News Karnataka Kannada
Sunday, April 14 2024
Cricket
ಮಂಗಳೂರು

ಮಂಗಳೂರು: ಜೈಲಿನಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ ಯಶಸ್ವಿ

Free eye check-up
Photo Credit : News Kannada

ಮಂಗಳೂರು: ಟೈಟಾನ್‌ ಐ ಪ್ಲಸ್‌ ಉರ್ವಸ್ಟೋರ್‌ ಮಂಗಳೂರು, ರೋಟರಿ ಕ್ಲಬ್‌ ಮಂಗಳೂರು ಹಿಲ್‌ ಸೈಡ್‌, ಲಯನ್ಸ್‌ ಮತ್ತು ಲಿಯೋ ಕ್ಲಬ್‌ ಮಂಗಳೂರು ಕೊಡಿಯಾಲ್‌ ಬೈಲ್‌, ರೋಟರಿ ಕ್ಲಬ್‌ ಆಫ್‌ ಮಂಗಳೂರು ಮೆಟ್ರೋ ಸಹಯೋಗದಲ್ಲಿ ಇಂದು (ಆಗಸ್ಟ್‌ 8) ಬೆಳಗ್ಗೆ 10 ಗಂಟೆಗೆ ಮಂಗಳೂರು ಜೈಲು ಆವರಣದಲ್ಲಿ ಕೈದಿಗಳಿಗಾಗಿ ಕಣ್ಣಿನ ಉಚಿತ ತಪಾಸಣೆ ನಡೆಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಜೈಲಿನ ಸೂಪರ್ಡೆಂಟ್ ಆದಂತಹ ಓಬಾಲೇಶ್ವರ ಅವರು ಉದ್ಘಾಟಿಸಿದರು.

Free eye check-up

ಇನ್ನು ಈ ಕಾರ್ಯಕ್ರಮದ ವೇದಿಕೆಯಲ್ಲಿ ಟೈಟಾನ್‌ ಐ ಪ್ಲಸ್‌ ನ ಸಾಗರ್ ಉರ್ವಸ್ಟೋರ್‌ ಮಂಗಳೂರು, ರೋಟರಿ ಕ್ಲಬ್‌ ಮಂಗಳೂರು ಹಿಲ್‌ ಸೈಡ್‌ನ ಪ್ರೆಸಿಡೆಂಟ್ ಕಿರಣ್ ಕುಮಾರ್ , ಲಯನ್ಸ್‌ ಮತ್ತು ಲಿಯೋ ಕ್ಲಬ್‌ ಮಂಗಳೂರು ಕೊಡಿಯಾಲ್‌ ಬೈಲ್‌ ನ ಝೋನ್ ಚೆರ್ ಪರ್ಸನ್ ಆಶಾ ನಾಗಾರಾಜ್ ಪ್ರೆಸಿಡೆಂಟ್ ಸನತ್ ಕುಮಾರ್ ಕದ್ರಿ, ಲೀಯೊ ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಸೆಕ್ರೆಟರಿ ಸಮೀಕ್ಷಾ, ರೋಟರಿ ಕ್ಲಬ್‌ ಆಫ್‌ ಮಂಗಳೂರು ಮೆಟ್ರೋ ಇದರ ಪ್ರೆಸಿಡೆಂಟ್ ರಜನಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೈಲಿನ ಸೂಪರ್ಡೆಂಟ್ ಓಬಾಲೇಶ್ವರ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಖೈದಿಗಳಿಗೆ ಪೂರಕವಾಗುವಂತಹ ಕೆಲಸ ಕಾರ್ಯಗಳು, ಖೈದಿಗಳ ಹೊಸ ಬದುಕಿಗೆ ಉತ್ತೇಜನ ನೀಡುವಂತಹ ಕಾರ್ಯಕ್ರಮಗಳು, ಮತಷ್ಟು ಈ ಜೈಲಿನಲ್ಲಿ ನಡೆಯಬೇಕು. ಈ ಮೂಲಕ ಮುಂದಿನ ದಿನಗಳಲ್ಲಿ ಆರೋಪಿ ನಿರಾಪರಾಧಿಯಾಗಿ ಹೊರಬಂದ ಬಳಿಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು ಜೀವನ ಸಾಗಿಸುವಂತೆ ಪ್ರೇರೆಪಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ತಮ್ಮ ತಮ್ಮ ಸಂಘಗಳ ಬಗೆಗಿನ ಕಾರ್ಯವೈಖರಿ ಹಾಗೂ ವೈಯಕ್ತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯ ಭಾಗವಾಗಿ ಡೆನ್ಸ್ಝಿಲ್ ಅವರು ಗಣ್ಯರಿಗೆ ಧನ್ಯವಾದ ಅರ್ಪಿಸಿದರು. ನ್ಯೂಸ್ ಕರ್ನಾಟಕದ ಕಮ್ಯುನಿಟಿ ಡೆವಮೆಂಟ್ ಆಫೀಸರ್ ಪ್ರತಿಮಾ ಪವಾರ್ ಅವರು ಕಾರ್ಯಕ್ರಮ ನಿರೂಪಿದರು.

ಕಾರ್ಯಕ್ರಮದ ಬಳಿಕ ಖೈದಿಗಳಿಗೆ ಉಚಿಕ ನೇತ್ರ ತಪಾಸಣೆ ಮಾಡಿ, ಕನ್ನಡಕ ವಿತರಿಸಲಾಯಿತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು