Categories: ಮಂಗಳೂರು

ಜಿಲ್ಲಾ ಕಾರಾಗೃಹದ ಕೈದಿಗಳಿಗಾಗಿ ಮನಪರಿವರ್ತನಾ ಶಿಬಿರ

ಕೊಡಿಯಾಲ್ ಬೈಲ್: ನ್ಯೂಸ್ ಕರ್ನಾಟಕ ಇದರ ಸಹಯೋಗದೊಂದಿಗೆ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು,ರೋಟರಿ ಕ್ಲಬ್ ಆಫ್ ಮಂಗಳೂರು ಹಿಲ್ಸ್ ಸೈಡ್, ಲಯನ್ಸ್ ಅಂಡ್ ಲಿಯೊ ಕ್ಲಬ್ ಆಫ್ ಮಂಗಳೂರು ಕೊಡಿಯಲ್‌ ಬೈಲ್‌, ರೋಟರಿ ಕ್ಲಬ್ ಆಫ್ ಮಂಗಳೂರು ಮೆಟ್ರೋ, ಇದರ ಸಹಯೋಗದೊಂದಿಗೆ ಮನಪರಿವರ್ತನ ಶಿಬಿರ ಜಿಲ್ಲಾ ಕಾರಾಗೃಹ ಕೋಡಿಯಾಲ್ ಬೈಲ್ ಮಂಗಳೂರಿನಲ್ಲಿ ಇಂದು ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ಜರುಗಿತು.

ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ, ರೋಟರಿ ಕ್ಲಬ್ ಆಫ್ ಮಂಗಳೂರು ಮೆಟ್ರೋ, ಇದರ ಅಧ್ಯಕ್ಷರಾದ ರಜನಿ ಭಟ್ ಅವರು “ಗಣೇಶ ಚತುರ್ಥಿಯನ್ನು ಇತ್ತೀಚೆಗೆಯಷ್ಟೇ ಆಚರಿಸಿದ್ದೇವೆ, ಆ ದೇವರ ಕೃಪೆಯಿಂದ ಸಕಲ ವಿಘ್ನಗಳು ದೂರವಾಗಿ ಹೊಸ ಬೆಳಕು ಮೂಡಲಿ,ಹೊಸ ಹಾದಿ ತೆರೆಯಲಿ ಮನಸ್ಸು ಪರಿವರ್ತಿತವಾಗಲಿ” ಎಂಬ ಮಾತಿನೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸುತ್ತಾ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು, ಇದರ ಎನ್ ಎಸ್ ಎಸ್ ಪ್ರೋಗ್ರಾಮ ಆಫೀಸರ್ ಡಾ ಉದಯ್ ಕುಮಾರ್, ಲಯನ್ಸ್ ಕ್ಲಬ್ ಝೋನ್ ಚೇಯರ್ ಪರ್ಸನ್ ಆದ ಲಯನ್ ಆಶಾ ನಾಗರಾಜ್, ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚು ನಡೆಯಲಿ ಎಂದು ಶುಭನುಡಿದರು.

ಜೈಲು ಸೂಪರಿಡೆಂಟ್ ಆದಂತಹ ಓಬಲೇಶ್ವರ್ ಅವರು “ಮನಸ್ಸಿನ ಮೇಲೆ ಹಿಡಿತವನ್ನು ಹೊಂದುವಂತಹ ಪ್ರಯತ್ನ ನಡೆಯಬೇಕು ಆಗ ಬದುಕು ಬೆಳಗುವುದು” ಎಂದು ನುಡಿದರು.

ಜಿಲ್ಲಾ ಕಾರಾಗೃಹದಲ್ಲಿನ ಕೈದಿಗಳಿಗಾಗಿ ಉಚಿತ ಕನ್ನಡಕಗಳನ್ನು ಟೈಟನ್ ಐ ಪ್ಲಸ್ ಉರ್ವಸ್ಟೋರ್ ಹಾಗೂ ರೋಟರಿ ಕ್ಲಬ್ ಆಫ್ ಹಿಲ್ ಸೈಡ್ ವತಿಯಿಂದ, ನ್ಯೂಸ್ ಕರ್ನಾಟಕದ ಪ್ರತಿಮಾ ಅವರು ಜೈಲ್ ಸೂಪರಿಡೆಂಟ್ ಓಬಳೇಶ್ವರ್ ಅವರಿಗೆ ಹಸ್ತಾಂತರಿಸಿದರು.

ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು ಇದರ ವಿದ್ಯಾರ್ಥಿಗಳು ಖೈದಿಗಳ ಮನಪರಿವರ್ತನ ಕಾರ್ಯಕ್ರಮಕ್ಕೆ ಸಂಬಂಧಿಸಿದ ನಾಟಕ ಒಂದನ್ನು ಅದ್ಭುತವಾಗಿ ಪ್ರದರ್ಶಿಸಿದರು.

