ಮಂಗಳೂರು

ಯುಎನ್‌ಎಫ್‌ಸಿಸಿಯ ಸಿಒಪಿ ಸಭೆಯಲ್ಲಿ ಸಿಎಚ್‌ಡಿ ಗ್ರೂಪ್ ಸಂಸ್ಥೆ ಮಹತ್ತರ ಪಾತ್ರ

ಮಂಗಳೂರು: ಯುನೈಟೆಡ್ ಅರಬ್ ಎಮಿರೇಟ್ಸ್ ನ ಲ್ಲಿ ಯುಎನ್‌ಎಫ್‌ಸಿಸಿಯ ಸಿಒಪಿ 28 ಸಭೆಯಲ್ಲಿ ಮಂಗಳೂರು ಪ್ರಧಾನ ಕಚೇರಿಯ ಜಾಗತಿಕ ಆರೋಗ್ಯ ಸಂಸ್ಥೆಯಾದ ಸಿಎಚ್‌ಡಿ ಗ್ರೂಪ್ ಸಂಸ್ಥೆಯು ಅಂತರರಾಷ್ಟ್ರೀಯ ನಿಯೋಗವನ್ನು ಮುನ್ನಡೆಸಲಿದೆ.

ಸಿಒಪಿ28 ಸಭೆಯು 2023, ನವೆಂಬರ್ 30ರಿಂದ ಡಿಸೆಂಬರ್ 12ರವರೆಗೆ ಜರುಗಲಿದೆ. ಸಿಎಚ್‌ಡಿ ಗ್ರೂಪ್ ಸಂಸ್ಥೆಯು ದಕ್ಷಿಣ ಏಷ್ಯಾ, ಆಫ್ರಿಕಾ ಮತ್ತು ಇರಾನ್‌ನಿಂದ 7 ಸದಸ್ಯರನ್ನೊಳಗೊಂಡ ತಜ್ಞರ ನಿಯೋಗವನ್ನು ಮುನ್ನಡೆಸುತ್ತದೆ. ಹಾಗೂ, ಹವಾಮಾನ ಬದಲಾವಣೆಯ ಸಾರ್ವಜನಿಕ ಆರೋಗ್ಯ ಪರಿಣಾಮಗಳು, ಶಕ್ತಿ ಪರಿವರ್ತನೆ, ಜೈವಿಕ ಇಂಧನ ಕಡಿತ ಮತ್ತು ಆಹಾರ ಸುರಕ್ಷತೆಯ ಕಾಳಜಿಗಳಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ವಿಶ್ವದಾದ್ಯಂತ ವಿವಿಧ ಪಾಲುದಾರರೊಂದಿಗೆ ತನ್ನನ್ನು ತೊಡಗಿಸಿಕೊಳ್ಳುತ್ತದೆ.

ಯುಎನ್‌ಎಫ್‌ಸಿಸಿ ಮತ್ತು ಸಿಒಪಿ ಸಭೆಗಳ ಇತಿಹಾಸದಲ್ಲಿ ಸಿಒಪಿ28 ಮೊದಲ ಬಾರಿಗೆ ಆರೋಗ್ಯವನ್ನು ಕಾರ್ಯಸೂಚಿಯಾಗಿ ಚರ್ಚಿಸಲಾಗುತ್ತಿದೆ ಮತ್ತು ಮಂಡಿಸಲಾಗುತ್ತಿದೆ. ಸಿಎಚ್‌ಡಿ ಗ್ರೂಪ್ ಸಂಸ್ಥೆಯು ಜೊತೆಜೊತೆಗೆ ಕ್ಲೈಮೆಟ್‌ ಆಕ್ಷನ್ ನೆಟ್‌ವರ್ಕ್ – ಸೌತ್ ಏಷ್ಯಾದೊಂದಿಗೆ ಜಂಟಿಯಾಗಿ ಸಭೆಯನ್ನು ನಡೆಸಲಿದ್ದು, ಇದು ದಕ್ಷಿಣ ಏಷ್ಯಾದಲ್ಲಿ ಶಕ್ತಿಯ ಪರಿವರ್ತನೆಯತ್ತ ಗಮನ ಹರಿಸಲಿದೆ.

ಸಿಎಚ್‌ಡಿ ಗ್ರೂಪ್ ಸ್ಥಾಪಕ ಮತ್ತು ಸಿಇಒ ಆಗಿರುವ ಡಾ. ಎಡ್ಮಂಡ್ ಫೆರ್ನಾಂಡಿಸ್ ಅವರು ವಿಶ್ವಸಂಸ್ಥೆಯ ಫೌಂಡೇಶನ್ ವೇದಿಕೆಯಲ್ಲಿ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಸಮಾನ ಆಹಾರ ವಿತರಣೆಯನ್ನು ಉತ್ತೇಜಿಸುವ ಕುರಿತು ಮಾತನಾಡಲಿದ್ದಾರೆ, ಜೊತೆಗೆ ಆಹಾರ ವ್ಯವಸ್ಥೆಗಳು, ಸಾರ್ವಜನಿಕ ಪೋಷಣೆಯ ಹವಾಮಾನ ಸಂವೇದನೆ ಕುರಿತು ಮತ್ತು ಯುದ್ಧವು ಆಹಾರ ಸುರಕ್ಷತೆ ಮತ್ತು ಆರೋಗ್ಯ ವ್ಯವಸ್ಥೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮುಂತಾದುವುಗಳ ಬಗ್ಗೆ ಉಕ್ರೇನ್ ರಾಷ್ಟ್ರದ ವೇದಿಕೆಯಲ್ಲಿ ಅವರು ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಡಾ. ಫೆರ್ನಾಂಡಿಸ್ ಹಲವಾರು ಪ್ರಮುಖ ವಿಶ್ವ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ಡಾ. ಎಡ್ಮಂಡ್ ಫೆರ್ನಾಂಡಿಸ್ ಈ ಹಿಂದೆ ಯುಎನ್‌ಎಫ್‌ಸಿಸಿಯನ್ನು ಹವಾಮಾನ ಸುರಕ್ಷಿತ ಭವಿಷ್ಯಕ್ಕಾಗಿ ಎಲ್ಲಾ ನೀತಿಗಳಲ್ಲಿ ಸಾರ್ವಜನಿಕ ಆರೋಗ್ಯವನ್ನು ಮುಖ್ಯವಾಹಿನಿಗೆ ತರಲು ಒತ್ತಾಯಿಸಿದ್ದರು. ಸಿಒಪಿ28ನಲ್ಲಿ ಅವರು ಆಹಾರದ ಭವಿಷ್ಯದ ಕುರಿತಾದ ಜಾಗತಿಕ ಒಕ್ಕೂಟದ ಸಮೂಹದ ಭಾಗವಾಗಿದ್ದಾರೆ.

Ashika S

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

3 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

3 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

3 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

4 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

4 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

4 hours ago