ಮಂಗಳೂರು

ಬಿಕರ್ಣಕಟ್ಟೆಯಲ್ಲಿ ಧರೆಗುರುಳಿದ ಬೃಹತ್ ಗಾತ್ರದ ಫ್ಲೆಕ್ಸ್ : 11 ಸ್ಕೂಟಿಗಳು ಜಖಂ

ಮಂಗಳೂರು: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯು ಮಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾನಿಯನ್ನುಂಟುಮಾಡುತ್ತಿದೆ.  ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ, ಗುಡುಗು, ಸಿಡಿಲು ಸಹಿತ ಮಳೆಯಾಗುತ್ತಿದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಜುಲೈ 4ರ ಮಧ್ಯಾಹ್ನದಿಂದ ಜುಲೈ 5ರ ಬೆಳಗ್ಗೆ 8.30ರವರೆಗೆ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ.

ಇತ್ತ ಇಂದು ಮಂಗಳೂರಿನ ಬಿಕರ್ಣಕಟ್ಟೆಯಲ್ಲಿ ಗಾಳಿ ಮಳೆಯಿಂದ ಬೃಹತ್ ಗಾತ್ರದ ಫ್ಲಕ್ಸ್ ಬಿದ್ದಿರುವ ಘಟನೆ ನಡೆದಿದೆ. ಇನ್ನು ಘಟನೆ ಸಂಭವಿಸುವ ಸಂದರ್ಭದಲ್ಲಿ ಅಲ್ಲಿಯೇ ಪಾರ್ಕ್ ಮಾಡಿದ್ದ 11 ಸ್ಕೂಟಿಗಳು ಹಾನಿಗೊಳಗಾಗಿದೆ. ಬೃಹತ್ ಗಾತ್ರದ ಫ್ಲೆಕ್ಸ್ ಬೀಳುವ ಸಂದರ್ಭದಲ್ಲಿ ವಿದ್ಯುತ್ ತಂತಿಯ ಮೇಲೆ ಬಿದ್ದು ಟ್ರಾನ್ಸ್ ಫಾರ್ಮರ್ ಕೂಡ ಕೆಳಕ್ಕೆ ಬಿದ್ದಿದೆ.

Ashika S

Recent Posts

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್​​ ಫೈರ್; ಯುವಕ ಸಾವು

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್ ಫೈರ್ ಆದ ಘಟನೆ ಚಿಕ್ಕಮಗಳೂರಿನ ತಾಲೂಕಿನ ಉಲುವಾಗಿಲು ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದಲ್ಲಿ…

4 mins ago

ಖಾರವಾದ ಚಿಪ್ಸ್ ತಿಂದ 14ರ ಬಾಲಕನಿಗೆ ಹೃದಯ ಸ್ತಂಭನ

ಅತ್ಯಂತ ಖಾರವಾದ ಟೋರ್ಟಿಲ್ಲಾ ಚಿಪ್ ತಿನ್ನುವ ಸಾಮಾಜಿಕ ಮಾಧ್ಯಮ ಚಾಲೆಂಜ್‌ ನಲ್ಲಿ ಭಾಗವಹಿಸಿದ ಅಮೆರಿಕದ 14ರ ಹರೆಯದ ಹುಡುಗನೊಬ್ಬ ಹೃದಯ…

18 mins ago

ನಂಜನಗೂಡು ಶ್ರೀ ನಂಜುಂಡೇಶ್ವರನ ದರ್ಶನ ಪಡೆದ ಹೆಚ್. ಡಿ ರೇವಣ್ಣ

ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಮಾಜಿ ಸಚಿವ ಹೆಚ್.…

36 mins ago

ʼನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು.…

1 hour ago

ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ

ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…

1 hour ago

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

2 hours ago