ ಮೈಲಿಗಲ್ಲು ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿರುವ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಮುಡಿಗೆ ಹೊಸ ಗರಿ ಎಂಬುದಾಗಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾಗಿರುವ ಡಾ. ಜಾನ್ ರಾಮಪುರಂ ಕೊಂಡಾಡಿದ್ದಾರೆ. ಈ ಸಾಧನೆಯು ಉತ್ಕೃಷ್ಟ ರೋಗಿ ಆರೈಕೆ ಮತ್ತು ಗುಣಮುಖರಾಗುವ ಪರಿಸರದ ನಿರ್ಮಾಣದ ನಿಟ್ಟಿನಲ್ಲಿ ಅತ್ತಾವರ ಕೆಎಂಸಿ ಆಸ್ಪತ್ರೆಯ ಬದ್ಧತೆಗೆ ಇನ್ನೊಂದು ನಿದರ್ಶನ ಎಂದು ಅವರು ಹೇಳಿದ್ದಾರೆ.

“ನವಜಾತ ಶಿಶುವಿಗೆ ಹೃದಯದಲ್ಲಿದ್ದ ಗಡ್ಡೆಗೆ ಯಶಸ್ವಿಯಾಗಿ ಚಿಕಿತ್ಸೆ ಒದಗಿಸಿರುವುದು ನಮ್ಮ ಆಸಕೆಯ ಉತ್ಕೃಷ್ಟ ವೈದ್ಯಕೀಯ ಸಾಮರ್ಥ್ಯ ಮತ್ತು ಸಹಾನುಭೂತಿಯ ರೋಗಿ ಆರೈಕೆ ಒದಗಿಸುವ ನಮ್ಮ ಬದ್ಧತೆಯನ್ನು ಉಲ್ಲೇಖಿಸುತ್ತದೆ. ರೋಗಿಗಳಿಗೆ ಪ್ರಶಾಂತ ಮತ್ತು ಗುಣಕಾರಿ ವಾತಾವರಣ ನಿರ್ಮಾಣದ ನಿಟ್ಟಿನಲ್ಲಿ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ ಮತ್ತು ಕ್ಲಾಸಮ್ ಡೀಲಕ್ಸ್ ಕೊಠಡಿಗಳ ಉದ್ಘಾಟನೆಯು ಗಮನಾಹಣ ಹೆಜ್ಜೆಗಳು ಈ ಹೊಸ ಕೇಂದ್ರವು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳನ್ನು ಹೊಂದಿದ್ದು ಸಮಗ್ರ ಮತ್ತು ಎಲ್ಲರ ಕೈಗೆಟಕಬಲ್ಲ ವೈದ್ಯಕೀಯ ಆರೈಕೆಯನ್ನು ಒದಗಿಸುವ ನಮ್ಮ ಧೈಯವನ್ನು ಪುನರ್‌ ಸ್ಯಾಪಿಸಿದೆ” ಎಂದು ಅವರು ತಿಳಿಸಿದ್ದಾರೆ.

ಅಪರೂಪದ ಮತ್ತು ಸಂಕೀರ್ಣ ವೈದ್ಯಕೀಯ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಅತ್ತಾವರ ಕೆಎಂಸಿ ಆಸ್ಪತೆಯು ಹೊಂದಿರುವ ಪರಿಣತಿಯನ್ನು ಈ ಸಾಧನೆಯು ಒತ್ತಿ ಹೇಳುತ್ತದೆಯಲ್ಲದೆ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯ ಮೂಲಕ ಎಲ್ಲರ ಕೈಗೆಟಕಬಲ್ಲಂತಹ ಆರೋಗ್ಯ ಸೇವೆಯನ್ನು ಒದಗಿಸುವ ಬದ್ಧತೆಗೆ ನಿದರ್ಶನವಾಗಿದೆ. ಯಶಸ್ವಿಯಾಗಿ ಚಿಕಿತ್ಸೆಗೆ ಒಳಪಟ್ಟು ಚೇತರಿಸಿಕೊಂಡಿರುವ ಶಿಶು ಈಗ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲು ಸಿದ್ಧವಾಗಿದ್ದು, ನಿಖರವಾದ ವೈದ್ಯಕೀಯ ಆರೈಕೆಯನ್ನು ಒದಗಿಸುವ ನಮ್ಮ ವೈದ್ಯಕೀಯ ತಂಡದ ಸಾಮೂಹಿಕ ಪ್ರಯತ್ನ ಮತ್ತು ಬದ್ದತೆಗೆ ಸಾಕ್ಷಿಯಾಗಿದೆ.

Ashika S

Recent Posts

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ: ಆರೋಪಿ ಬಿಭವ್‌ ಕುಮಾರ್‌ ವಶಕ್ಕೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ…

6 mins ago

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಪ್ರಯಾಣಿಕನ ಮೇಲೆ ಪ್ರಕರಣ ದಾಖಲು

ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಚೆಕ್-ಇನ್ ಬ್ಯಾಗ್‌ನಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಸುಳ್ಳು ಬೆದರಿಕೆ ಹಾಕಿ ಭೀತಿ…

15 mins ago

ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ : ನಿತಿನ್‌ ಗಡ್ಕರಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ…

27 mins ago

ತೀರ್ಥಯಾತ್ರೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ದಾರುಣ ಸಾವು

ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ…

45 mins ago

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು…

51 mins ago

ಮತ್ತೆ ವಿವಾದಕ್ಕೆ ಸಿಲುಕಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಒಂದು ವರ್ಷದ ಸಾಧನೆಯ ರಿಪೋರ್ಟ್ ಕಾರ್ಡ್ ಹಿಡಿದು ಹಿರಿಯ ಬಿಜೆಪಿ ಮುಖಂಡರ ಬಳಿ ಶಾಸಕ ಅಶೋಕ್ ಕುಮಾರ್ ರೈ ತೆರಳಿದ್ದು, ಶಾಸಕ…

60 mins ago