Categories: ಮಂಗಳೂರು

ವಿಶ್ವ ಡೆಂಗ್ಯು ಜ್ವರ ನಿಯಂತ್ರಣ ದಿನಾಚರಣೆ: ಸುಳ್ಯದಲ್ಲಿ ಡೆಂಗ್ಯು ಜಾಗೃತಿ ಜಾಥಾ

ಸುಳ್ಯ: ಸುಳ್ಯದಲ್ಲಿ ಡೆಂಗ್ಯು ಕಾಯಿಲೆಯ ಸಮಸ್ಯೆ ಹೆಚ್ಚಾಗಿತ್ತು. ಆದರೆ ಇದೀಗ ಸ್ಥಳೀಯಾಡಳಿತ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ  ಜನರ ಸಹಕಾರದಿಂದ ಜಾಗೃತಿ ಮೂಡಿಸಿದ ಪರಿಣಾಮ ಸುಳ್ಯ ಡೆಂಗ್ಯು ಜ್ವರ ನಿಯಂತ್ರಣಕ್ಕೆ ಬಂದಿದೆ. ಈ ಕುರಿತು ನಿರಂತರ ಜಾಗೃತಿ ಅಗತ್ಯ ಎಂದು ಸುಳ್ಯದ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಹೇಳಿದರು.

ವಿಶ್ವ ಡೆಂಗ್ಯು ಜ್ವರ ನಿಯಂತ್ರಣ ದಿನಾಚರಣೆ ಅಂಗವಾಗಿ ಮಂಗಳವಾರ ಆರೋಗ್ಯ ಇಲಾಖೆ ಹಾಗೂ ಸುಳ್ಯ ಪಂಚಾಯತ್ ನೇತೃತ್ವದಲ್ಲಿ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆರಂಭಿಕ ಮಳೆಯ ಸಂದರ್ಭದಲ್ಲಿ ಮನೆ, ಅಂಗಡಿಗಳ ಸುತ್ತ ಮುತ್ತ ಇರುವ ಪಾತ್ರೆ, ಇನ್ನಿತರ ಕಡೆಗಳಲ್ಲಿ ನೀರು ನಿಂತು ಅಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತದೆ.‌ ಆದ್ದರಿಂದ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದವರು ಹೇಳಿದರು.

ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ ನಮ್ಮ ಮನೆಯ ಪರಿಸರ ಸ್ವಚ್ಚವಾಗಿಡುವಂತೆ ಪ್ರತಿಯೊಬ್ಬರೂ ನೋಡಿಕೊಳ್ಳಬೇಕು.‌ ಡೆಂಗ್ಯು ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.‌

ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ, ಆರೋಗ್ಯ ಇಲಾಖೆಯವರು, ಆಶಾ ಕಾರ್ಯಕರ್ತೆಯರು, ನಗರ ಪಂಚಾಯತ್ ಸಿಬ್ಬಂದಿಗಳು ಇದ್ದರು.
ತಾಲೂಕು ಆರೋಗ್ಯ ಅಧಿಕಾರಿಗಳ‌ ಕಚೇರಿಯಿಂದ ಹೊರಟ ಜಾಗೃತಿ ಜಾಥಾ ನಗರದಲ್ಲಿ‌ ಸಂಚರಿಸಿತು. ನಗರದ ಅಂಗಡಿ, ಮನೆಗಳಿಗೆ ತೆರಳಿ ಮಾಹಿತಿ ನೀಡುವ ಕಾರ್ಯವನ್ನೂ ಹಮ್ಮಿಕೊಳ್ಳಲಾಯಿತು.

Ashika S

Recent Posts

ಗುಜರಾತ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ಭರ್ಜರಿ ಜಯ

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ 152 ರನ್ ಗಳಿಸುವ ಮೂಲಕ ಆರ್‌ಸಿಬಿ…

3 hours ago

147 ರನ್​​ಗೆ ಆಲೌಟ್ ಆದ ಗುಜರಾತ್​ ಟೈಟನ್ಸ್​ : ಆರ್​ಸಿಬಿ ವೇಗಿಗಳ ದಾಖಲೆ ಪ್ರದರ್ಶನ

ಚಿನ್ನಸ್ವಾಮಿ​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು 19.3 ಓವರ್​ಗಳಲ್ಲಿ 147…

3 hours ago

ರಾಜೀನಾಮೆ ನೀಡಿದ ಪೇಟಿಎಂ ಸಿಒಒ ಭವೇಶ್ ಗುಪ್ತಾ

ಪೇಟಿಎಂನ ಮಾತೃ ಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಷನ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ತಮ್ಮ ಹುದ್ದೆಗೆ…

3 hours ago

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ವಿವಿಧಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ…

4 hours ago

ಬೆಂಗಾವಲು ಪಡೆಯ ವಾಹನದ ಮೇಲೆ ಭಯೋತ್ಪಾದಕರ ದಾಳಿ: ಐವರು ಅಧಿಕಾರಿಗಳಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಇಂದು (ಶನಿವಾರ) ಭಾರತೀಯ ವಾಯುಪಡೆ ಬೆಂಗಾವಲು ಪಡೆ ವಾಹನದ ಮೇಲೆ ಭಯೋತ್ಪಾದಕರು ದಾಳಿ…

4 hours ago

ಬಿ.ವೈ ರಾಘವೇಂದ್ರ ಪರ ಮತಯಾಚನೆ ನಡೆಸಿದ ವೇದವ್ಯಾಸ್ ಕಾಮತ್

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದ ಬಿಜೆಪಿಯ ಬೃಹತ್ ರೋಡ್ ಶೋ ನಲ್ಲಿ ಮಂಗಳೂರು ನಗರ ದಕ್ಷಿಣದ ಶಾಸಕರಾದ ವೇದವ್ಯಾಸ್…

4 hours ago