News Karnataka Kannada
Monday, April 22 2024
Cricket
ಮಂಗಳೂರು

ಚಿಣ್ಣರ ಚಾವಡಿ ವಾಮಂಜೂರು: “ಗಿಡ ನೆಡಿ ಸೆಲ್ಫಿ ಹೊಡಿ” ಅಭಿಯಾನ

Chinnara Chavadi Vamanjoor: "Plant a Sapling Selfie Hodi" Campaign
Photo Credit : News Kannada

ಮಂಗಳೂರು: ಚಿಣ್ಣರ ಚಾವಡಿ ವಾಮಂಜೂರು ಇದರ ಆಶ್ರಯದಲ್ಲಿ ವನಮೋತ್ಸವದ ಅಂಗವಾಗಿ “ಗಿಡ ನೆಡಿ ಸೆಲ್ಫಿ ಹೊಡಿ” “ಸೆಲ್ಫಿ ವಿಥ್ ಫ್ಯೂಚರ್” ಎಂಬ ಮಕ್ಕಳ ಭವಿಷ್ಯಕ್ಕೊಂದು ಗಿಡ ನೆಡುವ ಅಭಿಯಾನದ ಉದ್ಘಾಟನೆಯು ತಿರುವೈಲು ಕೊರ್ದಬ್ಬು ದೈವಸ್ಥಾನದ ಬಳಿ ಇಂದು ನಡೆಯಿತು.

ಈ ಅಭಿಯಾನವನ್ನು ಅಂಜುಮನ್ ಆಂಗ್ಲ ಮಾಧ್ಯಮ ಶಾಲೆ ಜೋಕಟ್ಟೆ ಇದರ ಮುಖ್ಯ ಶಿಕ್ಷಕರಾದ ಶ್ರೀಮತಿ ವಿನಯ ಇವರು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಮರಗಳು ಇಂದು ಪರಿಸರದಿಂದ ಮಾಯವಾಗುತ್ತಿದೆ. ಮನೆಯಿಂದ ಹೊರ ಬಂದರೆ ಕಟ್ಟಡಗಳು,ಕಾಂಕ್ರೀಟ್ ರಸ್ತೆಗಳೇ ತುಂಬಿವೆ ಇದರ ಪರಿಣಾಮ ಮಳೆ ಇಲ್ಲದೆ ಬರ,ಮಳೆ ಬಂದರೆ ಧಾರಾಕಾರ ಸುರಿದು ನೆರೆಯಿಂದ ಕೊಚ್ಚಿಕೊಂಡು ಹೋಗುವ ಅಸಮಾತೋಲನದ ಸ್ಥಿತಿ ಪರಿಸರದಲ್ಲಿ ನಿರ್ಮಾಣವಾಗಿದೆ.

ಈಗಾಗಲೇ ಜನತೆಯ ದುರಾಸೆಯಿಂದ ಪರಿಸರ ನಾಶವಾಗುತ್ತಿದ್ದು ಅನೇಕ ಮರಗಳು ಅಳಿವಿನ ಅಂಚಿನಲ್ಲಿವೆ ಮತ್ತು ಅನೇಕ ಮರಗಳು ಅಳಿದಿವೆ. ಆದರೆ ಮುಂದಿನ ದಿನಗಳಲ್ಲಿ ಮರಗಳ ವಿವಿಧ ತಳಿಗಳನ್ನು ಮ್ಯೂಸಿಯಂನಲ್ಲಿ ನೋಡುವಂತಾಗಿ ಮಾನವ ಜನಾಂಗ ಉಸಿರಾಡಲು ಕೂಡ ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಬಹುದು ಇಂತಹ ಭವಿಷ್ಯದ ದಾರುಣ ಸ್ಥಿತಿಯಿಂದ ಈಗಿನ ಮಕ್ಕಳ ಭವಿಷ್ಯವನ್ನು ಕಾಪಾಡಬೇಕಾದರೆ ಮಕ್ಕಳ ಭವಿಷ್ಯಕ್ಕೊಂದು ಗಿಡವನ್ನು ಈಕೂಡಲೇ ನೆಡಬೇಕು ಮತ್ತು ವಿವಿಧ ತಳಿಯ ಮರಗಳನ್ನು ಕಾಪಾಡಬೇಕೆಂದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ಮಾಲತಿ ಚಿಣ್ಣರ ಚಾವಡಿಯ ಚಿಣ್ಣರಾದ ವಜ್ರೇಶ್ ಕಂಬಳದ ಕೋಡಿ, ಅದಿತಿ ಕೆತ್ತಿಕಲ್ಲು,ಐಶ್ವರ್ಯ ದೇವಸಬೆಟ್ಟು, ಕೀರ್ತನ ಮಜಲು ಮತ್ತು ಚಿಣ್ಣರ ಚಾವಡಿಯ ಪ್ರೋತ್ಸಾಹಕರಾದ ಮಹೇಶ್ ಬೊಂಡಂತಿಲ, ಜೀವಿತ ದೇವಸಬೆಟ್ಟು , ಕೀರ್ತನ್ ಶಂಕೇಸಬೆಟ್ಟು, ಜೀವನ್ ಸಂಕೇಶಬೆಟ್ಟು, ನಿಶಾಂತ್ ಸಿಲ್ವರ್ ಕೊಡಿ, ಕಾರ್ತೀಶ್ ಪೂಜಾರಿ ಸಂಕೇಶಬೆಟ್ಟು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು