News Karnataka Kannada
Sunday, April 14 2024
Cricket
ಮಂಗಳೂರು

ಮಳೆಯ ಆರ್ಭಟ: ಹಲವೆಡೆಗಳಲ್ಲಿ ಮರಬಿದ್ದು ಹಾನಿ

Heavy rains: Trees fall in several areas, damage
Photo Credit : By Author

ಬಂಟ್ವಾಳ: ತಾಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಂದ‌ ಮಳೆಯ ಆರ್ಭಟ ತೀವ್ರಗೊಂಡಿದ್ದು, ಬಿರುಗಾಳಿ‌ ಸಹಿತ ಸುರಿದ ಮಳೆಗೆ ತಾಲೂಕಿನ‌ ಹಲವೆಡೆಗಳಲ್ಲಿ ಮರಬಿದ್ದು ವ್ಯಾಪಕ‌ ಮಳೆ ಹಾನಿ ಸಂಭವಿಸಿದೆ.

ನೆಟ್ಲ ಮುಡ್ನೂರು ಗ್ರಾಮದ ಏಮಾಜೆ ಎಂಬಲ್ಲಿ ಹೊನ್ನಮ್ಮ ಎಂಬವರ ಮನೆ ಬಳಿಯ ಕೊಟ್ಟಿಗೆಗೆ ಹಾನಿಯಾಗಿರುತ್ತದೆ. ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ- ನೇರಳಕಟ್ಟೆ ಎಂಬಲ್ಲಿ ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿರುತ್ತದೆ. ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ತೆರವು ಕಾರ್ಯ ನಡೆಸಿದರು. ಚೆನ್ನೈತ್ತೋಡಿ ಗ್ರಾಮದ ಕರಿಮಲೆ ಎಂಬಲ್ಲಿ ಶಿವರಾಮ ನಾಯಕ್ ರವರ ಅಡಿಕೆ ತೋಟಕ್ಕೆ ಹಾನಿಯಾಗುತ್ತದೆ. ಕಳ್ಳಿಗೆ ಗ್ರಾಮದ ದಿವಾಕರ್ ಎಂಬವರ ಅಡಿಕೆ ಮರ ತುಂಡಾಗಿ ಬಿದ್ದಿದೆ, ತೋಟಗಾರಿಕಾ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನರಿಕೊಂಬು ಗ್ರಾಮದ ಕರ್ಬೆಟ್ಟು ಎಂಬಲ್ಲಿ ಬಾಬು ಎಂಬವರ ಮನೆಯ ಮೇಲೆ ಮರ ಬಿದ್ದು ಆಂಶಿಕ ಹಾನಿಯಾಗಿರುತ್ತದೆ. ಅಮ್ಮುಂಜೆ ಗ್ರಾಮದ ಕೊರಗಪ್ಪ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಭಾಗಶಃ ಹನಿ ಆಗಿರುತ್ತದೆ ಕರಿಯಂಗಳ ಗ್ರಾಮದ ಮಾರಿಯಮ್ಮ ಎಂಬವರ ಮನೆಯ ಮೇಲ್ಚಾವಣಿ ಕುಸಿದು ಭಾಗಶಃ ಹಾನಿಯಾಗಿದೆ.

ವೀರಕಂಭ ಗ್ರಾಮದ ಮಜ್ಜೋನಿ ಎಂಬಲ್ಲಿ ಭಾಗಿ ಎಂಬವರ ಕಚ್ಚಾ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ನರಿಕೊಂಬು ಗ್ರಾಮದ ಶಾರದಾ ಎಂಬವರ ಮನೆಯ ಮೇಲೆ ಮರ ಬಿದ್ದು ಆಂಶಿಕ ಹಾನಿಯಾಗಿರುತ್ತದೆ. ಪುದು ಗ್ರಾಮದ ಸುಜೀರು ಅಬೂಬಕರ್ ಸಿದ್ದೀಕ್ ಎಂಬವರ ಮನೆಯ ಗೋಡೆ ಕುಸಿದು ಹಾನಿಯಾಗಿದ್ದು, ಮನೆಮಂದಿಯನ್ನು ಸ್ಥಳಾಂತರಿಸಲಾಗಿದೆ. ವಿಟ್ಲ‌ಹೋಬಳಿಯ ಅಳಿಕೆ ಕಾನತ್ತಡ್ಕದ ರಝಕ್ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಮರ ತೆರವುಗೊಳಿಸಲಾಗಿದೆ. ವಿಟ್ಲ ಮುಡ್ನೂರು ಮೂಡಾಯಿಮಾರು ಎಂಬಲ್ಲಿನ ನಿವಾಸಿ ಸತೀಶ್ ಶೆಟ್ಟಿ ಯವರಿಗೆ ಸೇರಿದ ಕೊಟ್ಟಿಗೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಬಡಗ ಬೆಳ್ಳೂರು ಗ್ರಾಮದ ಬಾಳಿಕೆ ಎಂಬಲ್ಲಿ ವಾಮದೇವ ರವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಕುರಿಯಾಳ ಗ್ರಾಮದ ದುರ್ಗಾನಗರ ನಿವಾಸಿ ಅಪ್ಪಿ ಮೂಲ್ಯ ಇವರ ಮನೆಗೆ ತೆಂಗಿನ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ.

ನೇತ್ರಾವತಿಯಲ್ಲಿ ನೀರಮಟ್ಟ ಹೆಚ್ಚಳ: ಕಳೆದ ಕೆಲವು ಸಮಯಗಳಿಂದ ಅಲ್ಪಪ್ರಮಾಣದಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿಯ ನೀರಿನ‌ಮಟ್ಟ 5.8 ಮೀಟರ್ ಗೆ ಏರಿದ್ದು, ಅಪಾಯಕಾರಿ‌ಮಟ್ಟ 8.5 ಆಗಿದೆ. ಜಿಲ್ಲೆ ಸಹಿತ ಘಟ್ಟ ಪ್ರದೇಶದಲ್ಲಿಯೂ ವ್ಯಾಪಕ‌ ಮಳೆಯಾದ ಹಿನ್ನೆಲೆಯಲ್ಲಿ ನೇತ್ರಾವತಿ ನದಿ ನೀರಿನ‌ ಮಟ್ಟದಲ್ಲಿ ಏರಿಕೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು