News Karnataka Kannada
Friday, April 19 2024
Cricket
ಮಂಗಳೂರು

“ಗೃಹಜ್ಯೋತಿ” ಹೆಸರಲ್ಲಿ ಬಡ ಜನರ ರಕ್ತ ಹೀರುತ್ತಿರುವ ಸೈಬರ್

Cyber Suction Blood of Poor People in the Name of 'Griha Jyoti'
Photo Credit : News Kannada

ಪಡುಬಿದ್ರಿ: ಇಪ್ಪತ್ತು ರೂಪಾಯಿ ಪಡೆಯ ಬೇಕಾಗಿದ್ದ ಗೃಹಜ್ಯೋತಿ ಯೋಜನೆಯ ನೋಂದಣಿಗೆ ಪಡುಬಿದ್ರಿ ಸೈಬರ್ ಸೆಂಟರ್‌ವೊಂದರಲ್ಲಿ 100 ರೂಪಾಯಿ ಪಡೆಯುತ್ತಿರುವ ದೂರಿನ ಕುರಿತು ಗ್ರಾ.ಪಂ.ಸದಸ್ಯರ ದೂರಿನನ್ವಯ ಕಾಪು ತಹಶಿಲ್ದಾರ್ ಅಂತಹ ಸೈಬರ್ ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಗ್ರಾ.ಪಂ. ಸದಸ್ಯೆ ಜ್ಯೋತಿ ಮೆನನ್, ಸರ್ಕಾರದ ಬಡವರ “ಗೃಹಜ್ಯೋತಿ” ಯೋಜನೆಯನ್ನು ದುರುಪಯೋಗ ಮಾಡಿಕೊಂಡ ಪಡುಬಿದ್ರಿಯ ಗ್ರಾ.ಪಂ. ಮುಂಭಾಗದ ಸ್ಟಾರ್ ಸೈನ್ ಹೆಸರಿನ ಸೈಬರ್ ಸೆಂಟರ್ ನಲ್ಲಿ ಇಪ್ಪತ್ತು ರೂಪಾಯಿ ಪಡೆಯ ಬೇಕಾಗಿದ್ದರೂ, ಮೂಲಾಜಿಲ್ಲದೆ ಬಡಪಾಯಿ ಗ್ರಾಹಕರಿಂದ ನೂರು ರೂಪಾಯಿಗಳಂತೆ ವಸೂಲಿ ಮಾಡುತ್ತಿದ್ದು, ಇದು ಗ್ರಾ.ಪಂ. ಸದಸ್ಯ ಶಫಿಯವರ ಗಮನಕ್ಕೆ ಬಂದಿದೆ ಎಂದರು.

ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಬಂದು ವಿಚಾರಿಸಿದ್ದು, ಕಾಪು ತಹಶಿಲ್ದಾರ್ ಗಮನಕ್ಕೆ ತಂದಿದ್ದಾರೆ. ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ವ್ಯಕ್ತ ಪಡಿಸಿದ್ದಾರೆ.

ಸೈಬರ್ ಮಾಲೀಕ ಇಮ್ತಿಯಾಜ್ ಮೊದಲಿಗೆ ತಾನು ಮಾಡಿದ ಅಪರಾಧವನ್ನು ಸಮರ್ಥಿಸಿ ಬಜೆಪೆಯಲ್ಲಿ ನೂರು ರೂ. ಇದೆ ಆದ್ದರಿಂದ ನಾನು ನೂರು ರೂಪಾಯಿ ತೆಗೆದುಕೊಳ್ಳುತ್ತೇನೆ ಎಂಬುದಾಗಿ ಉದ್ಧಟತನ ತೋರಿದ್ದು, ಪೊಲೀಸ್ ಪ್ರವೇಶ ಹಾಗೂ ತಹಶಿಲ್ದಾರ್ ಕಾನೂನು ಕ್ರಮದ ಬಗ್ಗೆ ತಿಳಿಯುತ್ತಿದಂತೆ ದರ ಕಡಿತ ಗೊಳಿಸುವುದಾಗಿ ತಿಳಿಸಿದ್ದು, ಆದರೆ ಈ ಹಿಂದೆ ಬಡಪಾಯಿಗಳಿಂದ ಹೆಚ್ಚುವರಿಯಾಗಿ ಪಡೆದ ಮೊತ್ತಕ್ಕೆ ಏನು ಪರಿಹಾರ ಎಂಬುದು ತಹಶಿಲ್ದಾರ್ ತನಿಖೆ ಬಳಿಕವಷ್ಟೇ ಇತ್ಯರ್ಥವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು