News Karnataka Kannada
Thursday, April 25 2024
Cricket
ಮಂಗಳೂರು

ನಾನು ಥಾಯ್ಲೆಂಡ್‌ನಲ್ಲಿದ್ದೇನೆ ಅಜಿತ್‌ ರೈ ಅವರೊಂದಿಗೆ ಲಿಂಕ್‌ ಇಲ್ಲ: ಮನ್ಮಿತ್ ರೈ

I'm in Thailand, don't have a link with Ajit Rai: Manmeet Rai
Photo Credit : News Kannada

ಮಂಗಳೂರು: ತಹಶೀಲ್ದಾರ್ ಅಜಿತ್ ಕುಮಾರ್ ರೈ ಅಕ್ರಮ ಆಸ್ತಿ ಪ್ರಕರಣದಲ್ಲಿ ಅಂಡರ್ ವರ್ಲ್ಡ್ ಲಿಂಕ್ ವಿಚಾರಕ್ಕೆ ಸಂಬಂಧಿಸಿ ಭೂಗತವಾಗಿರುವ ಉದ್ಯಮಿ ಮನ್ಮಿತ್ ರೈ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೆ ಅಜಿತ್‌ ರೈ ಜೊತೆ ಸೇರಿ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ಮಾಡಿದ್ದಾರೆ ಅನ್ನುವ ಆರೋಪಗಳನ್ನು ಅಲ್ಲಗಳೆದಿದ್ದಾರೆ. ನಾನು ಮತ್ತು ಅಜಿತ್ ರೈ ಒಂದೇ ಊರಿನವರು. ಅದು ಬಿಟ್ಟು ಯಾವುದೇ ವ್ಯವಹಾರಿಕಸಂಬಂಧಗಳಿಲ್ಲ. ನಾನು ಅಜಿತ್‌ ರೈ ಮೊದಲಿಂದಲೂ ಅಜಿತ್ ರೈ ಒಳ್ಳೆಯ ಫ್ರೆಂಡ್ಸ್‌ ಆಗಿದ್ದೆವು. ನನ್ನ ಹೆಸರಿನಲ್ಲಿ ಹತ್ತು ಎಕರೆ ಆಸ್ತಿ ಇದ್ದರೆ, ಅಥವಾ ಬೆಂಗಳೂರಿನಲ್ಲಿ ಯಾವುದಾದರೂ ಆಸ್ತಿಗಳ ಬಗ್ಗೆ ದಾಖಲೆಗಳಿದ್ದಲ್ಲಿ ಹೇಳಲಿ. ಎರಡು ದಿನಗಳಲ್ಲಿ ಬಂದು ನಾನೇ ಶರಣಾಗುತ್ತೇನೆ. ನನಗೆ ಅಂತಹ ಯಾವುದೇ ವ್ಯವಹಾರಗಳಿಲ್ಲ, ನಾನು ಥಾಯ್ಲೆಂಡ್ ಗೆ ಬಂದು ಒಂದೂವರೆ ವರ್ಷ ಆಗಿದೆ. ಥಾಯ್ಲೆಂಡ್ನಲ್ಲಿ ವ್ಯವಹಾರಗಳನ್ನ ಮಾಡುತ್ತಿದ್ದೇನೆ. ಒಂದು ವರ್ಷದ ಹಿಂದೆಯೂ ನನ್ನ ಮೇಲೆ ಕೆಲ ಆರೋಪಗಳನ್ನು ಮಾಡಿದ್ದರು. ಗುಣರಂಜನ್ ಶೆಟ್ಟಿಗೆ ಮನ್ಮಿತ್ ರೈಯಿಂದ ಬೆದರಿಕೆ ಇದೆ ಅಂತ ಹೇಳಿದ್ದರು.

ಈ ಬಗ್ಗೆ ತನಿಖೆ ನಡೆಸಿ ಈ ಪ್ರಕರಣದಲ್ಲಿ ಮನ್ಮಿತ್ ರೈ ಪಾತ್ರ ಇಲ್ಲ ಎಂದು ಪೊಲೀಸ್ ಇಲಾಖೆಯೇ ಹೇಳಿದೆ. ಇದೀಗ ಅಜಿತ್ ರೈ ಪ್ರಕರಣದಲ್ಲಿ ನನ್ನ ಹೆಸರನ್ನ ಬಳಕೆ ಮಾಡುತ್ತಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಾನು ಕಾನೂನು ಮೂಲಕ ಹೋರಾಟ ಮಾಡುತ್ತೇನೆ ಎಂದು ಮನ್ಮಿತ್ ರೈ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು