Categories: ಮಂಗಳೂರು

ಮಂಗಳೂರು: ಮೀನುಗಾರಿಕಾ ಧಕ್ಕೆ ಪ್ರದೇಶಕ್ಕೆ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಭೇಟಿ

ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ಅವರು ಸೋಮವಾರ ಬಂದರು ಮೀನುಗಾರಿಕಾ ಧಕ್ಕೆ ಪ್ರದೇಶಕ್ಕೆ ಭೇಟಿ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಮೀನುಗಾರಿಕಾ ಮುಖಂಡರನ್ನು ಮತ್ತು ಕಾರ್ಮಿಕರನ್ನು ಭೇಟಿ ಮಾಡಿ ಅವರ ಜೊತೆ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕೆಂದು ವಿನಂತಿ ಮಾಡಿದರು. ಅದಲ್ಲದೆ ಅಲ್ಲಿರುವ ಸಮಸ್ಯೆಗಳ ಬಗ್ಗೆ, ಕಾರ್ಮಿಕರ ಸಮಸ್ಯೆ ಮತ್ತು ಬಂದರು ಅಭಿವೃದ್ಧಿಗೆ ಸಂಬಂದಿಸಿದ ವಿಷಯಗಳ ಬಗ್ಗೆ ಅವರಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾಧ್ಯಮದ ಮಿತ್ರರೊಂದಿಗೆ ಮಾತನಾಡುತ್ತಾ ಲೋಬೊ, ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಬರಲು ಬಂದರು ಮತ್ತು ಮೀನುಗಾರಿಕೆ ಉದ್ಯಮ ಮುಖ್ಯ ಕಾರಣ. ನಾನು ಶಾಸಕನಾಗಿದ್ದಾಗ ಸ್ಮಾರ್ಟ್ ಸಿಟಿ ಯೋಜನೆ ಬಂದಿತ್ತು. ಇದೊಂದು ಕೇಂದ್ರ ಸರಕಾರದ ಯೋಜನೆ. ಪ್ರಥಮ ಪ್ರಯತ್ನದಲ್ಲಿ ಮಂಗಳೂರಿಗೆ ಅವಕಾಶ ಸಿಗಲಿಲ್ಲ. ಬಿಜೆಪಿ ಸಂಸದರು ಇದ್ದರೂ ಏನೂ ಪ್ರಯೋಜನವಾಗಿಲ್ಲ. ದ್ವಿತೀಯ ಪ್ರಯತ್ನದಲ್ಲಿ ನಾನು ಬಂದರು ಮತ್ತು ಮೀನುಗಾರಿಕ ಉದ್ಯಮವನ್ನು ಸೇರಿಸಿ ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಬರಬೇಕೆಂದು ಪ್ರಯತ್ನ ಮಾಡಿದ ಫಲವಾಗಿ ಯೋಜನೆ ಮಂಜೂರಾಗಿದೆ. ಆದರೆ ಯೋಜನೆ ಬಂದ ನಂತರ ಬಂದರು ಪ್ರದೇಶವನ್ನು ಸಂಪೂರ್ಣವಾಗಿ ಬಿಜೆಪಿ ಯ ಜನಪ್ರತಿನಿದಿಗಳು ಕಡೆಗಣಿಸಿದ್ದಾರೆ.

ಮೀನುಗಾರಿಕೆಗೆ ಹೆಚ್ಚಿನ ಒತ್ತನ್ನು ಕೊಟ್ಟಿಲ್ಲ. ಕೇವಲ ಆಶ್ವಾಸನೆ ಕೊಟ್ಟು ಜನರನ್ನು ಓಲೈಸಿದ್ದಾರೆ.ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರ ಬಂದರೆ ಮೀನುಗಾರಿಕೆ ಧಕ್ಕೆ ಅಭಿವೃದ್ಧಿ, ಇಲ್ಲಿನ ಕಾರ್ಮಿಕರ ಸಮಸ್ಯೆ ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ವಿಶೇಷ ಆದ್ಯತೆಯ ಮೇರೆಗೆ ಅಭಿವೃದ್ಧಿಗೆ ಒತ್ತು ಕೊಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಪ್ರದೇಶ ಕಾಂಗ್ರೆಸ್ ಒಬಿಸಿ ಉಪಾಧ್ಯಕ್ಷ ಚೇತನ್ ಬೆಂಗ್ರೆ, ಮಾಜಿ ಮೇಯರ್ ಅಶ್ರಫ್,ಜಿಲ್ಲಾ ಕಾಂಗ್ರೆಸ್ ಮೀನುಗಾರಿಕಾ ಘಟಕ ಅಧ್ಯಕ್ಷ ಹರೀಶ್ ಅಮೀನ್ ಬೆಂಗ್ರೆ, ವಾರ್ಡ್ ಅಧ್ಯಕ್ಷ ಅಶ್ರಫ್ ಅಬೂಬಕ್ಕರ್, ಮಾಜಿ ಅಧ್ಯಕ್ಷ ಆಸೀಫ್ ಅಹ್ಮದ್ ಬೆಂಗ್ರೆ, ಅಸ್ಲಾಂ ಬೆಂಗ್ರೆ, ರಾಜೇಶ್ ಅಮೀನ್, ಮಾಜಿ ಕಾರ್ಪೊರೇಟರ್ ಶಕುಂತಲಾ ಬೆಂಗ್ರೆ, ಸತೀಶ್ ಕೋಟ್ಯಾನ್, ರಮಾನಂದ ಪೂಜಾರಿ, ಇಮ್ರಾನ್ ಎ. ಆರ್., ಮಜೀದ್ ಪಿ. ಪಿ., ಸವಾನ್ ಜೆಪ್ಪು,ಸರಿತಾ ಪುತ್ರನ್, ಸಲಿಂ ಪಾಂಡೇಶ್ವರ್ ಮೊದಲಾದವರು ಉಪಸ್ಥಿತರಿದ್ದರು.

Gayathri SG

Recent Posts

ಇಂದು ಬಿರುಗಾಳಿ ಸಹಿತ ಮಳೆ ಸಾಧ್ಯತೆ : ಹವಮಾನ ಇಲಾಖೆ ಎಚ್ಚರ

ದೇಶಾದ್ಯಂತ ಬಿರು ಬಿಸಿಲಿನ ಬೇಗೆಯಲ್ಲಿ ಬೆಂದ ಜನರಿಗೆ ಇದು ಸಿಹಿ ಸುದ್ದಿ ಆದರೆ ಎಚ್ಚರಿಕೆ ವಹಿಸುವುದು ಅಗತ್ಯ.ದೇಶದ ಹಲವು ರಾಜ್ಯಗಳಲ್ಲಿ…

8 mins ago

ಮತದಾರರು ಮತ್ತು ಜಿಲ್ಲಾಡಳಿತಕ್ಕೆ ಆಲಗೂರ್ ಅಭಿನಂದನೆ

ಜಿಲ್ಲೆಯಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆ ಶಿಸ್ತು ಮತ್ತು ಶಾಂತಿ-ಸುವ್ಯವಸ್ಥೆಯಿಂದ ಕೂಡಿದ್ದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಸಂತಸ…

17 mins ago

ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ : ಪ್ರಕರಣ ದಾಖಲು

ನಗರದ ವೈದ್ಯಕೀಯ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೊ ಚಿತ್ರೀಕರಿಸಿದ 17 ವರ್ಷದ ಬಾಲಕನೊಬ್ಬನನ್ನು ವಶಕ್ಕೆ ಪಡೆದು ಬಾಲನ್ಯಾಯ…

34 mins ago

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಅಂತ್ಯ : ಕ್ಷೇತ್ರಗಳಲ್ಲಿ ಎಷ್ಟು ಮತದಾನ

ಕರ್ನಾಟಕದಲ್ಲಿಂದು (ಮೇ 07) ಲೋಕಸಭೆಗೆ 2ನೇ ಹಂತದಲ್ಲಿ ಮತದಾನ ನಡೆದಿದ್ದು, ಬಾಕಿ ಉಳಿದಿದ್ದ14 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, 227 ಅಭ್ಯರ್ಥಿಗಳ…

46 mins ago

ಇಂದಿನ ರಾಶಿ ಫಲ : ಈ ರಾಶಿಯವರಿಗೆ ಉದ್ಯೋಗದಲ್ಲಿ ಲಾಭ

ಚಂದ್ರನು ವೃಷಭ ರಾಶಿಯಿಂದ ಬುಧವಾರ ರಾತ್ರಿ 07:20ಕ್ಕೆ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ವೃಷಭ, ಕಟಕ,ಸಿಂಹ, ವೃಶ್ಚಿಕ, ಧನಸ್ಸು, ಮೀನ…

1 hour ago

ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡ ಯಶ್‌ ಹೀರೋಯಿನ್‌!

ಸಿನಿಮಾ ರಂಗದಲ್ಲಿ ಮತ್ತೊಂದು ವಿಚ್ಛೇದನ ಖಚಿತವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

9 hours ago