Categories: ಮಂಗಳೂರು

ಮಾಜಿ ಶಾಸಕ ಬಾವ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬುದು ಸುಳ್ಳುಸುದ್ದಿ: ಕಾಂಗ್ರೆಸ್‌ ಸ್ಪಷ್ಟನೆ

ಮಂಗಳೂರು:  ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಮತ್ತೊಮ್ಮೆ  ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಗುರುಪುರ ಬ್ಲಾಕ್‌ ಕಾಂಗ್ರೆಸ್‌ ಸ್ಪಷ್ಟನೆ ನೀಡಿದೆ.  ಮೊಹಿಯುದ್ದೀನ್ ಬಾವ  ಅವರ ಜೊತೆ ಗುರುತಿಸಿಕೊಂಡು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಹಲವರನ್ನು ಕೆಲ ದಿನಗಳ ಹಿಂದೆಯೇ ಕಾಂಗ್ರೆಸ್‌ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇದೀಗ ಮೊಹಿಯುದ್ದೀನ್ ಬಾವ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಡಿರುವ ಕುರಿತು  ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರು  ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗುರುಪುರ ಬ್ಲಾಕ್‌ ಕಾಂಗ್ರೆಸ್‌ ಸ್ಪಷ್ಟನೆ ನೀಡಿದೆ.

ಮೊಹಿಯುದ್ದೀನ್ ಬಾವ ಅವರು ತಮ್ಮ ವೈಫಲ್ಯದಿಂದ ಟಿಕೇಟ್‌ ತಪ್ಪಿದ ಕಾರಣಕ್ಕಾಗಿ ಪಕ್ಷ ತೊರೆದು ಬೇರೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಬಾವ ಅವರು ಬೇರೆ ಪಕ್ಷ ಸೇರ್ಪಡೆಯಾಗುವ ಮುಂಚಿತವಾಗಿ ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ  ನೀಡಿದ್ದು,  ನಂತರದಲ್ಲಿ   ಕಾಂಗ್ರೆಸ್‌ ನಾಯಕರ ವಿರುದ್ಧ ಅತ್ಯಂತ ಕೀಳು ಅಭಿರುಚಿಯ ಮಾತುಗಳನ್ನಾಡಿ ಹೀಯಾಳಿಸಿದ್ದು ತಿಳಿದಿರುವ ವಿಚಾರವಾಗಿದೆ ಎಂದು ಗುರುಪುರ  ಕಾಂಗ್ರೆಸ್‌ ಬ್ಲಾಕ್‌ ಕಾಂಗ್ರೆಸ್‌ ತಿಳಿಸಿದೆ.

ಈ ಪ್ರಕಟಣೆಯ ಮೂಲಕ ತಿಳಿಯಪಡಿಸುವುದೇನೆಂದರೆ, ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಕೆಲಸ ಮಾಡಿರುವ ಬಾವ ಅವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡುವ ಪ್ರಮೇಯವೇ ಇರುವುದಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅವರು ನಮ್ಮ ನಾಯಕರ ಜೊತೆಗಿನ ಫೋಟೋಗಳು ಹಳೆಯದಾಗಿದೆ. ಹೀಗಾಗಿ ಕಾರ್ಯಕರ್ತರು ಯಾವುದೇ ನಕಲಿ ಸುದ್ದಿಗಳ ಕುರಿತು ಅನಗತ್ಯ ಚರ್ಚೆ ಮಾಡದಿರಲು ವಿನಂತಿಸಲಾಗಿದೆ. ಕಾರ್ಯಕರ್ತರೇ ನಮ್ಮ ಪಕ್ಷದ ಪಾಲಿನ ಶಕ್ತಿ ಹಾಗೂ ಕಾರ್ಯಕರ್ತರ ವಿಶ್ವಾಸಕ್ಕೆ ದೋಹವೆಸಗಿದವರನ್ನು ಪಕ್ಷಕ್ಕೆ ಮರಳಿ ಸೇರ್ಪಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರಕಟಣೆ ನೀಡಿದೆ.

Ashika S

Recent Posts

ಶಬ್ದ ಮಾಲಿನ್ಯದಿಂದ ನಿದ್ರೆಗೆ ಭಂಗ: ಹೃದಯಾಘಾತದ ಆತಂಕ ಹೆಚ್ಚಳ

ಇಂದು ಶಬ್ದ ಮಾಲಿನ್ಯ ಮಾತ್ರವಲ್ಲದೆ ಪ್ರತಿಯೊಂದು ಮಾಲಿನ್ಯವು ಪರಿಸರದ ಗುಣಮಟ್ಟಕ್ಕೆ ಮಾತ್ರವಲ್ಲದೆ ಮನುಷ್ಯನ ಜೀವನಕ್ಕೂ ಗಂಭೀರ ಅಪಾಯವಾಗಿದೆ. ಶಬ್ದ ಮಾಲಿನ್ಯವು…

24 mins ago

ಮಂಗಳೂರು: ಗುದನಾಳದಲ್ಲಿ ಬಚ್ಚಿಟ್ಟು 54 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ !

ಗುದನಾಳದಲ್ಲಿ ಬಚ್ಚಿಟ್ಟು 54 ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.…

43 mins ago

ಮತ್ತೊಂದು ದಾಖಲೆ ಬರೆದ ಕೂಲ್‌ ಕ್ಯಾಪ್ಟನ್ ಎಂ.ಎಸ್​. ಧೋನಿ

ಐಪಿಎಲ್ ಇತಿಹಾಸದಲ್ಲಿ ಕೂಲ್‌ ಕ್ಯಾಪ್ಟನ್ ಎಂ.ಎಸ್​. ಧೋನಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಕಳೆದ ದಿನ (ಏ.28) ಚೆನ್ನೈನ ಎಂ.ಎ. ಚಿದಂಬರಂ…

57 mins ago

ಎಷ್ಟು ದಿನ ಮುಸ್ಲಿಮರ ಬಗ್ಗೆ ಭಯ ಹುಟ್ಟಿಸುತ್ತೀರಿ: ಮೋದಿಗೆ ಓವೈಸಿ ಪ್ರಶ್ನೆ

ಮುಸ್ಲಿಮರು ಶೀಘ್ರದಲ್ಲೇ ಬಹುಸಂಖ್ಯಾತರಾಗುತ್ತಾರೆ ಎಂಬ ಭಯವನ್ನು ನರೇಂದ್ರ ಮೋದಿ ಇನ್ನೂ ಹಿಂದೂಗಳಲ್ಲಿ ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆಲ್ ಇಂಡಿಯಾಮಜ್ಲಿ ಸ್-ಎ-ಇತ್ತೆಹಾದುಲ್…

1 hour ago

ಛತ್ತೀಸ್‌ಗಢದಲ್ಲಿ ಭೀಕರ ರಸ್ತೆ ಅಪಘಾತ: 9 ಮಂದಿ ದುರ್ಮರಣ, 23 ಮಂದಿಗೆ ಗಾಯ

ಛತ್ತೀಸ್‌ಗಢದ ಬೆಮೆತಾರಾದ ಕಥಿಯಾ ಪೆಟ್ರೋಲ್ ಪಂಪ್ ಬಳಿ ಪಿಕಪ್ ಟ್ರಕ್ ರಸ್ತೆ ಬದಿ ನಿಲ್ಲಿಸಿದ್ದ ಟಾಟಾ 407 ವಾಹನಕ್ಕೆ ಡಿಕ್ಕಿ…

2 hours ago

ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದ ಮಗು: ವಿಡಿಯೋ ವೈರಲ್‌

ತಮಿಳುನಾಡಿನ ಚೆನ್ನೈನ ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ  ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ಏಳು ತಿಂಗಳ ಮಗುವೊಂದು ವಿಂಡೋ ಪೋರ್ಚ್‌  ಮೇಲೆ ಬಿದ್ದ ಘಟನೆ ನಡೆದಿದೆ. 

2 hours ago