News Karnataka Kannada
Monday, April 22 2024
Cricket
ಮಂಗಳೂರು

ಕಲ್ಲಡ್ಕ ಶಾಲೆಯ ಕ್ರೀಡೋತ್ಸವಕ್ಕೆ ಹೆಚ್.ಡಿಕೆ ಅತಿಥಿ: ರಾಜಕೀಯ ವಲಯದಲ್ಲಿ ಚರ್ಚೆ

Pb Hdk
Photo Credit : News Kannada

ಬಂಟ್ವಾಳ : ಆರ್‌ಎಸ್‌ ಎಸ್‌ ಹಿರಿಯ ನಾಯಕ ಡಾ. ಕಲ್ಲಡ್ಕ ಪ್ರಭಾಕರ ಭಟ್ ಸಾರಥ್ಯದ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಡಿ.9ರ ಶನಿವಾರ ಸಂಜೆ ನಡೆಯುವ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿ.ಎಂ ಹೆಚ್.ಡಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕಳೆದ ಅನೇಕ ವರ್ಷಗಳ ಕ್ರೀಡೋತ್ಸವವನ್ನು ಗಮನಿಸಿದಾಗ ಈ ಬಾರಿ ಮೃದು ಹಿಂದುತ್ವದತ್ತ ವಾಲಿದ, ಬಿಜೆಪಿ ಜೊತೆ ಹೊಂದಾಣಿಕೆಗೆ ಮುಂದಾಗಿರುವ ಮತ್ತು ದತ್ತ ಪೀಠಕ್ಕೆ ಮಾಲಾಧಾರಣೆ ಮಾಡಿ ಹೋಗುವುದಾಗಿ ಹೇಳಿಕೆ ನೀಡಿ ರಾಜ್ಯದಲ್ಲಿ ಒಂದು ರೀತಿಯ ಬಿರುಗಾಳಿ ಎಬ್ಬಿಸಿರುವ ಕುಮಾರಸ್ವಾಮಿ ಆಗಮನ ರಾಜಕೀಯ ವಲಯದಲ್ಲಿ ಒಂದಷ್ಟು ಸಂಚಲನ ಮೂಡಿಸಿದೆ.

ಹೆಚ್ಚಾಗಿ ಹಿಂದುತ್ವದ ಸಿದ್ದಾಂತದ ಮೇಲೆ ನಾಯಕರೆನಿಸಿದವರು ಈ ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕಂಡು ಬಂದಿದೆಯಾದರೂ, ಹೊರರಾಜ್ಯದಿಂದ ಬೇರೆ ಬೇರೆ ಪಕ್ಷಗಳ ನಾಯಕರು ಕ್ರೀಡೋತ್ಸವದಲ್ಲಿ ಭಾಗವಹಿಸಿದ ನಿದರ್ಶನಗಳು ಇವೆ. ಈ ಬಾರಿ ಕುಮಾರಸ್ವಾಮಿಯವರನ್ನು ಆಮಂತ್ರಿಸಿರುವುದರ ಹಿಂದೆ ರಾಜಕೀಯ ತಂತ್ರಗಾರಿಕೆ ಇರಬಹುದೇ ಎಂಬ ಸಂಶಯಗಳು ಮೂಡಿವೆ.

ಕುಮಾರಸ್ವಾಮಿ ಆಮಂತ್ರಣ ಮುಂದಿನ ದಿನಗಳಲ್ಲಿನ ಫಲಿತಾಂಶದ ಮೇಲೆ ನಿರ್ಧರಿಸಲ್ಪಡುತ್ತದೆ. ಯಾವುದೇ ಕಾರಣವಿಲ್ಲದೆ ಕುಮಾರಸ್ವಾಮಿ ಕಲ್ಲಡ್ಕ ಕ್ರೀಡೋತ್ಸವದಲ್ಲಿ ಭಾಗಿಯಾಗುವುದಲ್ಲ ಎಂಬ ಸಂದೇಹಗಳು ಉಂಟಾಗಿವೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು