Categories: ಮಂಗಳೂರು

ಮನುಷತ್ವದ ರಾಜಕಾರಣ ಮಾಡಿದ ರೈ: ಮೂರೊಳ್ಳಿ ಹೇಳಿಕೆ

ಬಂಟ್ವಾಳ: ಬಂಟ್ವಾಳ ಕ್ಷೇತ್ರದಲ್ಲಿ ೬ ಬಾರಿ ಶಾಸಕರಾಗಿ, ಸಚಿವರಾಗಿದ್ದ ರಮಾನಾಥ ರೈ ಅವರು ಎಲ್ಲಾ ಶಾಸಕರಿಗೂ ಅಭಿವೃದ್ಧಿ ಹೇಗೆ ಮಾಡಿಕೊಡಬಹುದು ಎಂದು ತೋರಿಸಿಕೊಟ್ಟು ಮಾದರಿ ಆಗಿದ್ದು,  ಅವರು ಮತಗಳಿಕೆಯ ಬದಲು ಮನುಷ್ಯತ್ವಕ್ಕೆ ರಾಜಕಾರಣ ಮಾಡಿದವರು ಎಂದು ಕೆಪಿಸಿಸಿ ವಕ್ತಾರ, ನ್ಯಾಯವಾದಿ ಸುಧೀರ್ ಕುಮಾರ್ ಮೂರೊಳ್ಳಿ ಹೇಳಿದರು.

ಅವರು ಬಂಟ್ವಾಳ ಪ್ರಜಾಧ್ವನಿ ಯಾತ್ರೆಯಲ್ಲಿ ಎನ್.ಸಿ.ರೋಡು ಜಂಕ್ಷನ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಗೋಡ್ಸೆ ಸಂತತಿಯ ಸುನೀಲ್ ಕುಮಾರ್ ಬಂಟ್ವಾಳಕ್ಕೆ ಬಂದು ಅಲ್ಲಾ- ರಾಮನ ಮಧ್ಯೆ ಚುನಾವಣೆ ಎಂದು ಹೇಳುತ್ತಿದ್ದು, ಆದರೆ ಕಾಂಗ್ರೆಸ್ ಅಲ್ಲಾ ಮತ್ತು ರಾಮ ಇಬ್ಬರು ಒಂದೇ ಎಂದು ಹೇಳುವ ಗಾಂಧಿ ಸಂತತಿಯಾಗಿದೆ. ಬಂಟ್ವಾಳ ಬಂದು ಭಾಷಣ ಬಿಗಿದ ಅಣ್ಣಾಮಲೈ ಬಿಜೆಪಿ ಸೇರುವ ಮೊದಲೇ ಆತನನ್ನು ನಾನು ಬಿಜೆಪಿಯ ಏಜೆಂಟ್ ಎಂದು ಹೇಳಿದ್ದೆ ಎಂದರು.

ರಮಾನಾಥ ರೈ ಅವರ ಕೊನೆಯ ಚುನಾವಣೆಯ ಸಂದರ್ಭದಲ್ಲಿ ಅವರ ವಿರೋಚಿತ ರಾಜಕಾರಣಕ್ಕೆ ಪ್ರೀತಿಯ ಗೆಲುವಿನ ಕಾಣಿಕೆ ಕೊಟ್ಟು, ಪ್ರಾಮಾಣಿಕತೆ, ಜನಪ್ರಿಯತೆಯನ್ನು ಗೆಲ್ಲಿಸಬೇಕಿದೆ ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬಡವರ ಪರ ಕೆಲಸವೇ ಮಾಡದ ಬಿಜೆಪಿಗೆ ಕಾಂಗ್ರೆಸ್ ಪ್ರಕಟಿಸಿದ ಜನಪರ ಯೋಜನೆಗೆ ಹೇಗೆ ದುಡ್ಡು ತರುತ್ತಾರೆ ಎಂಬ ಚಿಂತೆಯಾಗಿದ್ದು, ನಾವು ಹೇಗಾದರೂ ಮಾಡಿ ಗೃಹಜ್ಯೋತಿ, ಗೃಹ ಲಕ್ಷ್ಮೀ, ಅನ್ನಭಾಗ್ಯವನ್ನು ಅನುಷ್ಠಾನ ಮಾಡುತ್ತೇವೆ. ೬ ಬಾರಿ ಶಾಸಕನಾಗಿ, ಸಚಿವನಾಗಿ ಶಕ್ತಿಮೀರಿ ಕೆಲಸ ಮಾಡಿದ್ದು, ಕಳೆದ ಚುನಾವಣೆಯಲ್ಲಿ ತನ್ನನ್ನು ಸೋಲಿಸಿದ ರೀತಿಗೆ ಬೇಸರವಿದೆ ಎಂದರು.‌

ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಜಿನರಾಜ್ ಅರಿಗ, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ ಜೈನ್, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ಡಿಸಿಸಿ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ ಕೆ ಶಾಹುಲ್ ಹಮೀದ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಡಿಸಿಸಿ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಸುರೇಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಪೂಜಾರಿ ಜೋರಾ, ಪುರಸಭಾ ಸದಸ್ಯರಾದ ಲೋಲಾಕ್ಷ ಶೆಟ್ಟಿ, ಬಿ ವಾಸು ಪೂಜಾರಿ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ ವಿ ಕೋಟ್ಯಾನ್, ಚಂದ್ರಶೇಖರ ಕರ್ಣ, ಬಾಲಕೃಷ್ಣ ಅಂಚನ್, ಪಂಚಾಯತ್ ಅಧ್ಯಕ್ಷರಾದ ಯು ಉಮೇಶ್ ಕುಲಾಲ್, ರಜನಿ ಮೂಲ್ಯ, ಉಪಾಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್, ಸದಸ್ಯರಾದ ಸುವರ್ಣ ಕುಮಾರ್ ಜೈನ್, ಫಾರೂಕ್, ಯೋಗೀಶ್ ಬಂಗೇರಾ, ಲವೀನಾ ಶಾಂತಿ ಡಿಸೋಜ, ಮುಹಮ್ಮದ್ ಎಂ, ಸುರೇಶ್ ಪೂಜಾರಿ, ಅಬ್ದುಲ್ ರಝಾಕ್, ವೀರೇಂದ್ರ ಅಮೀನ್, ಲಕ್ಷ್ಮೀನಾರಾಯಣ, ಶರ್ಮ, ಪುಷ್ಪ, ಲೀನಾ ರೋಡ್ರಿಗಸ್, ಶೋಮಲ್ ಲೋಬೋ, ಅಬ್ದುಲ್ ಹನೀಫ್, ಉದಯ ಪೂಜಾರಿ, ಮುಸ್ತಫಾ, ಪ್ರಭಾಕರ್ ಅಮೀನ್, ಜನಾರ್ದನ, ಮಾಣಿಕ್ ರಾಜ್, ತನ್ವೀರ್ ತಾಹಾ, ಅಬ್ದುಲ್ ಖಾದರ್ ಸಲಿ, ಮೊಹಮ್ಮದ್ ಶರೀಫ್, ಪ್ರಮುಖರಾದ ಸುದರ್ಶನ್ ಜೈನ್, ಚಂದ್ರಶೇಖರ ಪೂಜಾರಿ, ಸಿದ್ದೀಕ್ ಸರವು, ಪ್ರವೀಣ್ ರೋಡ್ರಿಗಸ್ ವಗ್ಗ, ವೆಂಕಪ್ಪ ಪೂಜಾರಿ, ವಿಜಯ ಅಲ್ಲಿಪಾದೆ, ಶಬೀರ್ ಸಿದ್ದಕಟ್ಟೆ, ಡೆಂಝಿಲ್ ನೊರೊನ್ಹಾ, ಅಲ್ತಾಫ್ ಸಂಗಬೆಟ್ಟು, ತ್ರಿಶಾಲಾ ಸುವರ್ಣ ಕುಮಾರ್ ಜೈನ್, ಬೇಬಿ ಸುವರ್ಣ, ಗಿರಿಜಾ ಕೃಷ್ಣಪ್ಪ, ಸುನೀತಾ ರೋಡ್ರಿಗಸ್, ಕಿಶೋರ್, ಸತೀಶ್, ಆಸಿಫ್, ಮುಸ್ತಫ ಪಲ್ಲಿಗುಡ್ಡೆ, ರಹೀಂ ಮೈಂದಾಳ, ಚಂದ್ರಕಾಂತ, ಮಹಾಬಲ ನಾಯಕ್, ಪ್ರಸಾದ್, ದಿನೇಶ್ ಕುಮಾರ್, ಜೋಯ್ ವಾಲ್ಟರ್ ಡಿಸೋಜ, ಪ್ರವೀಣ್ ವಾಲ್ಟರ್ ಡಿಸೋಜ, ಸುಲೈಮಾನ್ ಮೈಂದಾಳ, ಯೂಸುಫ್ ಮೈಂದಾಳ, ಸಂತೋಷ್ ಪೂಜಾರಿ ಕುಳಾಲ್, ಶ್ರೀನಿವಾಸ್, ಲವಣ್, ಲಕ್ಷ್ಮಣ್ ಕುಲಾಲ್ ಅಗ್ರಹಾರ ಬೀದಿ, ಸುಮಿತ್ರಾ ಮೋಹನ್ ಅಲ್ಲಿಪಾದೆ, ಕೊಗ್ಗಣ್ಣ, ಪ್ರಭಾಕರ ಆಚಾರ್ಯ, ಪುರುಷೋತ್ತಮ ಬಂಗೇರ, ರಾಜೇಶ್ ಪಾದೆಕೋಡಿ, ವಿನೋದ್ ಕುಂಟಾಲಪಲ್ಕೆ, ಸದಾನಂದ ನಾವೂರು, ವಾಸು ಪೂಜಾರಿ ನಾವೂರು, ಸದಾನಂದ ಶೆಟ್ಟಿ ಇಚ್ಚಿಲಗುತ್ತು, ಇಸ್ಮಾಯಿಲ್, ಸಿದ್ದೀಕ್, ಸತೀಶ್, ಪುರುಷೋತ್ತಮ, ಖಲೀಲ್ ಎನ್ ಸಿ ರೋಡು, ಯಾಕೂಬ್ ಸಾಹೇಬ್, ಶಿಫನ್ ಕಾವಳಕಟ್ಟೆ, ಚಂದ್ರಹಾಸ, ವಸಂತ ಶೆಟ್ಟಿ, ಜನಾರ್ದನ ಆಚಾರ್ಯ, ಪ್ರಭಾಕರ ಆಚಾರ್ಯ, ವಸಂತ ಶೆಟ್ಟಿ, ಗಫಾರ್ ಸಾಹೇಬ್ ಕಾವಳಕಟ್ಟೆ, ಸಾಲಿಯಾ ಕಾವಳಕಟ್ಟೆ, ಉಮ್ಮರ್ ಶರೀಫ್, ಅರುಣ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಗದೀಶ್ ಕೊಯಿಲ ಸ್ವಾಗತಿಸಿ, ರಾಜೀವ್ ಶೆಟ್ಟಿ ಎಡ್ತೂರು ಪ್ರಸ್ತಾವನೆಗೈದರು. ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

Gayathri SG

Recent Posts

ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್‌ ವಿಶ್ವ ಸಾವಂತ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರನ…

27 mins ago

ʼರಾಹುಲ್ ಮತ್ತು ನಾನು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿ ಲಾಭವಾಗುತ್ತಿತ್ತುʼ

ದೇಶದ್ಯಾಂತ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ…

29 mins ago

ಪೊಲೀಸ್‌ ಕಸ್ಟಡಿಯಲ್ಲಿಯೇ ದಂಪತಿ ಆತ್ಮಹತ್ಯೆ: ರೊಚ್ಚಿಗೆದ್ದು ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

53 mins ago

ಆತ್ಮಹತ್ಯೆಗೆ ಮುನ್ನ ನಟ ಚಂದು ಲಾಸ್ಟ್​ ಮೆಸೇಜ್​ ಇದು

ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್​…

1 hour ago

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆ ಸಾಧ್ಯತೆ

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

1 hour ago

ಜೀವ -ಜಲ ಉಳಿಸಲು ಸ್ವಯಂ ಪ್ರೇರಣೆಯ ಪಾಲ್ಗೊಳ್ಳುವಿಕೆ ಮುಖ್ಯ: ಪ್ರಭಾಕರ ಶರ್ಮಾ

ನೀರಿನ ಮಿತ ಬಳಕೆ, ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು  ಸ್ವಯಂ ಪ್ರೇರಿತರಾಗಿ ತಮ್ಮ ಇತಿ ಮಿತಿಯಲ್ಲಿ ಸಣ್ಣ ಕೊಡುಗೆಗಳನ್ನು ನೀಡುವ ಮೂಲಕ…

1 hour ago