Categories: ಮಂಗಳೂರು

ಅಮರ ಸುಳ್ಯ ಅಧ್ಯಯನ ಕೇಂದ್ರ ಅಸ್ತಿತ್ವಕ್ಕೆ – ಡಾ. ಪ್ರಭಾಕರ ಶಿಶಿಲ

ಸುಳ್ಯ: ಅಮರ ಸುಳ್ಯ ಅಧ್ಯಯನ ಕೇಂದ್ರ ಅಸ್ತಿತ್ವಕ್ಕೆ ಇದುವರೆಗೆ ಡಾ. ಬ್ರಹ್ಮಾನಂದ ಅರ್ಥಶಾಸ್ತ್ರ ಸಂಶೋಧನಾ ಕೇಂದ್ರವಾಗಿದ್ದ ಕಾಂತಮಂಗಲದಲ್ಲಿರುವ ಡಾ. ಪ್ರಭಾಕರ ಶಿಶಿಲರ ಖಾಸಗಿ ಗ್ರಂಥಾಲಯವು ಅಮರ ಸುಳ್ಯ ಅಧ್ಯಯನ ಕೇಂದ್ರವಾಗಿ ಪರಿವರ್ತನೆ ಹೊಂದಿದೆ.

ಸೇವಾ ನಿವೃತ್ತಿಯ ಬಳಿಕ ತಾಂತ್ರಿಕವಾಗಿ ಯಾರೂ ಸಂಶೋಧನಾ ಮಾರ್ಗದರ್ಶಕರಾಗುವಂತಿಲ್ಲ. ಸೇವಾವಧಿಯಲ್ಲಿ ನಾಲ್ಕು ಡಾಕ್ಟರೇಟ್ ಮತ್ತು ಏಳು ಎಂ.ಫಿಲ್ಲ್ ಗಳಿಗೆ ಯಶಸ್ವಿಯಾಗಿ ಮಾರ್ಗದರ್ಶನ ಮಾಡಿದ್ದೇನೆ. ಇನ್ನು ಮುಂದೆ ಗ್ರಂಥಾಲಯವನ್ನು ಕೇವಲ ಅಧ್ಯಯನಕ್ಕಾಗಿ ಮೀಸಲಾಗಿರಿಸಿದ್ದೇನೆ ಎಂದು ಡಾ. ಶಿಶಿಲರು ಹೇಳಿದ್ದಾರೆ.

ಸುಳ್ಯ ತಾಲೂಕಲ್ಲಿ 1837ರ ರೈತ ಬಂಡಾಯದ ಸ್ಮಾರಕ ನಿರ್ಮಾಣಕ್ಕಾಗಿ ಸಂಪಾಜೆ ದೇವಿ ಪ್ರಸಾದರ, ಮತ್ತಿತರರೊಡನೆ ಸೇರಿ ನಿರಂತರ ಹೋರಾಟ ಮಾಡುತ್ತಾ ಬಂದಿರುವ ಶಿಶಿಲರು 1998ರಿಂದ ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ಅಮರ ಕ್ರಾಂತಿ ಸ್ಮಾರಕ ನಿರ್ಮಾಣವಾಗಬೇಕೆಂದು ಶಕ್ತಿಮೀರಿ ಯತ್ನಿಸಿದ್ದರು. 2022ರ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣಾ ಕಾಲದ ಆದಿಯಲ್ಲಿ ಬೆಳ್ಳಾರೆಯಲ್ಲಿ ನಡೆದ ಬೆಳ್ಳಾರೆ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಅಂಗಾರ, ಜಿಲ್ಲಾಧಿಕಾರಿ ರಾಜೇಂದ್ರ ಕುಮಾರ್ 2023ರ ಮಾರ್ಚ್ 30ರೊಳಗೆ ಬಂಗ್ಲೆಗುಡ್ಡೆಯಲ್ಲಿ ರೈತ ಬಂಡಾಯಗಾರರ ನೆನಪಿಗೆ ಸ್ವಾತಂತ್ರ್ಯ ಸೌಧ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಆ ಬಗ್ಗೆ ಯಾವುದೇ ಕಾರ್ಯ ಆರಂಭವಾಗದ ಕಾರಣ ಮನ ನೊಂದು ತನ್ನ ಗ್ರಂಥಾಲಯವನ್ನೇ ಶಿಶಿಲರು ಅಮರ ಕ್ರಾಂತಿ ಸ್ಮಾರಕವಾಗಿಸಿದ್ದಾರೆ.

ಶಿಶಿಲರು ಈಗಾಗಲೇ ಅಮರ ಸುಳ್ಯ ಕ್ರಾಂತಿಯ ಬಗ್ಗೆ ಒಂದು ಕಾದಂಬರಿ, ಎರಡು ಸಂಶೋಧನಾ ಗ್ರಂಥ ಮತ್ತು ಒಂದು ನಾಟಕ ರಚಿಸಿದ್ದಾರೆ. ಅವರ ಗರಡಿಯಲ್ಲಿ ಡಾ. ಪ್ರತಿಮಾ ಜಯರಾಂ ಈ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿ ಹಂಪಿ ವಿ.ವಿ.ಯಿಂದ ಡಾಕ್ಟರೇಟ್ ಪಡೆದಿದ್ದಾರೆ. ಶಿಶಿಲರು ಬರೆದು ಜೀವನರಾಂ ನಿರ್ದೇಶಿಸಿದ ಅಮರ ಸುಳ್ಯ ಕ್ರಾಂತಿ 1837 ನಾಟಕಕ್ಕೆ ರಾಜ್ಯಮಟ್ಟದ ಐತಿಹಾಸಿಕ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಲಭ್ಯವಾಗಿದ್ದು, ಅದು ಕೃತಿ ರೂಪದಲ್ಲಿ ಸದ್ಯದಲ್ಲೇ ಹೊರಬರಲಿದೆ ಎಂದು ಶಿಶಿಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sneha Gowda

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

4 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

4 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

5 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

5 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

5 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

6 hours ago