Categories: ಮಂಗಳೂರು

ಸೈಟೊಜೆನೆಟಿಕ್ ವಿಶ್ಲೇಷಣೆಯ ಪರಿಣಾಮದ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

ಉಳ್ಳಾಲ:  ಕ್ಷೇಮ  ಜೆನೆಟಿಕ್ ಸೇವೆಗಳ ಕೇಂದ್ರವು ಆಧುನಿಕ “ಅತ್ಯಾಧುನಿಕ” ಸೈಟೋಜೆನೆಟಿಕ್ ಪರೀಕ್ಷಾ ಸೌಲಭ್ಯವಾಗಿದ್ದು, ಉದ್ದೇಶಿತ ಚಿಕಿತ್ಸೆಯನ್ನು ತಲುಪುವಲ್ಲಿ ವೈದ್ಯರಿಗೆ ಪ್ರಯೋಜನವನ್ನು ನೀಡುತ್ತದೆ. ಇದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುರುತಿಸಲ್ಪಟ್ಟ ಏಕೈಕ ರೋಗನಿರ್ಣಯ ಪ್ರಯೋಗಾಲಯವಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ಇದರ ಕಾರ್ಯನಿರ್ವಹಣೆ ಶ್ಲಾಘನೀಯ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಡಾ|  ಸತೀಶ್ ಕುಮಾರ್ ಭಂಡಾರಿ ಬಿ. ಅಭಿಪ್ರಾಯಪಟ್ಟರು.

ನಿಟ್ಟೆ ವಿಶ್ವವಿದ್ಯಾನಿಲಯದ ವಿಂಶತಿ ಭವನದಲ್ಲಿ ಜೆನೆಟಿಕ್ ಸರ್ವೀಸಸ್ ಕೇಂದ್ರದ ದಶಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ  ಕ್ಷೇಮ ಸೆಂಟರ್ ಫಾರ್ ಜೆನೆಟಿಕ್ ಸರ್ವಿಸಸ್, ಸೆಂಟ್ರಲ್ ರಿಸರ್ಚ್ ಲ್ಯಾಬೋರೇಟರಿ ಮತ್ತು ಆಂಕೊಲಾಜಿ ವಿಭಾಗ, ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ, ನಿಟ್ಟೆ (ಪರಿಗಣಿತ ವಿಶ್ವವಿದ್ಯಾನಿಲಯ)  ಜಂಟಿಯಾಗಿ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕ್ಷೇಮ ಉಪ ಡೀನ್ ಡಾ| ಜಯಪ್ರಕಾಶ್ ಶೆಟ್ಟಿ , ಕೆಎಂಸಿ, ಮಂಗಳೂರಿನ ವೈದ್ಯರಾದ ಡಾ|ಹರ್ಷ ಪ್ರಸಾದ್, ಯೇನೆಪೆÇಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆಯ ಡಾ|ರಾಜೇಶ್ ಕೃಷ್ಣ,  ಕೆ.ಎಸ್.ಹೆಗ್ಡೆ ಮೆಡಿಕಲ್‍ನ ಡಾ|ಜಯರಾಮ ಶೆಟ್ಟಿ ಮತ್ತು ಡಾ|ವಿಜಿತ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಪ್ರಯೋಗಾಲಯದ ಪ್ರಗತಿಗೆ ಕಾರಣರಾದ ಜೆನೆಟಿಕ್ ಸೇವೆಗಳ ಸಂಯೋಜಕ  ಡಾ| ಡಿ. ಪ್ರಶಾಂತ್ ಶೆಟ್ಟಿ ಮತ್ತು ಹಿರಿಯ ತಂತ್ರಜ್ಞ  ವಾಣಿ ಶೆಟ್ಟಿಯವರ 10 ವರ್ಷಗಳ ನಿರಂತರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್, ಬೆಂಗಳೂರಿನ  ನಿರ್ದೇಶಕ ಡಾ| ಜಯರಾಮ ಎಸ್. ಕಡಂದಲೆ  ಸೈಟೊಜೆನೆಟಿಕ್ ಮತ್ತು ಮಾಲಿಕ್ಯುಲರ್ ಸೈಟೊಜೆನೆಟಿಕ್ ಅಸಹಜತೆಗಳು ಮತ್ತು ಹೆಮಟೊಲಾಜಿಕ್ ಮಾರಣಾಂತಿಕತೆಗಳಲ್ಲಿ ಅವುಗಳ ವೈದ್ಯಕೀಯ ಪ್ರಸ್ತುತತೆ.

ಯೇನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆಯ  ಕನ್ಸಲ್ಟೆಂಟ್ ಹೆಮಟಾಲಜಿಸ್ಟ್ ಡಾ|ರಾಜೇಶ್ ಕೃಷ್ಣ  ಸೈಟೊಜೆನೆಟಿಕ್ ವರದಿಗಳ ಒಳನೋಟಗಳು – ಹೆಮಟೊಲಾಜಿಕಲ್ ಕ್ಯಾನ್ಸರ್ ಚಿಕಿತ್ಸೆಯ ಕುರಿತು.  ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್, ಬೆಂಗಳೂರಿನ  ಕ್ಲಿನಿಕಲ್ ಜೆನೆಟಿಕ್ಸ್‍ನ ಸಲಹೆಗಾರ ಡಾ| ಮೀನಾಕ್ಷಿ ಭಟ್‍ಕ್ಯಾನ್ಸರ್ ಸಿಂಡ್ರೋಮ್‍ನಲ್ಲಿ ಜೆನೆಟಿಕ್ ಕೌನ್ಸೆಲಿಂಗ್ ವಿಷಯದ ಕುರಿತು,  ಕೇರಳದ ಸೆಂಟ್ರಲ್ ಯೂನಿವರ್ಸಿಟಿಯ ಪ್ರಾಣಿಶಾಸ್ತ್ರ ವಿಭಾಗದ ಡಾ|ಎಚ್ ಪಿ ಗುರುಶಂಕರ `ಮಲಾಥಿಯಾನ್ ಪ್ರೇರಿತ ಲ್ಯುಕೇಮಿಯಾ: ಆಣ್ವಿಕ ಕಾರ್ಯವಿಧಾನ| ವಿಚಾರದಲ್ಲಿ ವಿಷಯ ಮಂಡಿಸಿದರು.

ನಿರಂತರ ವೈದ್ಯಕೀಯ ಶಕ್ಷಣ ಕಾರ್ಯಕ್ರಮದಲ್ಲಿ  ಕ್ಲಿನಿಕಲ್ ಮತ್ತು ಆಣ್ವಿಕ ಸೈಟೊಜೆನೆಟಿಕ್ಸ್ ಜ್ಞಾನವನ್ನು ಉತ್ಕೃಷ್ಟಗೊಳಿಸುವುದು ಮತ್ತು ಆಂಕೊಥೆರಪಿಯಲ್ಲಿ ಸೈಟೊಜೆನೆಟಿಕ್ ವರದಿಗಳ ಒಳನೋಟವನ್ನು ನೀಡುವುದು. ಮುಖ್ಯವಾಗಿದ್ದು, ಈ ಕಾರ್ಯಕ್ರಮದಲ್ಲಿ 250 ಪ್ರತಿನಿ„ಗಳು ಭಾಗವಹಿಸಿದ್ದರು.

ಕೇಂದ್ರೀಯ ಸಂಶೋಧನಾ ಪ್ರಯೋಗಾಲಯದ ಪ್ರಧಾನ ವೈಜ್ಞಾನಿಕ ಅಧಿಕಾರಿ ಡಾ| ಸುಚೇತಾ ಕುಮಾರಿ ಎನ್. ಕ್ಷೇಮಾ ಜೆನೆಟಿಕ್ ಸೇವೆಗಳ ಕೇಂದ್ರದ ಹತ್ತು ವರ್ಷಗಳ ಪ್ರಗತಿ ಮತ್ತು ಸಾಧನೆಗಳನ್ನು ಪ್ರಸ್ತುತಪಡಿಸಿ ಸ್ವಾಗತಿಸಿದರು.  ಕ್ಷೇಮಾದ ಸಹಾಯಕ ಪ್ರಾಧ್ಯಾಪಕಿ ಡಾ|ಶಿಲ್ಪಾ ಎಸ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು ಮತ್ತು ಕ್ಷೇಮ ಸಹಾಯಕ ಪ್ರಾಧ್ಯಾಪಕಿ ಡಾ|ರೇಷ್ಮಾ ಎ ಶೆಟ್ಟಿ ವಂದಿಸಿದರು.

Sneha Gowda

Recent Posts

ಬೃಹತ್ ನಕಲಿ ಸಿಮ್ ಜಾಲ ದಂಧೆ ಬೆಳಕಿಗೆ: ಆನ್ಲೈನ್ ವಂಚಕರಿಗೆ ಮಡಿಕೇರಿಯಿಂದ ಸಿಮ್ ಸಪ್ಲೈ

ಆನ್ ಲೈನ್ ಮೂಲಕ ವಿವಿಧ ರೀತಿಯಲ್ಲಿ ವಂಚಿಸಿ ಲಕ್ಷ ಲಕ್ಷ ಹಣವನ್ನು ದೋಚುತ್ತಿದ್ದ ನಯ ವಂಚಕ ದಂಧೆಕೋರರಿಗೆ ಗ್ರಾಹಕರ ಬದಲಿ…

3 mins ago

ಮಹಿಳೆಯ ಎಳೆದೊಯ್ದು ಕಾರು ಪಾರ್ಕಿಂಗ್‌ನಲ್ಲಿ ಅತ್ಯಾಚಾರ; ಭೀಕರ ದೃಶ್ಯ ಸೆರೆ

ಮಹಿಳೆ ಮೇಲೆ ಹಿಂಬದಿಯಿಂದ ಬೆಲ್ಟ್ ಮೂಲಕ ದಾಳಿ ನಡೆಸಿ, ಆಕೆಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ ಭೀಕರ ಘಟನೆ ನ್ಯೂಯಾರ್ಕ್ ನಗರದಲ್ಲಿ…

6 mins ago

ಮಲತಂದೆಯಿಂದಲೇ ಬಾಲಿವುಡ್ ನಟಿ ಕೊಲೆ; ಕೋರ್ಟ್

ಬಾಲಿವುಡ್ ನಟಿ ಲೈಲಾ ಖಾನ್ ಹತ್ಯೆ ಪ್ರಕರಣದಲ್ಲಿ ಮಲತಂದೆ ಪರ್ವೀನ್ ತಾಕ್ ದೋಷಿ ಎಂದು ಮುಂಬೈ ಸೆಷನ್ ಕೋರ್ಟ್ ಘಟನೆ…

18 mins ago

ಅಮೆರಿಕಕ್ಕೆ ಕೊಂಡೊಯ್ಯುವ ಶ್ವಾನಗಳಿಗೆ ಮೈಕ್ರೊಚಿಪ್‌ ಅಳವಡಿಕೆ ಕಡ್ಡಾಯ

ಅನ್ಯ ದೇಶಗಳಿಂದ ಅಮೆರಿಕಕ್ಕೆ ಕೊಂಡೊಯ್ಯುವ ಶ್ವಾನಗಳಿಗೆ ಕನಿಷ್ಠ 6 ತಿಂಗಳಾಗಿರಬೇಕು ಮತ್ತು ರೇಬಿಸ್‌ ತಡೆಗಟ್ಟುವ ಲಸಿಕೆ ಹಾಕಿಸಿರುವ ಮಾಹಿತಿ ಇರುವ…

20 mins ago

ಶಾರ್ಟ್ ಸರ್ಕ್ಯೂಟ್​ನಿಂದ ಸಿನಿಮಾ ಶೂಟಿಂಗ್ ಸೆಟ್​ ನಲ್ಲಿ ಬೆಂಕಿ: ನಾಲ್ಕು ಕೋಟಿ ನಷ್ಟ

ಲುಗು  ಜನಪ್ರಿಯ ನಟ ನಂದಮೂರಿ ಕಲ್ಯಾಣ್ ರಾಮ್  ನಟಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣ ನಡೆಸಲಾಗುತ್ತಿದ್ದ ಸೆಟ್​ಗೆ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಬೆಂಕಿ…

21 mins ago

ಅರವಿಂದ್ ಕೇಜ್ರಿವಾಲ್ ಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ಏಳು ಹಂತದ ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವಾದ ಜೂನ್ 1ರವರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ…

43 mins ago