News Karnataka Kannada
Monday, April 22 2024
Cricket
ಮಂಗಳೂರು

ಮೋದಿ ವಿರುದ್ಧ ತಂಗಡಗಿ ಹೇಳಿಕೆ ವಿಚಾರ : ಶಾಸಕ ಹರೀಶ್ ಪೂಂಜಾ ಆಕ್ರೋಶ

ಮೋದಿ ಮೋದಿ ಎನ್ನುವ ಯುವಕರ ಕಪಾಳಕ್ಕೆ ಹೊಡೆಯಬೇಕು ಎಂಬ ಸಚಿವ ಶಿವರಾಜ್ ತಂಗಡಗಿ ಹೇಳಿಕೆ ವಿಚಾರ ಬೆಳ್ತಂಗಡಿ ಶಾಸಕ, ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Photo Credit : NewsKarnataka

ಮಂಗಳೂರು : ಮೋದಿ ಮೋದಿ ಎನ್ನುವ ಯುವಕರ ಕಪಾಳಕ್ಕೆ ಹೊಡೆಯಬೇಕು ಎಂಬ ಸಚಿವ ಶಿವರಾಜ್ ತಂಗಡಗಿ ಹೇಳಿಕೆ ವಿಚಾರ ಬೆಳ್ತಂಗಡಿ ಶಾಸಕ, ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶಾಸಕ ಹರೀಶ್ ಪೂಂಜಾ ಹೇಳಿಕೆ ನೀಡಿದ್ದು ಕಾಂಗ್ರೆಸ್ ನ ಹತಾಶೆಯ ಭಾವನೆ ರಾಜ್ಯದಲ್ಲಿ ವ್ಯಕ್ತವಾಗಿದೆ.ಶಿವರಾಜ ತಂಗಡಗಿ ಹೇಳಿಕೆ ಇದಕ್ಕೆ ಉದಾಹರಣೆ. 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಿದೆ ಇದು ತಂಗಡಗಿ ಅವರ ಬಾಯಲ್ಲಿ ಬಂದಿದೆ ಎಂದರು.

ಕಾಂಗ್ರೆಸ್ ಪಾರ್ಟಿ ಅಂದ್ರೆ ಮೇಲಿನಿಂದ ಕೆಳಗಿನವರೆಗೂ ಒಂದೇ ಮಾನಸಿಕತೆ ಇರುವ ಪಾರ್ಟಿ. ಒಬ್ಬ ಒಳ್ಳೆಯ ಮನುಷ್ಯನನ್ನು ಹೆಕ್ಕಿ ತೆಗೆಯಲು ಸಾಧ್ಯ ಇಲ್ಲದಂತ ಪಾರ್ಟಿ,ಯಾರು ಯಾವ ಮಾತನ್ನು ಹೇಳಿದ್ರು ಡಿ.ಕೆ ಶಿವಕುಮಾರ್ ಆದಿಯಾಗಿ ರಾಹುಲ್ ಗಾಂಧಿವರೆಗೂ ಅದನ್ನು ಸಮರ್ಥನೆ ಮಾಡ್ತಾರೆ. ಆದ್ರೆ ಬಿಜೆಪಿಯ ಯಾವುದೇ ನಾಯಕ ತಪ್ಪು ಹೇಳಿಕೆ ಕೊಟ್ರೆ ಅದು ವೈಯಕ್ತಿಕ ಹೇಳಿಕೆ ಎಂದು ಹೇಳುತ್ತೆ, ಪಾರ್ಟಿಗೂ ಅದಕ್ಕೂ ಸಂಬಂಧ ಇಲ್ಲ ಎಂದು ಹೇಳಿ ತಿದ್ದಿಕೊಳ್ಳುತ್ತೆ ಎಂದು ಹೆಮ್ಮೆಯಿಂದ ಹೇಳಿದರು.

ಕಾಂಗ್ರೆಸ್ ನ ಮನೆ ಮಕ್ಕಳ ಚಾಳಿ ಊರಿಗೆಲ್ಲಾ ಎಂಬಂತೆ ಅವರ ಎಲ್ಲಾ ನಾಯಕರಿಗೂ ಅನ್ವಯವಾಗುತ್ತೆ.ಕಾಂಗ್ರೆಸ್ ದ್ವೇಷ, ಅಸಹಿಷ್ಣುತೆಯ ಮಾತುಗಳನ್ನಾಡಿರುವುದು ಇದು ಮೊದಲೇನಲ್ಲ,ಬಿಜೆಪಿ ಮತ್ತು ಮೋದಿಯನ್ನು ಎದುರಿಸಲಾಗದೆ ಅನೇಕ ನಾಯಕರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಈ ದೇಶದ ಇತಿಹಾಸವನ್ನು ತಂಗಡಗಿ ಅರ್ಥ ಮಾಡಿಕೊಳ್ಳಬೇಕು
ಕಾಂಗ್ರೆಸ್ ನ ದುರಾಡಳಿತ ಮುಚ್ಚಿ ಹಾಕಲು ಈ ರೀತಿ ಹೇಳಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ಟೀಕಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು