Categories: ಮಂಗಳೂರು

ಜಿಲ್ಲೆಯಲ್ಲಿ ನೀರು ಪೋಲಾಗದಂತೆ ಎಚ್ಚರ ವಹಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಕುಡಿಯುವವ ನೀರಿಗೆ ಯಾವುದೇ ತೊಂದರೆ ಇಲ್ಲ, ರೇಷನಿಂಗ್ ಮಾಡುವ ಪರಿಸ್ಥಿತಿ ಸದ್ಯಕ್ಕೆ ಬಂದಿಲ್ಲ, ಆದರೆ, ಜನರು ನೀರು ಪೋಲು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್  ಅವರು ಕರೆ ನೀಡಿದರು.

ಅವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೇತ್ರಾವತಿ ನದಿಯ ಮೂರು ಡ್ಯಾಂಗಳಲ್ಲಿ ಇರುವ ನೀರಿನ ಮಟ್ಟವನ್ನು ಪ್ರತಿದಿನ ಅವಲೋಕನ ನಡೆಸಲಾಗುತ್ತಿದೆ ಎಂದರು.

ತುಂಬೆ ಡ್ಯಾಂನಲ್ಲಿ 5.48 ಮೀಟರ್, ಎಎಂಆರ್ ಡ್ಯಾಂನಲ್ಲಿ 17.6 ಮೀ, ಬಿಳಿಯೂರು ಡ್ಯಾಂನಲ್ಲಿ 1.95 ಮೀಟರ್ ನೀರು ಲಭ್ಯವಿದೆ. ತುಂಬೆ ಡ್ಯಾಂನ ಮಟ್ಟ 5ಕ್ಕೆ ಇಳಿದಾಗ ಎಎಂಆರ್‌ನಿಂದ ನೀರು ಬಿಡಲಾಗುವುದು, ಎಎಂಆರ್ ಡ್ಯಾಂನಲ್ಲಿ 16 ಮೀಟರ್‌ಗೆ ಬಂದಾಗ ಬಿಳಿಯೂರು ಡ್ಯಾಂನಿಂದ ನೀರು ಬಿಡಲಾಗುವುದು. ಈಗಾಗಲೇ ಕೈಗಾರಿಕೆಗಳಿಗೆ ಕೊಡುವ ನೀರಿನ ಪ್ರಮಾಣವನ್ನು ಶೇ 50 ರಷ್ಟು ಕಡಿಮೆ ಮಾಡಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಪೂರೈಕೆಯಾಗುವ ತುಂಬೆ ಅಣೆಕಟ್ಟಿನಲ್ಲಿ 6 ಮೀಟರ್ ನೀರು ಸುಮಾರು 50 ದಿನಗಳಿಗೆ ಪೂರೈಕೆ ಮಾಡಬಹುದು. ಏಪ್ರಿಲ್ ಮೇ ತಿಂಗಳಲ್ಲಿ ಸಾಮಾನ್ಯವಾಗಿ ಮುಂಗಾರು ಪೂರ್ವ ವಾಡಿಕೆ ಮಳೆಯಾಗುತ್ತದೆ. ಬಿಸಿಲ ಝಳ ಹೆಚ್ಚಿರುವುದರಿಂದ ನೀರು ಪೋಲು ಮಾಡದೆ ಎಚ್ಚರಿಕೆ ವಹಿಸಬೇಕು ಎಂದರು.

ಬಾಳೆಪುಣಿ, ಕೋಣಾಜೆ, ನರಿಂಗಾನ, ಪಜೀರು, ಮಂಜನಾಡಿ ಪ್ರದೇಶಗಳಿಗೆ 9 ಟ್ಯಾಂಕರ್‌ಗಳ ಮೂಲಕ ದಿನಕ್ಕೆ 30 ಟ್ರಿಪ್ ನೀರು ಪೂರೈಕೆ ಮಾಡಲಾಗುತ್ತಿದೆ. ಉಳ್ಳಾಲ, ಕೋಟೆಕಾರು, ಸೋಮೇಶ್ವರ ಸೇರಿ ನಗರ ಭಾಗದ 12 ವಾರ್ಡ್‌ಗಳಿಗೆ 9 ಟ್ಯಾಂಕರ್‌ಗಳ ಮೂಲಕ 62 ಟ್ರಿಪ್ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Ashitha S

Recent Posts

ಪೈಲಟ್‌ಗಳ ಸಾಮೂಹಿಕ ರಜೆ : 70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

ಅನಾರೋಗ್ಯದಿಂದ ನೆಪವೊಡ್ಡಿ ಹಿರಿಯ ಪೈಲೆಟ್‌ಗಳು ಸಾಮೂಹಿಕವಾಗಿ ರಜೆಯಲ್ಲಿ ತೆರಳಿರುವ ಪರಿಣಾಮ ಸುಮಾರು 70ಕ್ಕೂ ಅಧಿಕ ಏರ್‌ ಇಂಡಿಯಾ ಎಕ್ಸ್‌ ಪ್ರೆಸ್‌…

14 mins ago

ಪ್ರಿಯತಮೆ ಎದುರೇ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಂದ ಪಾಪಿ!

ಪ್ರಿಯತಮೇ ಎದುರೆ ಓರ್ವ ಮಹಿಳೆ ಮೇಲೆ ಅತ್ಯಾಚಾರ ಎಸಗಿ ನಂತರ ಕೊಂದ ಪಾಪಿ ಪ್ರಿಯತಮ. ಈ ಘಟನೆ ಗೌರಿಬಿದನೂರು ತಾಲ್ಲೂಕಿನ…

41 mins ago

ಬೂತ್​ನಲ್ಲಿ ಲಕ್ಕಿ ಡ್ರಾ : ಮತ ಚಲಾಯಿಸಿದ ಮತದಾರನಿಗೆ ಸಿಕ್ತು ವಜ್ರದ ಉಂಗುರ

ಭೋಪಾಲ್​ನ ಪ್ರತಿ ಬೂತ್​ನಲ್ಲಿ ಲಕ್ಕಿ ಡ್ರಾ ನಡೆಸಲಾಗಿದೆ. ಅದರಲ್ಲಿ ಅದೃಷ್ಟಶಾಲಿ ಮತದಾರರಿಗೆ ಉಡುಗೊರೆ ಸಿಗಲಿದೆ ಎಂದು ಘೋಷಣೆ ಮಾಡಲಾಗಿತ್ತು. ಹೀಗೇ…

57 mins ago

ಹೊಸ ಕೋವಿಡ್-19 ರೂಪಾಂತರ ಯುಎಸ್‌ನಲ್ಲಿ ಪತ್ತೆ!

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪತ್ತೆಯಾದ ಈ ಭಿನ್ನ ಗುಂಪನ್ನು ತೀವ್ರ ತೀವ್ರ ಉಸಿರಾಟದ ಸಿಂಡ್ರೋಮ್ ಕೊರೊನಾ ವೈರಸ್ 2 (SARS-CoV-2) ಫ್ಲರ್ಟ್…

1 hour ago

ಇವಿಎಂ,ಚುನಾವಣಾ ಸಿಬ್ಬಂದಿ ಇದ್ದ ಬಸ್‌ಗೆ ಬೆಂಕಿ : ಯಂತ್ರಗಳು ಡ್ಯಾಮೇಜ್‌

ಚುನಾವಣೆ ಬಳಿಕ ಇವಿಎಂ ಯಂತ್ರಗಳು ಹಾಗೂ ಮತಗಟ್ಟೆ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್​ಗೆ ಬೆಂಕಿ ತಗುಲಿರುವ ಘಟನೆ ಮಧ್ಯಪ್ರದೇಶದ ಬೇತುಲ್​ನಲ್ಲಿ ನಡೆದಿದೆ.…

1 hour ago

ಮತ್ತಷ್ಟು ಮೇಲಕ್ಕೆ ಎರುತ್ತೀರಿ : ಶ್ರೀನಿಧಿ ಶೆಟ್ಟಿಗೆ ದೈವದ ಅಭಯ

ಕೆಜಿಎಪ್ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿಯವರು ತನ್ನ ಕುಟುಂಬದ ದೈವಗಳಿಗೆ ಹೇಳಿದ್ದ ಹರಕೆಯ ನೇಮೋತ್ಸವವನ್ನು ನೆರವೇರಿಸಿದರು. ಮಂಗಳೂರಿನ ಹೊರವಲಯದ ಕಿನ್ನಿಗೋಳಿ…

2 hours ago