Categories: ಮಂಗಳೂರು

ಮಾಯಿ ದೆ ದೇವುಸ್ ಚರ್ಚಿನಲ್ಲಿ ಭೋಜನದ ನೆನಪಿನ ಪವಿತ್ರ ಗುರುವಾರ ಆಚರಣೆ

ಪುತ್ತೂರು: ಪ್ರಪಂಚದಾದ್ಯಂತದ ಕ್ರಿಶ್ಚಿಯನ್ನರು ಈ ವಾರವನ್ನು ಪವಿತ್ರ ವಾರವನ್ನಾಗಿ ಆಚರಿಸುತ್ತಿದ್ದಾರೆ, ಮಾರ್ಚ್24 ರಂದು ಈಸ್ಟರ್ ಮೊದಲು ಗರಿಗಳ ಭಾನುವಾರದಿಂದ ಪ್ರಾರಂಭವಾಗುತ್ತದೆ. ಮಾರ್ಚ್29 ರಂದು ಅವರು ಶುಭ ಶುಕ್ರವಾರ ಮತ್ತು ಈಸ್ಟರ್ ಮೊದಲು ಬರುವ ಪವಿತ್ರ ಗುರುವಾರವನ್ನು ಆಚರಿಸುತ್ತಾರೆ.

ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಕೊನೆಯ ಭೋಜನವನ್ನು ಮಾಡಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಯೇಸು ತನ್ನ ಶಿಷ್ಯರೊಂದಿಗೆ ಊಟ ಮಾಡಿದ ಕೊನೆಯ ಭೋಜನವನ್ನು ಈ ದಿನವು ಗುರುತಿಸುತ್ತದೆ. ನಾವೆಲ್ಲರೂ ಸಮಾನರು ಎಂಬುದರ ಸಂಕೇತವಾಗಿ ನಾವು ವಿನಮ್ರರಾಗಿರಬೇಕು ಮತ್ತು ಪರಸ್ಪರರ ಪಾದಗಳನ್ನು ತೊಳೆಯುದರ ಮೂಲಕ ಸೇವಾ ಮನೋಭಾವನೆಗೆ ಸಿದ್ಧರಾಗಿರಬೇಕು ಎಂದು ಯೇಸು ತನ್ನ ಶಿಷ್ಯರಿಗೆ ಕಲಿಸಿದ ಪಾಠವನ್ನು ಸಹ ಇದು ನೆನಪಿಸುತ್ತದೆ.

ಈ ಸಂಪ್ರದಾಯವನ್ನು ಮುಂದುವರೆಸುತ್ತಾ, ಪ್ರಪಂಚಾದ್ಯಂತ ಎಲ್ಲಾ ಚರ್ಚುಗಳಲ್ಲಿ ಪಶ್ಚಾತ್ತಾಪದ ವಿಧಿ, ಪಾದ ಸ್ನಾನದ ವಿಧಿ, ಪರಮ ಪ್ರಸಾದ ವಿಧಿ ಹಾಗೂ ಪರಮ ಪ್ರಸಾದ ಪ್ರತಿಷ್ಠಾಪನೆ ಮತ್ತು ಆರಾಧನೆ ವಿಧಿಗಳನ್ನು ಆಚರಿಸಲಾಗುತ್ತದೆ.

ಹಾಗೇನೇ ಪುತ್ತೂರಿನ ಹೃದಯ ಭಾಗದಲ್ಲಿ ಇರುವ ಮಾಯಿ ದೆ ದೇವುಸ್ ಚರ್ಚಿನಲ್ಲಿ ಪವಿತ್ರ ಗುರುವಾರವನ್ನು ಮಾರ್ಚ್ 28 ರಂದು ಆಚರಿಸಲಾಯಿತು. ಪ್ರದಾನ ಧರ್ಮಗುರುಗಳಾಗಿ ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್ ರವರು ಬಲಿ ಪೂಜೆಯನ್ನು ನೆರವೇರಿಸಿದರು.

