News Karnataka Kannada
Monday, April 22 2024
Cricket
ಮಂಗಳೂರು

ನಾನು ಮೈಸೂರಿನಲ್ಲಿ ಸೈಕಲಲ್ಲಿ ಬ್ರೆಡ್ ಮಾರುತ್ತಿದ್ದೆ: ಶಾಸಕ ಅಶೋಕ್ ರೈ

I used to sell bread on bicycles in Mysuru: MLA Ashok Rai
Photo Credit : News Kannada

ಪುತ್ತೂರು: ನಾವು ಜೀವನದಲ್ಲಿ ಹೇಗೆ ಯಶಸ್ಸು ಆಗಬೇಕು ಎಂಬುದನ್ನು ಪ್ರತೀಯೊಬ್ಬ ವಿದ್ಯಾರ್ಥಿಯೂ ಕನಸು ಕಾಣುತ್ತಿರಬೇಕು. ಎಲ್ಲರಿಗೂ ಡಾಕ್ಟರ್ , ಇಂಜನಿಯರ್ ಆಗಲು ಸಾಧ್ಯವಿಲ್ಲ ಆದರೂ ನಾವು ಆ ಕನಸನ್ನು ಕಾಣಬೇಕು, ನಾನು ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಬೇಕು, ಹೆತ್ತು ಹೊತ್ತು ನಸಾಕಿದ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಉದ್ದೇಶ ಎಲ್ಲರಿಗೂ ಇರಲಿ ಅದು ನಮ್ಮನ್ನು ಉತ್ತುಂಗತ್ತ ಏರುತ್ತಾನೆ. ನಾನು ದೊಡ್ಡ ಉದ್ಯಮ ಆರಂಭಿಸಿ ಉದ್ಯಮಿಯಾಗಲಿಲ್ಲ ನಾನು ಶಾಲಾ ಅವಧಿಯಲ್ಲೇ ಮೈಸೂರಿನಲ್ಲಿ ಸೈಕಲ್‌ನಲ್ಲಿ ತೆರಳಿ ಬ್ರೆಡ್ ಮಾರುತ್ತಿದ್ದೆ ಎಂದು ಶಾಸಕ ರೈ ವಿದ್ಯಾರ್ಥಿಗಳ ಜೊತೆ ತನ್ನ ಬಾಲ್ಯದ ವಿಚಾರವನ್ನು ಹಂಚಿಕೊಂಡರು.

ಪುತ್ತೂರಿನಿಂದ ೫೦ ರೂ ಹಿಡಿದುಕೊಂಡು ನಾನು ಮೈಸೂರಿಗೆ ಹೋಗಿದ್ದೆ. ಅಲ್ಲೇ ಉನ್ನತ ವಿದ್ಯಾಬ್ಯಾಸ ಮಾಡಿದೆ. ಸಂಜೆಯಾಗುತ್ತಲೇ ಸೈಕಲಲ್ಲಿ ಬ್ರೆಡ್ ಕಟ್ಟಿಕೊಂಡು ಅಂಗಡಿ ಅಂಗಡಿ ಹೋಗಿ ಸೇಲ್ ಮಾಡುತ್ತಿದ್ದೆ. ನನ್ನ ಸಹಪಾಠಿಗಳು ತಮಾಷೆ ಮಾಡುತ್ತಾರೆಂದು ಅವರಿಗೆ ಕಣ್ಣಿಗೆ ಬೀಳದ ಹಾಗೆ ನನ್ನ ಬ್ರೆಡ್ ಮಾರಾಟ ಕೆಲಸ ಮಾಡುತ್ತಿದ್ದೆ. ಅದರಿಂದ ಉಳಿತಾಯವಾದ ಹಣ ಇಟ್ಟುಕೊಂಡು ನಾನು ಮೈಸೂರಿನಲ್ಲಿ ನನ್ನ ಅಣ್ಣನ ನೆರವಿನೊಂದಿಗೆ ಅಂದಿನ ಕಾಲದ ಫೇಮಸ್ ರೆನಾಲ್ಟ್ ಪೆನ್ ಮಾರಾಟ ಮಾಡಲು ಬ್ಯಾಂಕಿನಿಂದ ೫೦೦೦ ಲೋನ್ ಪಡೆದು ಪೆನ್ ಉದ್ಯಮಕ್ಕೆ ಕೈ ಹಾಕಿದೆ ಅದರಲ್ಲಿ ಅಂದಿನ ಎರಡು ಲಕ್ಷದ ವ್ಯವಹಾರ ಮಾಡಿದೆ. ಆ ಬಳಿಕ ಅದೇ ಉದ್ಯಮದಲ್ಲಿ ೨ ಕೋಟಿಗೂ ಮಿಕ್ಕಿದ ವ್ಯವಹಾರ ಮಾಡಿದೆ ಆ ಬಳಿಕ ತಿರುಗಿ ನೋಡಲಿಲ್ಲ. ಮತ್ತೆ ಬೇರೆ ಬೇರೆ ಉದ್ಯಮಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿಯಾದೆ ಎಂದು ತನ್ನ ಬಾಲ್ಯದ ಕಥೆ ಹೇಳಿದಾಗ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುವ ಮೂಲಕ ಶಾಸಕರ ಸಾಹಸಕ್ಕೆ ಜೈ ಹೇಳಿದರು.

ಪ್ರಾಮಾಣಿಕತೆ, ನಾವು ಬದುಕಬೇಕು, ಸಮಾಜದಲ್ಲಿ ಹೆಸರುಗಳಿಸಬೇಕು, ಉತ್ತಮ ಪ್ರಜೆಯಾಗಬೇಕು ಎಂಬ ಹಂಬಲ ಇದ್ದರೆ ದೇವರೇ ನಮಗೆ ಉನ್ನತ ದಾರಿಯನ್ನು ತೋರಿಸುತ್ತಾನೆ ಎಂಬುದಕ್ಕೆ ನಾನೇ ಸಆಕ್ಷಿಯಾಗಿದ್ದೇನೆ ಎಂದು ಹೇಳಿದ ಶಾಸಕರು ಯಾವ ಕಾರಣಕ್ಕೂ ಜೀವನದಲ್ಲಿ ಧೈರ್ಯಗುಂದಬಾರದು ಎಂದು ಯುವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು