ಮಂಗಳೂರು

ಧರ್ಮಸ್ಥಳ: ಕರ್ನಾಟಕ ತುಳು ಅಕಾಡೆಮಿಯಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ವಿಶೇಷ ಗೌರವಾರ್ಪಣೆ

ಧರ್ಮಸ್ಥಳ: ಭಾರತ ಸರಕಾರದಿಂದ ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್‌ಸಾರ್ ಅವರು ಸಮಸ್ತ ತುಳುವರ ಪರವಾಗಿ ವಿಶೇಷವಾಗಿ ಧರ್ಮಸ್ಥಳದ ಬೀಡಿನಲ್ಲಿ ಪೂಜ್ಯ ಖಾವಂದರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಹೆಗ್ಗಡೆ ಯವರು ಪ್ರತಿಕ್ರಿಯಿಸಿ ತುಳು ಭಾಷೆಯನ್ನು ರಾಷ್ಟ್ರದ ಎಂಟನೇ ಪರೀಚ್ಚೇದಕ್ಕೆ ಸೇರಿಸುವಾಗ
ಭಾವನಾತ್ಮಕ ಮಾತುಗಳನ್ನಾಡದೇ, ದೇಶದ ಇತರ ಭಾಷೆಗಳನ್ನು ಸೇರಿಸುವುದರೊಂದಿಗೆ ತುಳುವಿಗೂ ಮಾನ್ಯತೆ ಸಿಗುವಂತಾಗುವ
ವಾತಾವರಣ ಮೊದಲು ನಿರ್ಮಿಸಬೇಕು, ಬೇರೆ ಬೇರೆ ರಾಜ್ಯದ ಪ್ರಾದೇಶಿಕ ಭಾಷೆಗಳು ಮಾನ್ಯತೆ ಪಡೆದುಕೊಳ್ಳಲು ಸಜ್ಜಾಗಿದ್ದು ಅದರೊಂದಿಗೆ ತುಳುವನ್ನು ಸೇರಿಸಿಕೊಂಡು ತಾಂತ್ರಿಕತೆ ತೊಡಕುಗಳನ್ನು ನಿವಾರಿಸಿಕೊಂಡು ನಾವು ಮುನ್ನಡೆಯುವುದು ಉತ್ತಮ, ಎಲ್ಲರೂ ಭಾವನಾತ್ಮವಾಗಿ ಮಾತನಾಡಿದಲ್ಲಿ ಅದರಿಂದ ಪ್ರಯೋಜನ ಇಲ್ಲ ಎಂದರು.

ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಮಾತನಾಡಿ, ಪೂಜ್ಯ ಖಾವಂದರ ಅಭಿಪ್ರಾಯ ನಿಜಕ್ಕೂ
ಉಲ್ಲೇಖನೀಯವಾಗಿದೆ. ಅಕಾಡೆಮಿಯಿಂದ ಡಾ.ಬಿ.ಎ.ವಿವೇಕ ರೈ ಸಹಿತ ಪ್ರಮುಖ ವಿದ್ವಾಂಸರನ್ನು ಒಂದುಗೂಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಮಟ್ಟದಲ್ಲಿ ಮಾತುಕತೆ, ಚರ್ಚೆ ನಡೆಸಿ, ಅಭಿಪ್ರಾಯ ಸಲ್ಲಿಸಿದ್ದೇವೆ. ಇದಕ್ಕೆ ಪೂರಕವಾಗಿ ನಮ್ಮ ಮುನ್ನಡೆ ಏನು ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಸುವ ಪ್ರಯತ್ನ ನಡೆಸೋಣ, ಕಳೆದ ಬಾರಿ ಒಟ್ಟು ಐದು ಭಾಷೆಗಳು ಮಾನ್ಯತೆ ಪಡೆದುಕೊಳ್ಳುವಲ್ಲಿ ಸಫಲವಾಗಿರುವಂತೆ ಈ ಬಾರಿಯೂ ಇದೇ ರೀತಿಯ ಸಂಘಟನಾತ್ಮಕವಾಗಿ ಕೇಳಿಕೊಳ್ಳೋಣ, ತುಳು ಲಿಪಿಯಲ್ಲಿ ಕೃತಿ, ಲಿಪಿಗೆ ಸಿಕ್ಕಿರುವ ರಾಜ್ಯ, ರಾಷ್ಟ್ರ ಮಾನ್ಯತೆ ಯಂತಹ ಪೂರಕ ದಾಖಲೆಗಳನ್ನು ಈಗಾಗಲೇ ಸಿದ್ಧಪಡಿಸಿದ್ದೇವೆ. ಇದಕ್ಕೆ ನಿಮ್ಮ ಸಹಕಾರ ಪ್ರಾಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಅಂಗೀಕೃತವಾದ ತುಳು ಲಿಪಿಯನ್ನು ಬೃಹತ್ ಗಾತ್ರದ
ಚಾರ್ಟನ್ನು ತುಳುವೆರೆ ಕುಡ್ಲ ಸಂಘಟನೆಯ ಮೂಲಕ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅನಾವರಣಗೊಳಿಸಿ, ಸ್ಥಳದಲ್ಲಿ ಶಾಲೆಯೊಂದರ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು. ತುಳುವೆರೆ ಕುಡ್ಲದ ಅಧ್ಯಕ್ಷ ಪ್ರತೀಕ್ ಪೂಜಾರಿ ಅವರು ಈ ಚಾರ್ಟಗಳನ್ನು ಪ್ರತೀ ಶಾಲೆಗೂ ತಲುಪಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ನರೇಂದ್ರ ಕೆರೆಕಾಡು, ನಾಗೇಶ್ ಕುಲಾಲ್, ರವಿ ಪಿ.ಎಂ. ಮಡಿಕೇರಿ,
ಚೇತಕ್ ಪೂಜಾರಿ ಮಂಗಳೂರು, ಸಂತೋಷ್ ಪೂಜಾರಿ ಕಾರ್ಕಳ, ತುಳುವೆರ್ ಕುಡ್ಲದ ಮಹಿಳಾ ಸಂಚಾಲಕಿ ಪೂಜಾ ಶೆಟ್ಟಿ, ತುಳುವ ಬೊಳ್ಳಿ ಪ್ರತಿಷ್ಠಾನದ ಯಾದವ ಕೋಟ್ಯಾನ್ ಕಾವೂರು, ಮತ್ತಿತರರ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ನೂತನ ಆಡಿಟೋರಿಯಂ ಪೂರ್ಣಗೊಳ್ಳುತ್ತಿದ್ದು, ಇದರಲ್ಲಿ
ತುಳುನಾಡಿನ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ಅವಕಾಶ ಇರುವುದರಿಂದ ಧರ್ಮಸ್ಥಳದ ಯೋಜನೆಯ ಮೂಲಕ ನಿರ್ಮಿಸಲು ಮನವಿಯನ್ನು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಮಾಡಿದರು.

Gayathri SG

Recent Posts

ಮರಾಠಿ ಭಾಷೆಯಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನ ಅನಾವರಣ

ಯಕ್ಷಗಾನದ ಹಿರಿಮೆ ಇದೀಗ ಗಡಿದಾಟಿ ಮಹಾರಾಷ್ಟ್ರದಲ್ಲೂ ಸದ್ದು ಮಾಡಿದೆ. ಸಂಪೂರ್ಣ ಮರಾಠಿ ಭಾಷೆಯಲ್ಲಿ ನಡೆದ ಅಪರೂಪದ ಯಕ್ಷಗಾನ ಮಹಾರಾಷ್ಟ್ರ ಪ್ರೇಕ್ಷಕರ…

8 mins ago

ಪುಟಾಣಿ ಕಲಾವಿದೆಯ ಕಲಾಸಿರಿಯ ಅನಾವರಣ: ಬಾಲಕಿಯ ಅದ್ಭುತ ಪ್ರದರ್ಶನಕ್ಕೆ ವ್ಯಾಪಕ ಮೆಚ್ಚುಗೆ

ಪುಟಾಣಿ ಕಲಾವಿದೆ ಹತ್ತು ವರ್ಷದ ಕುಮಾರಿ ಗಂಗಾ ಶಶಿಧರ್ ಬಳಗದ ವಯೋಲಿನ್ ವಾದನ ಕಛೇರಿ ಕಾರ್ಯಕ್ರಮ ಉಡುಪಿಯ ಶ್ರೀ ಕೃಷ್ಣಮಠದ…

10 mins ago

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಘೋಷಣೆ: ಸಿಎಂಗೆ ಕೆಯುಡಬ್ಲ್ಯುಜೆ ವತಿಯಿಂದ ಅಭಿನಂದನೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಹುದಿನದ ಬೇಡಿಕೆಯಾಗಿದ್ದ ಗ್ರಾಮೀಣ ಪತ್ರಕರ್ತರರಿಗೆ ಬಸ್ ಪಾಸ್ ನೀಡುವ ಸಂಬಂಧ ಇತ್ತಿಚೆಗೆ ದಾವಣಗೆರೆಯಲ್ಲಿ ನಡೆದ…

22 mins ago

ರಾಹುಲ್ ಗಾಂಧಿಗೆ 1000 ರೂ. ದಂಡ ವಿಧಿಸಿದ ಜಾರ್ಖಂಡ್ ಹೈಕೋರ್ಟ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ…

25 mins ago

ಮಂಗಳೂರು: ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಆಚರಣೆ

“ಅಧ್ಯಾಪಕರುಗಳ ಪ್ರೋತ್ಸಾಹ ಮತ್ತು ಬೆಂಬಲವೇ ಇವತ್ತಿನ ಈ ದಿನದ ಯಶಸ್ಸು ಮತ್ತು ಇಲ್ಲಿಯ ಕಾರ್ಯಕ್ರಮಗಳೇ ಈ ಕಾಲೇಜಿನ ಮಹತ್ವವನ್ನು ಸಾರುತ್ತಿದೆ…

29 mins ago

40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ: ಡಿ.ಕೆ.ಶಿವಕುಮಾರ್

ಉತ್ತರ ಪ್ರದೇಶದಲ್ಲಿ 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ. ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟದ…

39 mins ago