ರೋಟರಿ ಕ್ಲಬ್ ಮಂಗಳೂರು ಮೆಟ್ರೋದ ಸೇಕ್ರೇಟರಿ ಆದ ಸುರೇಖ ಕಿಣಿ ಅವರು ಕಾರ್ಯಕ್ರಮದಲ್ಲಿ ಸಹಕರಿಸಿದ ಸರ್ವರಿಗೆ ಸ್ವಾಗತವನ್ನು ಬಯಸಿದರು. ನ್ಯೂಸ್ ಕರ್ನಾಟಕ, ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು ಇದರ ವಿದ್ಯಾರ್ಥಿಗಳು, ರೋಟರಿ ಕ್ಲಬ್ ಆಫ್ ಮಂಗಳೂರು ಹಿಲ್ಸ್ ಸೈಡ್, ರೋಟರಿ ಕ್ಲಬ್ ಆಫ್ ಮಂಗಳೂರು ಮೆಟ್ರೋ,ಲಯನ್ಸ್ ಅಂಡ್ ಲಿಯೊ ಕ್ಲಬ್ ಆಫ್ ಮಂಗಳೂರು ಮೆಟ್ರೋ ಸಂಸ್ಥೆಗಳ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Gayathri SG

Recent Posts

ಪ್ಲೇ-ಆಫ್​ ರೇಸ್​ನಿಂದ ಹೊರ ಬಿದ್ದ ಪಂಜಾಬ್ ​: ಆರ್‌ಸಿಬಿ ಪಾಯಿಂಟ್ಸ್ ಎಷ್ಟು ?

ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ನಿನ್ನೆ ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್​ಗಳಿಂದ ಸೋಲಿಸುವ ಮೂಲಕ,…

9 mins ago

ಉಡುಪಿ: ಇಂದಿನಿಂದ ಮೂರು ದಿನಗಳ ಕರಾವಳಿ ಕಲಾವಿದೆರ್ ತುಳು ನಾಟಕೋತ್ಸವ

ಮಲ್ಪೆಯ ಕರಾವಳಿ ಕಲಾವಿದೆರ್ ತಂಡದಿಂದ ಮೂರು ದಿನಗಳ ತುಳು ನಾಟಕೋತ್ಸವ ಇದೇ ಇಂದಿನಿಂದ (ಮೇ 10) ತೊಟ್ಟಂ ಸಾರ್ವಜನಿಕ ಗಣೇಶೋತ್ಸವ…

15 mins ago

ಇರಾನ್‌ ವಶಪಡಿಸಿಕೊಂಡ ಹಡಗಿನಲ್ಲಿದ್ದ 5 ಭಾರತೀಯ ನಾವಿಕರ ಬಿಡುಗಡೆ

ಟೆಹ್ರಾನ್ ವಶಪಡಿಸಿಕೊಂಡ ಇಸ್ರೇಲಿ-ಸಂಬಂಧಿತ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರನ್ನು ಬಿಡುಗಡೆ ಮಾಡಲಾಗಿದೆ.

30 mins ago

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ 99 ಬ್ಯಾಚ್ ನ 25ನೇ ವರ್ಷಾಚರಣೆ

ಪ್ರತಿಷ್ಠಿತ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ತನ್ನ ಮೊದಲ ಎಂ.ಬಿ.ಬಿ. ಎಸ್. ಬ್ಯಾಚ್ 99 ರ ಗುರುವಂದನ ಮತ್ತು 25ನೇ…

41 mins ago

ಹಿಂದೂಗಳ ಪವಿತ್ರ ಚಾರ್ ಧಾಮ್‌ ಯಾತ್ರೆ ಇಂದಿನಿಂದ ಆರಂಭ

ಹಿಂದೂಗಳ ಪವಿತ್ರ ಯಾತ್ರೆ ಆಗಿರುವ ಚಾರ್ ಧಾಮ್‌ ಯಾತ್ರೆ ಇಂದಿನಿಂದ ಆರಂಭವಾಗಲಿದೆ. ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳು ಬೆಳಿಗ್ಗೆ 7…

55 mins ago

ಜೈಲಿನಲ್ಲಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರನ್ನು 3 ದಿನ ಯಾರು ಭೇಟಿ ಮಾಡುವಂತಿಲ್ಲ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರು ನಿನ್ನೆ ಜಾಮೀನು ಸಿಗದ ಹಿನ್ನೆಲೆಯಲ್ಲಿ,…

1 hour ago