Categories: ಮಂಗಳೂರು

ದ.ಕನ್ನಡದಲ್ಲಿ ಯುಗಾದಿ ಹಬ್ಬದ ನಿಮಿತ್ತ ಬ್ರಹ್ಮಧ್ವಜ ಸ್ಥಾಪನೆಯ ಪ್ರಾತ್ಯಕ್ಷಿಕೆ

ದಕ್ಷಿಣ ಕನ್ನಡ :  ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಯುಗಾದಿ ಹಬ್ಬದ ನಿಮಿತ್ತ ಜಿಲ್ಲೆಯ ಮಂಗಳೂರು, ಉಜಿರೆ ಪುತ್ತೂರು, ಸುಳ್ಯ ಈ ಭಾಗಗಳಲ್ಲಿ ಬ್ರಹ್ಮಧ್ವಜದ ಸ್ಥಾಪನೆ ಹಾಗೂ ಶಾಸ್ತ್ರಾನುಸಾರ ಯುಗಾದಿ ಹಬ್ಬದ ಆಚರಣೆಯ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು.

ಯುಗಾದಿಯೆಂದರೆ ಹಿಂದೂಗಳ ನವ ವರ್ಷ ಆರಂಭದ ದಿನ ಮತ್ತು ಸೃಷ್ಟಿಯ ಆರಂಭ ದಿನ. ಈ ದಿನದಂದು ಬ್ರಹ್ಮಾಂಡದಲ್ಲಿನ ಪ್ರಜಾಪತಿ ದೇವತೆಯ ಲಹರಿಗಳು ಪೃಥ್ವಿಯ ಮೇಲೆ ಅತ್ಯಧಿಕ ಪ್ರಮಾಣದಲ್ಲಿ ಬರುತ್ತವೆ. ಯುಗಾದಿ ಹಬ್ಬದಂದು ಬ್ರಹ್ಮಧ್ವಜವನ್ನು ಸ್ಥಾಪನೆ ಮಾಡುವುದು ಮುಖ್ಯ ಆಚರಣೆ ಆಗಿದೆ .ಈ ನಿಟ್ಟಿನಲ್ಲಿ ಈ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು.

ದೊಡ್ಡ ಬಿದಿರಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಕಣವನ್ನು ಕಟ್ಟಿ ಅದರ ಮೇಲೆ ಸಕ್ಕರೆಯ ದಂಟು, ಬೇವಿನ ಚಿಗುರೆಲೆ, ಮಾವಿನ ಎಲೆ, ಕೆಂಪು ಹೂಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಸಿಂಗರಿಸಿ ಕೆಳಗಡೆ ಮಣೆಯ ಮೇಲೆ ರಂಗೋಲಿ ಬಿಡಿಸಿ ನಿಲ್ಲಿಸಬೇಕು. ಇದಕ್ಕೆ ‘ಬ್ರಹ್ಮ ಧ್ವಜಾಯ ನಮಃ ‘ಎಂದು ಹೇಳಿ ಸಂಕಲ್ಪಪೂರ್ವಕವಾಗಿ ಪೂಜೆ ಮಾಡಬೇಕು. ಬ್ರಹ್ಮದೇವನು ಈ ದಿನ ಸೃಷ್ಟಿಯನ್ನು ನಿರ್ಮಿಸಿದ ಕಾರಣ ಧರ್ಮಶಾಸ್ತ್ರದಲ್ಲಿ ಈ ದ್ವಜವನ್ನು ಬ್ರಹ್ಮ ಧ್ವಜ ಎಂದು ಕರೆಯಲಾಗಿದೆ.

ಬ್ರಹ್ಮ ಧ್ವಜದಿಂದ ವಾತಾವರಣದಲ್ಲಿನ ಪ್ರಜಾಪತಿ ಲಹರಿಗಳು ಕಲಶದಿಂದ ಮನೆಯಲ್ಲಿ ಪ್ರವೇಶಿಸುತ್ತವೆ. ಮರು ದಿನದಿಂದ ಈ ಕಳಶದಲ್ಲಿನ ನೀರು ಕುಡಿಯಲು ತೆಗೆದುಕೊಳ್ಳಬೇಕು. ಬ್ರಹ್ಮ ಧ್ವಜದ ಪೂಜೆಯಿಂದ ಪ್ರಜಾಪತಿ ಲಹರಿಗಳಿಂದ ಪೂಜಕನಿಗೆ ಮತ್ತು ಅವನ ಕುಟುಂಬದವರಿಗೆ ಲಾಭವಾಗುತ್ತದೆ. ಹಿಂದೂಗಳು ಈ ಹಬ್ಬವನ್ನು ಒಟ್ಟಿಗೆ ಸೇರಿ ಆಚರಿಸಿದರೆ ಅದರಿಂದ ಹಿಂದೂ ಸಂಘಟನೆ ಮತ್ತು ಸಂಸ್ಕೃತಿಯ ರಕ್ಷಣೆಯಾಗುತ್ತದೆ.