ಪ್ರಭು ಕ್ರಿಸ್ತರ ಪ್ರತಿನಿಧಿಯಾಗಿ, ಅತೀ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್ ರವರು ಧರ್ಮ ಕೇಂದ್ರದ ವಿವಿಧ ವರ್ಗಗಳಿಂದ ಆರಿಸಲ್ಪಟ್ಟ ಹನ್ನೆರಡು ಮಂದಿಯ ಪಾದಗಳನ್ನು ತೊಳೆಯುದರ ಮೂಲಕ ಪರಸೇವೆ, ಪರಸ್ನೇಹ, ದೀನತೆಯ ಮಹತ್ವವನ್ನು ತಿಳಿಸಿದರು. ವಂದನಿಯ ಸ್ಟ್ಯಾನಿ ಪಿಂಟೋ ರವರು ತಮ್ಮ ಪ್ರವಚನದಲ್ಲಿ ಬಲಿಪೂಜೆಯ ಮಹತ್ವವನ್ನು ಹಾಗೂ ಯಾಜಕಿ ದೀಕ್ಷೆಯ ದಿನವಾದ ಇಂದು ಅದರ ಮಹತ್ವವನ್ನು ಸಾರಿ ಹೇಳಿದರು.

ಸಹಾಯಕ ಧರ್ಮಗುರುಗಳಾದ ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್ ರವರು ಪರಮ ಪ್ರಸಾದದ ಪ್ರತಿಷ್ಠಾಪನೆ ಮತ್ತು ಆರಾಧನೆಯನ್ನು ವಂದನಿಯಾ ರೂಪೇಶ್ ತೌರೋರವರು ನಡೆಸಿಕೊಟ್ಟರು. ಯೇಸುವಿನ ಕೊನೆಯ ಭೋಜನದ ಸಂಕೇತವಾಗಿ ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ರೊಟ್ಟಿಯನ್ನು ವಿತರಿಸಲಾಯಿತು.

Ashitha S

Recent Posts

ಪೆನ್‌ಡ್ರೈವ್‌ ಕೇಸ್‌ : ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌, ಮಹಿಳೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಮುಖಂಡ, ವಕೀಲರೂ ಆಗಿರುವ ದೇವರಾಜೇಗೌಡರನ್ನು 14…

11 mins ago

ರೈತನ ಆರು ತಿಂಗಳ ಶ್ರಮ ಅರ್ಧಗಂಟೆಯಲ್ಲೇ ಹೋಮ

ಇಂದು ಸಂಜೆ ಸುರಿದ ಬಾರಿ ಮಳೆಗೆ ರೈತ ಬೆಳೆದಿದ್ದ ಬಾಳೆ ಫಸಲು ಸಂಪೂರ್ಣವಾಗಿ ನಾಶವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿಯಲ್ಲಿ…

44 mins ago

ಬಾರ್ ಗೆ ನುಗ್ಗಿದ ಕಳ್ಳರು: 60 ಲೀಟರ್ ಮದ್ಯ ಕಳ್ಳತನ

ಜಿಲ್ಲೆಯ ಹನೂರು ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯಲ್ಲಿರುವ ಅಮೃತ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ತಡ ರಾತ್ರಿ ಕಳ್ಳರ ತಂಡ…

58 mins ago

ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಕೋರಿ ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿ

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಚಾಮರಾಜನಗರದ ಸತ್ಯಮಂಗಲಂ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಸಂಘದ ಪದಾಧಿಕಾರಿಗಳು…

1 hour ago

ಗಾಳಿ ಸಮೇತ ಭಾರಿ ಮಳೆ : ನೆಲಕಚ್ಚಿದ ಮರಗಳು

ಧಾರವಾಡದಲ್ಲಿ ಶನಿವಾರ ಗಾಳಿ ಸಮೇತ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ನೆಲಕಚ್ಚಿದ ಬಗ್ಗೆ ವರದಿಯಾಗಿದೆ. ಬೆಳಿಗ್ಗೆಯಿಂದ ವಿಪರೀತ ಬಿಸಿಲಿನ ವಾತಾವರಣವಿತ್ತು

2 hours ago

ಮನುಷ್ಯನ ಆರೋಗ್ಯಕ್ಕೆ ಕ್ರೀಡೆಗಳು ಅತ್ಯಂತ ಸಹಕಾರಿ : ತಮ್ಮಯ್ಯ

ಕ್ರೀಡೆಗಳು ಮನುಷ್ಯನ ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡುವ ಜೊ ತೆಗೆ ಮನಸ್ಸನ್ನು ಹತೋಟಿಗಿಡುವ ಬಹುದೊಡ್ಡ ಸಾಧನ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ…

2 hours ago