ಯಾವ ಭಾವದಿಂದ ಬ್ರಹ್ಮ ಧ್ವಜದ ಪೂಜೆಯನ್ನು ಮಾಡಲಾಗುತ್ತದೆಯೋ, ಅದೇ ಭಾವದಿಂದ ಬ್ರಹ್ಮಧ್ವಜವನ್ನು ಸೂರ್ಯಾಸ್ತದ ನಂತರ ತಕ್ಷಣ ಕೆಳಗೆ ಇಳಿಸಬೇಕು, ಬ್ರಹ್ಮಧ್ವಜಕ್ಕೆ ಹಾಕಿದ ಎಲ್ಲಾ ಸಾಹಿತ್ಯಗಳನ್ನು ದೈನಂದಿನದಲ್ಲಿ ಬಳಸುವ ವಸ್ತುಗಳ ಹತ್ತಿರ ಇಡಬೇಕು. ಬ್ರಹ್ಮಧ್ವಜಕ್ಕೆ ಅರ್ಪಿಸಿದ ಹೂಗಳು ಮತ್ತು ಮಾವಿನ ಎಲೆಗಳನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕು.

ಈ ರೀತಿಯಾಗಿ ನಾವು ಯುಗಾದಿ ಹಬ್ಬದಂದು ಬ್ರಹ್ಮಧ್ವಜವನ್ನು ಏರಿಸಿ ಶಾಸ್ತ್ರಾನುಸಾರ ವಾಗಿ ಆಚರಣೆ ಮಾಡಿದರೆ ನಮಗೆ ಯುಗಾದಿ ಹಬ್ಬದ ಸಂಪೂರ್ಣ ಲಾಭವು ದೊರಕುತ್ತದೆ ಎಂಬುದಾಗಿ ತಿಳಿಸಲಾಯಿತು. ಸುಮಾರು 300 ರ ಕ್ಕಿಂತಲೂ ಹೆಚ್ಚು ಧರ್ಮ ಬಂಧುಗಳು ಇದರ ಲಾಭವನ್ನು ಪಡೆದುಕೊಂಡರು.

Nisarga K

Recent Posts

ನೂರಕ್ಕೆ ನೂರು ‘ಇಂಡಿಯಾ’ ಮೈತ್ರಿಗೆ ಅಧಿಕಾರ: ಈಶ್ವರ ಖಂಡ್ರೆ

'ದೇಶದಲ್ಲಿ ಈ ಸಲ 'ಇಂಡಿಯಾ' ಒಕ್ಕೂಟ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ…

2 mins ago

ನಾನು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ ಎಂದ ವಿರಾಟ್​​ ಕೊಹ್ಲಿ

ವಿರಾಟ್​​ ಕೊಹ್ಲಿ ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ. ಅವರು ಹೇಳಿರುವ ಆಡಿಯೋ ಸಮೇತ ದೃಶ್ಯ ವೈರಲ್​ ಆಗಿದೆ. 

16 mins ago

ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಮಹಿಳೆಯ ತಲೆ ಸಿಕ್ಕಿಕೊಂಡು ಪರದಾಟ

ಕೆಎಸ್‌ಆರ್‌ಟಿಸಿ ಬಸ್‌ ನ ಕಿಟಕಿಯಿಂದ ಉಗುಳಲು ಹೋಗಿ ಮಹಿಳೆಯೊಬ್ಬರ ತಲೆ ಸಿಕ್ಕಿಕೊಂಡಿರುವ ಘಟನೆ ನಡೆದಿದೆ.

38 mins ago

92ನೇ ಜನ್ಮದಿನ ಆಚರಿಸಿಕೊಳ್ಳದಿರಲು ಎಚ್‌.ಡಿ. ದೇವೇಗೌಡರ ನಿರ್ಧಾರ!

ಇದೇ ತಿಂಗಳ 18 ರಂದು 92ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಈ ಬಾರಿ ಹುಟ್ಟುಹಬ್ಬ…

41 mins ago

ಬಂಡೀಪುರ ರಸ್ತೆಯಲ್ಲಿ ಜೋಡಿ ಜಿಂಕೆಗಳ ಕುಸ್ತಿ

ವಾಹನಗಳ ಸಂಚಾರವಿದ್ದರೂ ರಸ್ತೆಬದಿಯಲ್ಲಿ ಜೋಡಿ ಜಿಂಕೆಗಳು ನಾನಾ-ನೀನಾ ಎಂದು ಕುಸ್ತಿ ಮಾಡಿದ ಘಟನೆ ಮೈಸೂರು-ಉಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬಂಡೀಪುರದ…

58 mins ago

‘ಜೀವನಕ್ಕೆ ಹೊಸಬರು ಬರಲಿದ್ದಾರೆ’: ಕುತೂಹಲ ಮೂಡಿಸಿದ ಪ್ರಭಾಸ್ ಪೋಸ್ಟ್ ವೈರಲ್‌

ಪ್ರಭಾಸ್ ಮದುವೆ ಬಗ್ಗೆ ಆಗಾಗ್ಗೆ ಸುದ್ದಿ ಹರಡುತ್ತಲೇ ಇರುತ್ತದೆ. ದರಲ್ಲಿಯೂ ನಟಿ ಅನುಷ್ಕಾ ಶೆಟ್ಟಿ ಜೊತೆಗಂತೂ ಪ್ರಭಾಸ್ ಮದುವೆಯೇ ಆಗಬಿಟ್ಟಿದ್ದಾರೆ…

1 hour ago